ಶನಿವಾರಸAತೆ, ನ. ೧೬: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಗ್ರಾಮ ಸಭೆ ಶುಕ್ರವಾರ ಹೆಮ್ಮನೆ ಗ್ರಾಮದ ಶ್ರೀ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಗ್ರಾಮಸಭೆ ಗದ್ದಲ - ಗೊಂದಲದಿAದಲೇ ಆರಂಭವಾಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರದ ಕಾರಣ ಕೆಲವರು ಅಸಮಾಧಾನಗೊಂಡು ಕೋರಂ ಇಲ್ಲದೇ ಸಭೆಯನ್ನು ನಡೆಸದೆ ಮುಂದೂಡುವAತೆ ಆಗ್ರಹಿಸಿದರು. ಸ್ವಲ್ಪ ಸಮಯ ಕಾದುನೋಡಿ ನಂತರ ಗ್ರಾಮಸ್ಥರು ಬಂದ ಮೇಲೆ ಸಭೆ ನಡೆಸುವುದೋ ಮುಂದೂಡುವುದೋ ನಿರ್ಧರಿಸೋಣ ಎಂದು ಸಮಾಧಾನಿಸಿದ ನೋಡೆಲ್ ಅಧಿಕಾರಿ ಮಿಲನ ಭರತ್ ಸಭೆಯಲ್ಲಿದ್ದವರ ಹಾಜರಾತಿ ತೆಗೆಯುವಂತೆ ತಿಳಿಸಿದರು. ಹಾಜರಾತಿ ನಂತರ ಸಭೆಯಲ್ಲಿ ೫೦ಕ್ಕೂ ಅಧಿಕ ಮಂದಿ ಇದ್ದುದರಿಂದ ಸಭೆ ಮುಂದುವರೆಯಿತು. ಸಭೆಗೆ ಹಾಜರಾದ ತಾಲೂಕು ಆಹಾರ ಇಲಾಖಾಧಿಕಾರಿ ಯಶಸ್ವಿನಿ, ಸೆಸ್ಕ್ ಅಧಿಕಾರಿ ಸುದೀರ್, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್, ಪಶುಚಿಕಿತ್ಸಾಲಯ ವೈದ್ಯಾಧಿಕಾರಿ ಡಾ. ಸತೀಶ್, ಅರಣ್ಯ ಇಲಾಖೆ ಅಧಿಕಾರಿ ವಿಕ್ರಮ್, ಕೃಷಿ ಇಲಾಖೆ ಸಹಾಯಕ ಅಧಿಕಾರಿ ಈಶ್ವರ್, ಕೊಡ್ಲಿಪೇಟೆ ಕಂದಾಯ ಇಲಾಖೆ ಗ್ರಾಮಾಧಿಕಾರಿ ಚೈತ್ರಾ, ಶನಿವಾರಸಂತೆ ಕಂದಾಯ ಇಲಾಖೆ ಗ್ರಾಮಾಧಿಕಾರಿ ಚಂದನ್, ತಾಲೂಕು ಪಂಚಾಯಿತಿ ಅಭಿಯಂತರ ಸಲೀಂ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸೋಮಣ್ಣ, ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಪ್ರದೀಪ್ ಕುಮಾರ್ ಮಾತನಾಡಿ, ತಮ್ಮ ತಮ್ಮ ಇಲಾಖೆಗಳ ಯೋಜನೆಗಳು, ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಸ್ಥರಾದ ಬೂದನೂರು ಧರ್ಮಣ್ಣ, ಕೆ.ಟಿ.ಹರೀಶ್, ಸುಬ್ರಮಣಿ, ಅಭಿ, ಪ್ರಸಾದ್, ಪ್ರಕಾಶ್, ಜಿತೇಂದ್ರ, ಮೋಹನ್, ಗ್ರಾಮ ಸಮಸ್ಯೆಗಳ ಬಗ್ಗೆ ಹಾಗೂ ಇತರ ಅಹವಾಲುಗಳನ್ನು ಸಭೆಯಲ್ಲಿ ಹೇಳುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡರು. ನೋಡೆಲ್ ಅಧಿಕಾರಿ ಸೋಮವಾರಪೇಟೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆ ವಿನಃ ಗೊಂದಲ ಮೂಡಿಸಬಾರದು. ವಿವಿಧ ಇಲಾಖೆಗಳ ಯೋಜನಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಪರವಾನಗಿ ತಂದು ಕೆರೆಯನ್ನು ಹರಾಜಿನಲ್ಲಿ ತೆಗೆದುಕೊಂಡರೆ ಮೀನುಗಾರಿಕೆ ಇಲಾಖೆ ಮೀನು ಮರಿಗಳನ್ನು ಉಚಿತವಾಗಿ ವಿತರಿಸುವುದು ಎಂದು ತಿಳಿಸಿ, ಇತರ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೇಷಾ ಹಿಂದಿನ ಗ್ರಾಮಸಭೆಯ ನಡಾವಳಿಯನ್ನು ಸಭೆಯಲ್ಲಿ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಮಾತನಾಡಿದರು. ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಮನು ಮಹಾಂತೇಶ್, ದೇವರಾಜ್, ನಿತಿನ್, ಕಾಂತರಾಜ್, ಪೂರ್ಣಿಮಾ ಕಿರಣ್, ಎಸ್.ಪಿ. ಭಾಗ್ಯಾ, ಜಾನಕಿ, ನಂದಿನಿ, ಬಿಲ್ ಸಂಗ್ರಾಹಕ ರವಿ, ಗ್ರಂಥಾಲಯ ಮೇಲ್ವಿಚಾರಕಿ ದಿವ್ಯಾ, ಸಿಬ್ಬಂದಿ ಶ್ರೀದೇವಿ, ವೀಣಾ, ಭಾರತಿ, ಸಂಜಯ್, ಮಂಜು, ಪಿಡಿಓ ಆಯೇಷಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.