ಮಡಿಕೇರಿ, ನ. ೧೫: ನಗರದ ಡೈರಿ ಫಾರಂನಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಶೌಚಾಲಯದ ಮಲ - ಮೂತ್ರ ಹಾಗೂ ಅಡುಗೆ ಮನೆಯ ತ್ಯಾಜ್ಯಗಳನ್ನು ಚರಂಡಿಗೆ ಹರಿಯ ಬಿಡಲಾಗುತ್ತಿದ್ದು, ಇದರಿಂದಾಗಿ ಇಡೀ ವಾತಾವರಣವೇ ವಾಸನೆಯಿಂದ ಕೂಡಿದ್ದು, ಇದನ್ನು ಆಕ್ಷೇಪಿಸಿ ಅಕ್ಕಪಕ್ಕದ ನಿವಾಸಿಗಳು ಇಂದು ವಸತಿ ನಿಲಯಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ಡೈರಿ ಫಾರಂನಲ್ಲಿರುವ ಪಿ.ಎಂ. ಸಂದೀಪ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯ ಕಾರ್ಯಾಚರಿಸುತ್ತಿದೆ. ತಿಂಗಳಿಗೆ ರೂ. ೧.೩೫ ಲಕ್ಷ ಬಾಡಿಗೆ ಆಧಾರದಲ್ಲಿ ಕಾರ್ಯಾಚರಿಸುತ್ತಿರುವ ಈ ವಸತಿ ನಿಲಯದಲ್ಲಿ ೧೩೦ ಮಂದಿ ವಿದ್ಯಾರ್ಥಿನಿಯರು ಇದ್ದಾರೆ.

ಇವರುಗಳಿಗಾಗಿ ಕಟ್ಟಡದ ಆವರಣದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆಯಾದರೂ ಶೌಚಗುಂಡಿ ನಿರ್ಮಿಸದೆ ಪೈಪ್ ಮುಖೇನ ಸನಿಹದಲ್ಲೇ ಇರುವ ಚರಂಡಿಗೆ ಬಿಡಲಾಗಿದೆ. ಪೈಪ್ ಅಲ್ಲಲ್ಲಿ ತುಂಡರಿಸಿ ಚರಂಡಿ ಸಂಪೂರ್ಣ ಮಲಿನವಾಗಿದೆ. ಇದರೊಂದಿಗೆ ಅಡುಗೆ ಮನೆ, ಪಾತ್ರೆ ಹಾಗೂ ಕೈ ತೊಳೆಯುವ ಜಾಗದ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗಿದ್ದು, ಚರಂಡಿಯಲ್ಲಿ ನೀರು ಕಟ್ಟಿಕೊಂಡು ವಾಸನೆ ಬೀರುತ್ತಿದೆ.

ಸದಸ್ಯರ ಸ್ಪಂದನವಿಲ್ಲ...!

ಈ ಸಮಸ್ಯೆ ಬಗ್ಗೆ ಸ್ಥಳೀಯರು ಕಳೆದ ಮೂರು ವರ್ಷಗಳಿಂದ ಕಟ್ಟಡದ ಮಾಲೀಕರಿಗೆ ಮನವಿ ಸಲ್ಲಿಸುತ್ತಿದ್ದ ರಾದರು ಮಾಲೀಕರು ಚರಂಡಿ ಸ್ವಚ್ಛಗೊಳಿಸಿ ಸುಮ್ಮನಾಗುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದರು. ಅಲ್ಲದೆ ಈ ಬಗ್ಗೆ ವಾರ್ಡ್ನ ಸದಸ್ಯರಾಗಿರುವ ನಗರಸಭೆ ಮಾಜಿ ಅಧ್ಯಕ್ಷರೂ ಆಗಿರುವ ಅನಿತಾ ಪೂವಯ್ಯ ಹಾಗೂ ಪೌರಾಯುಕ್ತರ ಗಮನಕ್ಕೆ ತಂದರೂ ಯಾವುದೇ ಸ್ಪಂದನ ನೀಡಿಲ್ಲವೆಂದು ಆರೋಪಿಸಿದರು. ಹಾಗಾಗಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಅವರಿಗೆ ಕರೆ ಮಾಡಿ ಹೇಳಿದ ಕೂಡಲೇ ಅರುಣ್‌ಶೆಟ್ಟಿ ಅವರು ಆಗಮಿಸಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಅಧಿಕಾರಿ ಭೇಟಿ

ಸಮಸ್ಯೆ ಆಲಿಸಿಕೊಂಡ ಅರುಣ್ ಶೆಟ್ಟಿ ಅವರು ಸ್ಥಳಕ್ಕಾಗಮಿಸಿ, ಪರಿಶೀಲಿಸಿದ ನಂತರ ತಾಲೂಕು ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅರುಣ್‌ಶೆಟ್ಟಿ ಅವರು ಆಗಮಿಸಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಅಧಿಕಾರಿ ಭೇಟಿ

ಸಮಸ್ಯೆ ಆಲಿಸಿಕೊಂಡ ಅರುಣ್ ಶೆಟ್ಟಿ ಅವರು ಸ್ಥಳಕ್ಕಾಗಮಿಸಿ, ಪರಿಶೀಲಿಸಿದ ನಂತರ ತಾಲೂಕು ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಕ್ತಪಡಿಸಿದರಲ್ಲದೆ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳಲ್ಲಿ ಹೇಳಿಕೊಂಡರಲ್ಲದೆ, ಸರಿಪಡಿಸದೇ ಹೋದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು.

- ಸಂತೋಷ್