ಕೂಡಿಗೆ, ನ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಭುವನಗಿರಿ, ಜೇನುಕಲ್ಲು ಬೆಟ್ಟ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಅಧಿಕವಾಗಿದ್ದು, ಅನೇಕ ರೈತರ ಜಮೀನಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಮೆಕ್ಕೆಜೋಳ, ಅಡಿಕೆ, ಬಾಳೆ ಸಿಹಿ ಗೆಣಸು ಸೇರಿದಂತೆ ಉಪ ಬೆಳೆಗಳನ್ನು ತಿಂದು ತುಳಿದು ನಷ್ಟ ಪಡಿಸುವುದರ ಜೊತೆಯಲ್ಲಿ ಜೇನುಕಲ್ಲು ಬೆಟ್ಟ ಗ್ರಾಮದ ಮೋಹನ್ ಎಂಬವರಿಗೆ ಸೇರಿದ ಕೊಳವೆ ಬಾವಿಯನ್ನು ಹಾನಿ ಮಾಡಿದೆ.

ಸೀಗೆಹೊಸೂರು, ಜೇನುಕಲ್ಲು ಬೆಟ್ಟದ ಕಾಡಾಂಚಿನಲ್ಲಿರುವ ಕಂದಕಗಳು ಸಮಪರ್ಕವಾಗಿ ಇಲ್ಲದ ಕಾರಣ ಕಾಡಾನೆಗಳು ಗ್ರಾಮಗಳತ್ತ ಬರುತ್ತಿವೆ. ಅಲ್ಲದೆ ಈ ಬಾರಿ ಅಪಾರ ಪ್ರಮಾಣದ ಬೆಳೆಗಳನ್ನು ನಷ್ಟ ಪಡಿಸಿವೆ ಎಂದು ಸೀಗೆಹೊಸೂರು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯ ಅನಂತ ಸೇರಿದಂತೆ ರೈತರು ಆರೋಪಿಸಿದ್ದಾರೆ.

ಸೂಕ್ತ ಕ್ರಮ ವಹಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.