ಮಡಿಕೇರಿ, ನ. ೧೬: ಕೊಡಗು ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿನಿ ಪರ್ಲಿನ್ ಪೊನ್ನಮ್ಮ ಅಕ್ಟೋಬರ್ ೨೯ ರಿಂದ ನವೆಂಬರ್ ೧೪ ರವರೆಗೆ ಪೊನ್ನಂಪೇಟೆಯಲ್ಲಿ ನಡೆದ ಮಹಿಳೆಯರ ಸಬ್ ಜ್ಯೂನಿಯರ್ ರಾಜ್ಯ ಹಾಕಿ ತಂಡದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಕರ್ನಾಟಕ ಹಾಕಿ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ನವೆಂಬರ್ ೨೨ ರಿಂದ ಡಿಸೆಂಬರ್ ೨ ರವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ೧೪ನೇ ಹಾಕಿ ತಂಡ ಸಬ್ ಜೂನಿಯರ್ ಮಹಿಳೆಯರ ರಾಷ್ಟಿçÃಯ ಚಾಂಪಿಯನ್ ಶಿಪ್ ೨೦೨೪ ರಲ್ಲಿ ತಂಡದ ನಾಯಕಿಯಾಗಿ ಪರ್ಲಿನ್ ಭಾಗವಹಿಸಲಿದ್ದಾಳೆೆ. ಈಕೆ ಮಡಿಕೇರಿ ವಕೀಲರಾದ ಅಚ್ಚಪಂಡ ಗಿರಿ ಹಾಗೂ ಪದ್ಮ ದಂಪತಿ ಪುತ್ರಿಯಾಗಿದ್ದಾಳೆ.