ಮಡಿಕೇರಿ, ನ. ೧೬: ರಾಷ್ಟಿçÃಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ಪುಸ್ತಕ ಪ್ರದರ್ಶನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕೊಡಗು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅವರು ಚಾಲನೆ ನೀಡಿದರು.

ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾ.೨೦ ರವರೆಗೆ ಪುಸ್ತಕ ಪ್ರದರ್ಶನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದ್ದು, ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.

‘ಪುಸ್ತಕಗಳ ಅಧ್ಯಯನದಿಂದ ಸಮಾಜದ ವಿಚಾರಗಳು ತಿಳಿಯಲಿವೆ. ಇದರಿಂದ ಪ್ರತಿಯೊಬ್ಬರ ಜ್ಞಾನ ಸಂಪತ್ತು ಹೆಚ್ಚಾಗಲಿದೆ. ಜೊತೆಗೆ ಭಾಷೆಯನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದರು.

‘ಇಂದಿನ ಮೊಬೈಲ್ ಯುಗದಲ್ಲಿ ಹಲವು ವಿಚಾರಗಳನ್ನು ತಿಳಿದುಕೊಂಡರೂ ಸಹ ದಿನಪತ್ರಿಕೆ ಮತ್ತು ಪುಸ್ತಕ ಅಧ್ಯಯನದ ಮಹತ್ವ ಬೇರೆ ಎಂಬುದನ್ನು ಮರೆಯಬಾರದು, ಆ ನಿಟ್ಟಿನಲ್ಲಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಪುಸ್ತಕ ಅಧ್ಯಯನ ಒಳ್ಳೆಯದು ಎಂದು ಬಾಲಸುಬ್ರಹ್ಮಣ್ಯ ಅವರು ಪ್ರತಿಪಾದಿಸಿದರು.’

ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಅವರು ಮಾತನಾಡಿ ರಾಷ್ಟಿçÃಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಓದುಗರು ಬಳಸಿಕೊಳ್ಳುವಂತೆ ಕೋರಿದರು. ಗ್ರಂಥಾಲಯದಲ್ಲಿ ಸಾಹಿತಿಗಳು, ಕವಿಗಳ ಕಥೆ, ಕವನ, ಕಾದಂಬರಿಗಳು ಸೇರಿದಂತೆ ಹಲವು ಉತ್ತಮ ಅಧ್ಯಯನ ಪುಸ್ತಕಗಳಿದ್ದು, ಇವುಗಳನ್ನು ಬಳಸಿಕೊಳ್ಳುವಂತೆ ಅವರು ಕೋರಿದರು.