ಮಡಿಕೇರಿ, ನ. ೧೫ :ಶ್ರೀಮಂಗಲ ಸಮೀಪದ ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವರ ಉತ್ಸವವು ಇತ್ತೀಚೆಗೆ ವಿಜೃಂಭಣೆಯಿAದ ಜರುಗಿತು. ಸಂಜೆ ೬ ಗಂಟೆಗೆ ಆರಂಭವಾದ ಉತ್ಸವವು ದೇವರ ಅವಭೃತ ಸ್ನಾನ, ನೃತ್ಯ, ಪ್ರದಕ್ಷಿಣೆ ಹಾಗೂ ಅನ್ನಸಂತರ್ಪಣೆಯೊAದಿಗೆ ನೆರವೇರಿತು.

ಈ ಸಂದರ್ಭ ದೇವರಿಗೆ ಪಾರಂಪರಿಕವಾಗಿ ಸೇವೆ ಸಲ್ಲಿಸುತ್ತಿರುವ ಪುರೋಹಿತ ವರ್ಗ, ಮಡಿವಾಳ ಶೆಟ್ಟರು, ಮಂಗಳವಾದ್ಯದವರು ಹಾಗೂ ದೇವಿಯ ಬಗ್ಗೆ ಕೊಡವ ಭಾಷೆಯಲ್ಲಿ ಹಾಡು (ಸಾಹಿತ್ಯ) ರಚಿಸಿದ ಮುಕ್ಕಾಟಿರ ಮೌನಿ ನಾಣಯ್ಯ ಮತ್ತು ಸ್ವರ ಸಂಗೀತ ನೀಡಿದ ಸಣ್ಣುವಂಡ ನಿಶ್ಮಾ ರಕ್ಷಕ್ ಅವರನ್ನು ಸನ್ಮಾನಿಸಲಾಯಿತು. ದೇವಾಲಯದ ಪ್ರಮುಖರಾದ ಪಿ.ವಿ. ಲೋಕೇಶ್ ಮತ್ತಿತರರು, ಭಕ್ತಾದಿಗಳು ಪಾಲ್ಗೊಂಡಿದ್ದರು.