*ಗೋಣಿಕೊಪ್ಪ, ನ. ೧೬: ಜನ ಜಾಗೃ ಜಾಗೃತಿಯಾದರೆ ಏಡ್ಸ್ ಗಳಂತ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿಯಪ್ಪ ಎಂ.ಬಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ಕಾಲೇಜು ಗೋಣಿಕೊಪ್ಪಲು ರಾಷ್ಟಿçÃಯ ಸೇವಾ ಯೋಜನೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕಾವೇರಿ ಕಾಲೇಜು ಗೋಣಿಕೊಪ್ಪಲು ರೆಡ್ ರಿಬ್ಬನ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ ಏಡ್ಸ್ ಕುರಿತು ಬೀದಿ ನಾಟಕ ಮತ್ತು ಪ್ಲಾಸ್‌ಮಾಬ್ ಕಾರ್ಯಕ್ರಮ ಕಾಲೇಜು ಮತ್ತು ಗೋಣಿಕೊಪ್ಪಲು ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಜಾಗೃತಿ ಕಾರ್ಯದ ಅಧ್ಯಕ್ಷತೆಯಲ್ಲಿ ಮಾತನಾಡಿದರು.
ಗೋಣಿಕೊಪ್ಪಲು ಸಮುದಾಯದ ಅರೋಗ್ಯ ಕೇಂದ್ರ ಐ.ಟಿ.ಟಿ.ಸಿ ಆಪ್ತ ಸಮಾಲೋಚಕ ಚಂದ್ರಶೇಖರ್ ಮಾತನಾಡಿದರು.
ಗೋಣಿಕೊಪ್ಪ ಠಾಣಾಧಿಕಾರಿ ಪ್ರಸನ್ನ ಕುಮಾರ್, ಕಾವೇರಿ ಪದವಿ ಕಾಲೇಜು ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ವನಿತ್ ಕುಮಾರ್ ಎಂ.ಎನ್, ರೀತಾ. ಎನ್.ಪಿ, ವಿದ್ಯಾರ್ಥಿಗಳಾದ ರಾನ್ಸಿ, ಸಚಿನ್, ವಿಷ್ಣು, ಅರ್ಜುನ್, ಸಮೃದ್, ನಂದನ್, ಅಮುಲ್, ವೈಷ್ಣವ್, ಅಪ್ಸಲ್, ಧನ್ಯ, ದರ್ಶಿನಿ, ಮಂಜುಳಾ, ಕವಿತಾ, ಬೃಂದವನ್, ವಿಷ್ಮ, ದೀಕ್ಷೀತಾ, ತನುಷಾ, ದೀಕ್ಷಾ ಬೋಜಮ್ಮ, ಗೀಷ್ಮ ಉತ್ತಪ್ಪ, ಕೀರ್ತಿ ಕಾವೇರಮ್ಮ ಮುಂತಾದವರು ಜಾಗೃತಿ ನೃತ್ಯ ಮತ್ತು ಬೀದಿ ನಾಟಕದ ಪ್ರದರ್ಶನ ನೀಡಿದರು. ಪೊಲೀಸ್ ಸಿಬ್ಬಂದಿಗಳು, ಅಧ್ಯಾಪಕರು, ಸಾರ್ವಜನಿಕರು ಉಪಸ್ಥಿತರಿದ್ದರು.