ಮಡಿಕೇರಿ, ನ. ೧೫: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ೨೦೨೪-೨೫ನೇ ಸಾಲಿಗೆ ಜವಳಿ ಕ್ಷೇತ್ರಕ್ಕೆ ಸಂಬAಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್ಎಂಇ) ಘಟಕಗಳನ್ನು ಸ್ಥಾಪಿಸಲು ರಾಜ್ಯ ವಲಯದ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆ, ವಿಶೇಷ ಘಟಕ ಯೋಜನೆಯಡಿ ಭೌತಿಕ-೩ ಹಾಗೂ ಗಿರಿಜನ ಉಪಯೋಜನೆಯಡಿ ಭೌತಿಕ ೧ ಗುರಿಯನ್ನು ನಿಗದಿಪಡಿಸಿ ಯೋಜನೆಯನ್ನು ಅನುಷ್ಠಾನ ಗೊಳಿಸುವಂತೆ ಆದೇಶ ನೀಡಲಾಗಿದೆ.
ಅದರಂತೆ ಈ ಯೋಜನೆಯಡಿ ಸ್ಥಾಪಿತವಾಗುವ ಜವಳಿ, ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಸರ್ಕಾರದ ಸಹಾಯಧನವನ್ನು ಶೇ. ೭೫ ಅಥವಾ ಗರಿಷ್ಠ ೨ ಕೋಟಿಗಳಿಗೆ ಮಿತಿಗೊಳಿಸ ಲಾಗುವುದು. ಸಾಲಾಧಾರಿತ ಬಂಡವಾಳ ಸಹಾಯಧನ ಶೇ. ೭೫ ಹಾಗೂ ಘಟಕಗಳು ಬ್ಯಾಂಕ್ನಿAದ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಶೇ. ೧೫ ಒಟ್ಟಾರೆ ಸರ್ಕಾರದಿಂದ ಘಟಕಕ್ಕೆ ದೊರಕುವ ಸಹಾಯಧನ ಶೇ. ೯೦ ರಷ್ಟು ಇದ್ದು ಜಿಲ್ಲೆಯಲ್ಲಿ ಜವಳಿ, ಸಿದ್ದ ಉಡುಪು ತಯಾರಿಕೆ ವೃತ್ತಿಯಲ್ಲಿ ಅನುಭವ ಇದ್ದು, ಹೊಸದಾಗಿ ಜವಳಿ, ಸಿದ್ಧ ಉಡುಪು ತಯಾರಿಕಾ ಘಟಕವನ್ನು ಸ್ಥಾಪಿಸಲು ಇಚ್ಚಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ಮುಖ್ಯಸ್ಥರನ್ನು ಹಾಗೂ ಕಚೇರಿ ದೂ. ೦೮೨೭೨-೨೨೦೩೬೫ ನ್ನು ಸಂಪರ್ಕಿಸಬಹುದು.