ಗೋಣಿಕೊಪ್ಪಲು, ನ. ೧೬: ದಕ್ಷಿಣ ಕೊಡಗಿನ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಸಂಭ್ರಮ-ಸಡಗರದೊAದಿಗೆ ಅರ್ಥಪೂರ್ಣ ವಾಗಿ ನಡೆಯಿತು. ರಾಜ್ಯದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾದ, ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ತಾನು ಓದಿದ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಳೆ ನೆನಪುಗಳನ್ನು ಮೆಲುಕು ಹಾಕಿದರು. ಜೊತೆಗೆ ಕೆಲವೊಂದು ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಶಾಲೆಗೆ ೧೦೦ ವರ್ಷ ತುಂಬಿದ ಸವಿನೆನಪಿನಲ್ಲಿ ಕೆ.ಜೆ. ಜಾರ್ಜ್ ಅವರು ವೈಯಕ್ತಿಕವಾಗಿ ನೀಡಿದ ರೂ. ೧೫ ಲಕ್ಷ ಹಣದಲ್ಲಿ ನಿರ್ಮಿಸಿಲಾದ ಶತಮಾನೋತ್ಸವ ಸಭಾಂಗಣವನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.

ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಜೆ.ಚಾರ್ಜ್, ತÀನ್ನನ್ನು ಮಾಯಮುಡಿ ಶಾಲೆಗೆ ಸೇರಿಸಿದ್ದು ಆಗಿನ ಶಾಲೆಯ ಅಧ್ಯಕ್ಷರಾಗಿದ್ದ ಚೆಪ್ಪುಡೀರ ಗಣಪತಿ (ಗಪ್ಪಣ್ಣ) ಅವರು, ಇವರ ನಿಸ್ವಾರ್ಥ ಸೇವೆ ನನಗೆ ದಾರಿ ದೀಪವಾಗಿದೆ. ಆದ್ದರಿಂದ ಸಭಾಂಗಣಕ್ಕೆ ಗಣಪತಿ ಅವರ ಹೆಸರು ನಾಮಕರಣ ಮಾಡುವಂತೆ ಹೇಳಿದರು.

ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಶಕ್ತಿ, ಆತ್ಮಸ್ಥೆöÊರ್ಯ ನೀಡಿದ್ದು ಮಾಯಮುಡಿ ಶಾಲೆ. ಉತ್ತಮ ಶಿಕ್ಷಕರು ಕಲಿಸಿದ ಪಾಠ ತಾನು ವೈಯಕ್ತಿಕವಾಗಿ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಸಾಧನೆಯ ಹಾದಿಗೆ ಪ್ರಾಥಮಿಕ ಶಾಲೆಯೇ ಮೆಟ್ಟಿಲಾಗಿರುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ, ನೈತಿಕತೆ ಕಲಿತು ಕೊಳ್ಳಬೇಕೆಂದು ಕಿವಿಮಾತನಾಡಿದರು.

ತೋಟದಲ್ಲಿ ಕೆಲಸ ಮಾಡಿದ್ದೆ - ವೇಷ ಹಾಕಿದ್ದೆ

ಶಾಲೆಗೆ ಸೇರಿದ ಕಾಫಿತೋಟ ಹಾಗೂ ಭತ್ತದ ಗದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಆ ದಿನಗಳಲ್ಲಿ ಶಾಲಾ ವಾರ್ಷಿಕೋತ್ಸವ ರಾತ್ರಿ ೧೦ ಗಂಟೆಯವರೆಗೂ ನಡೆಯುತ್ತಿತ್ತು. ನಾನು ಛದ್ಮವೇಷ ಹಾಕಿ ಮನರಂಜನೆ ನೀಡಿದ್ದೆ. ನನಗೆ ಪ್ರೋತ್ಸಾಹ ಹಣ ನೀಡುತ್ತಿದ್ದ ನೆನಪು ಇಂದೂ ಇದೆ ಎಂದು ಶಾಲಾ ದಿನಗಳನ್ನು ಮೆಲುಕು ಹಾಕಿದ ಜಾರ್ಜ್, ಮಾಯಮುಡಿ ಶಾಲೆ ದಾನಿಗಳಿಂದ ಸ್ಥಾಪನೆಯಾಗಿ ಇಂದು ಮಾದರಿ ಶಾಲೆಯಾಗಿ ರೂಪುಗೊಂಡಿದೆಯೆAದು ಮೆಚ್ಚುಗೆ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಸಲುವಾಗಿ ನೂತನ ಕೊಠಡಿ ನಿರ್ಮಿಸಿ ಕೊಡುವಂತೆ ಶಾಲಾ ಆಡಳಿತ ಮಂಡಳಿ, ಪ್ರಮುಖರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೆ.ಜೆ. ಜಾರ್ಜ್ ಭರವಸೆ ನೀಡಿದರು.

ಕೊಠಡಿ ನಿರ್ಮಾಣಕ್ಕೆ ಕ್ರಮ

ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಸ್ಥಾನಕ್ಕೆ ಏರಿರುವುದು ನಮ್ಮ ಮುಂದಿರುವ ಉದಾಹರಣೆಗಳಿದ್ದು, ಸಚಿವ ಕೆ.ಜೆ.ಜಾರ್ಜ್ ಕೂಡ ಇದರಲ್ಲಿ ಒಬ್ಬರಾಗಿದ್ದಾರೆ. ಕೊಡಗಿನ ಜನರು ಸಚಿವರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಚಿವರು ಓದಿದ ಶಾಲೆಗೆ ನಾಲ್ಕು ಕೊಠಡಿಯ ನಿರ್ಮಾಣವನ್ನು ಕೆಪಿಟಿಸಿಎಲ್ ಮೂಲಕ ಮಾಡಿಕೊಡುವ ಭರವಸೆಯನ್ನು ಇದೇ ಸಂದರ್ಭ ನೀಡಿದರು.

