ಚೆಯ್ಯಂಡಾಣೆ, ನ. ೧೬: ಕೊಂಡAಗೇರಿಯ ದರ್ಗಾ ಶರೀಫ್‌ನಲ್ಲಿ ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಝಿಯಾರತ್‌ಗೆ ನೇತೃತ್ವ ವಹಿಸಿದರು. ಧ್ವಜಾರೋಹಣವನ್ನು ಎಸ್‌ಎಸ್‌ಎಫ್ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಸಾಹಿತ್ಯೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ನೆರವೇರಿಸಿದರು. ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಪ್ರಾರ್ಥನೆಗೆ ನೇತೃತ್ವ ವಹಿಸಿದರು.

ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಹಫೀಝ್ ಸೂಫಿಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಸಾಹಿತ್ಯ ಪ್ರಶಸ್ತಿ ವಿಜೇತ ಮೆಹಬೂಬ್ ಸಾಬ್ ಬಿಜಾಪುರ ಉದ್ಘಾಟಿಸಿ ಮಾತನಾಡಿ ಎಸ್‌ಎಸ್‌ಎಫ್ ಸಂಘಟನೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ

(ಮೊದಲ ಪುಟದಿಂದ) ಸಾಹಿತ್ಯೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಘಟನೆ ನಾಡಿಗೆ ನೀಡುತ್ತಿರುವ ಸೇವೆಗಳು ಶ್ಲಾಘನೀಯ ಎಂದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಮಾತನಾಡಿದರು.

ಈ ಸಂದರ್ಭ ಕೊಂಡAಗೇರಿ ಮಸೀದಿಯ ಮುದರಿಸ್ ಸ್ವಾದಿಕ್ ಸಖಾಫಿ, ಕೊಂಡAಗೇರಿ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ, ಎಸ್‌ಎಸ್‌ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಂಗಳೂರು, ಎಸ್‌ಎಸ್‌ಎಫ್ ಕೊಡಗು ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ, ರಾಷ್ಟಿçÃಯ ಸದಸ್ಯ ಹಕೀಂ ಬೆಂಗಳೂರು, ಯಾಕೂಬ್ ಮಾಸ್ಟರ್, ಜುನೈದ್ ಅಮ್ಮತಿ, ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಸಂಘ ಕುಟುಂಬದ ನೇತಾರರು, ಮತ್ತಿತರರು ಉಪಸ್ಥಿತರಿದ್ದರು.