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ ಮಾಡಲಾಗುವುದು. ಇದರ ಪ್ರಯೋಜನ ಪಡೆದುಕೊಳ್ಳಬೇಕು. ದಾನಿಗಳು, ನಾಗರಿಕರು, ಶಿಕ್ಷಕರ ಸಹಕಾರ ಅಗತ್ಯವಿದೆ. ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಶಾಲೆಯ ಅಭಿವೃದ್ಧಿಗೆ ನೀಡಿದ ರೂ. ೬ ಲಕ್ಷ ನೆರವನ್ನು ಒಳಾಂಗಣ ಕ್ರೀಡಾಂಗಣ ಸೇರಿದಂತೆ ಇನ್ನಿತರ ಕ್ರೀಡಾಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಆಡಳಿತ ಮಂಡಳಿಯವರು ಇದೇ ಸಂದರ್ಭ ತಿಳಿಸಿದರು.

ರೂ. ೧ ಲಕ್ಷ ನೆರವು ಘೋಷಣೆ

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ರೂ. ಒಂದು ಲಕ್ಷ ಹಣವನ್ನು ವೈಯಕ್ತಿಕವಾಗಿ ನೀಡುವುದಾಗಿ ಘೋಷಿಸಿದರು. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಮುಂದೆ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ತಿಳಿಸಿದರು.

ಸಾಧಕರಿಗೆ ಸನ್ಮಾನ

ಇದೇ ಸಂದರ್ಭ ಕೆ.ಜೆ. ಜಾರ್ಜ್, ವೀರಾಜಪೇಟೆ ಶಾಸಕ ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ವಿಜ್ಞಾನಿ ಕಾಳಪಂಡ ಕಾಶಿ ಅಪ್ಪಯ್ಯ, ಕ್ರೀಡಾಪಟು ಕಳ್ಳಿಚಂಡ ಪ್ರಸಾದ್, ಬಿಎಸ್‌ಎಫ್ ಡಿಐಜಿ ಆಗಿದ್ದ ದಿ. ಐಚ್ಚೆಟ್ಟಿರ ದಿ. ಪೊನ್ನಪ್ಪ ಅವರ ಪರವಾಗಿ ಪತ್ನಿ ರೇಖಾ, ಅರಣ್ಯ ಕಾಲೇಜು ನಿವೃತ್ತ ಡಾ. ಸಿ.ಜಿ. ಕುಶಾಲಪ್ಪ, ಬ್ಯಾಂಕಿAಗ್ ಕ್ಷೇತ್ರದ ಸಾಧಕಿ ಕಂಜಿತAಡ ಸ್ವಾತಿ, ಸಮಾಜ ಸೇವಕರುಗಳಾದ ಕೊಂಗAಡ ಗಣಪತಿ, ಚೆಪ್ಪುಡೀರ ರಾಧಾ, ನಿವೃತ್ತ ಶಿಕ್ಷಕಿ ಹೆಚ್.ಎಸ್.ನಂಜಮ್ಮ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಚೆಪ್ಪುಡೀರ ಮಾದಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗುತ್ತಿಗೆದಾರ ಚೇತನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಲೆ ನಡೆದು ಬಂದ ಹಾದಿಯ ಬಗ್ಗೆ ಸ್ಮರಣ ಸಂಚಿಕೆಯ ಅಧ್ಯಕ್ಷ ಸಣ್ಣುವಂಡ ವಿಶ್ವನಾಥ್ ವಿವರಿಸಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷÀ ಕಾಳಪಂಡ ಟಿಪ್ಪು ಬಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ. ಸಿ.ಎಸ್.ಅರುಣ್ ಮಾಚಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರವಿ, ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಟಾಟು ಮೊಣ್ಣಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಟಿಪ್ಪು ಬಿದ್ದಪ್ಪ, ಖಜಾಂಚಿ ಎಸ್.ಎಸ್.ಸುರೇಶ್, ಪ್ರಮುಖರಾದ ಪುಚ್ಚಿಮಾಡ ರಾಯ್ ಮಾದಪ್ಪ, ಶಾಲಾ ಮುಖ್ಯಶಿಕ್ಷಕಿ ಹೆಚ್.ಸಿ. ಜಯಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶತಮಾನೋತ್ಸವ ಆಚರಣೆಯ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಬಾನಂಡ ಪೃಥ್ಯು ಸ್ವಾಗತಿಸಿ, ಶಿಕ್ಷಕಿ ಸುಮ ಹಾಗೂ ಪುಷ್ಪ ನಿರೂಪಿಸಿ, ಟಾಟು ಮೊಣ್ಣಪ್ಪ ವಂದಿಸಿದರು. ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಹಾಗೂ ಕಾವೇರಿ ಕಾಲೇಜು ತಂಡದಿAದ ಉಮ್ಮತ್ತಾಟ್ ಪ್ರದರ್ಶನ ನಡೆಯಿತು.

-ಹೆಚ್.ಕೆ. ಜಗದೀಶ್