ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನ, ಇತ್ಯಾದಿ ಅಪರಾಧ ಪ್ರಕರಣಗಳು ಸಂಭವಿಸಿದಾಗ ಆ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಅಪರಾಧ ಪ್ರಕರಣಗಳು ಸಂಭವಿಸಿದಾಗ ಆರೋಪಿಗಳನ್ನು ಹಿಡಿಯಲೆಂದೇ ಪೊಲೀಸರು ಇರುವುದು ಅಲ್ಲವೇ ಎಂದು ಈ ಸಮಾಜದಲ್ಲಿ ಬಹುತೇಕ ಜನರು ನಂಬಿರುತ್ತಾರೆ. ಅಪರಾಧ ಇಲ್ಲದ ಸಮಾಜ ಎಲ್ಲರ ಕನಸಾಗಿದ್ದರೂ ಅಂಥ ಸಮಾಜ ಇನ್ನೂ ನಿರ್ಮಾಣವಾಗಿಲ್ಲ. ಹೀಗಾಗಿ ಈ ಸಮಾಜದಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಸಂರಕ್ಷಣೆ ನಿಟ್ಟಿನಲ್ಲಿ ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿಯೇ ಉಳಿದಿದೆ. ಪೊಲೀಸರಿಗೂ ಅವರದ್ದೇ ಆದ ಸವಾಲುಗಳು, ಸಂಕಷ್ಟಗಳಿರುತ್ತವೆ. ಪ್ರತೀ ಪ್ರಕರಣದಲ್ಲಿಯೂ ಸಾಕ್ಷö್ಯವಾಗಿ ತನಿಖೆ ಕೈಗೊಂಡಾಗ ಮಾತ್ರ ನೈಜ ಆರೋಪಿಗಳು ಸಿಕ್ಕಿಬೀಳುತ್ತಾರೆ.
ನಿಹಾರಿಕಾ, ರಾಣ, ಡಾ. ನಿಖಿಲ್ರೆಡ್ಡಿ ಮಾಡಿದ್ದ ಉದ್ಯಮಿ ರಮೇಶ್ ಕುಮಾರ್ ಹತ್ಯೆ ಪ್ರಕರಣದ ಯಶಸ್ವಿ ತನಿಖೆಯೇ ಪೊಲೀಸರ ಕಾರ್ಯಕ್ಷಮತೆಗೆ ಸೂಕ್ತ ಉದಾಹರಣೆ.
ಪನ್ಯದಲ್ಲಿ ಕಂಡುಬAದ ಅರ್ಧ ಬೆಂದ ಶವದ ಪ್ರಕರಣದಲ್ಲಿ ಪೊಲೀಸರು ವಹಿಸಿರುವ ಪಾತ್ರ ಗಮನಿಸಿ, ಯಾವುದೇ ಸುಳಿವಿಲ್ಲದಂತೆ ಶವವನ್ನು ಕಾಫಿ ಗಿಡಗಳ ನಡುವಿನ ಚರಂಡಿಯಲ್ಲಿ ಬಿಸಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಲಾಗಿತ್ತು. ಎಲ್ಲಿಯೂ ಆರೋಪಿಗಳ ಹೆಜ್ಜೆ ಗುರುತಾಗಲೀ, ಇತರ ವಸ್ತುಗಳಾ ಗಲೀ ಕಂಡುಬAದಿರಲಿಲ್ಲ. ಸಾವನ್ನಪ್ಪಿದವನು ಮಧ್ಯ ವಯಸ್ಕ ಎಂಬ ಅಂದಾಜು ಘಟನಾ ಸ್ಥಳದಲ್ಲಿ ಸಿಕ್ಕಿದ್ದ ೮ 'ಸೈಜ್'ನ ಒಂದು ಶೂನಿಂದ ದೊರಕಿದ್ದು ಬಿಟ್ಟರೆ ಯಾವುದೇ ಮಹತ್ವದ ಸುಳಿವು ಲಭಿಸಿರಲಿಲ್ಲ, ಕೊಡಗಿನಲ್ಲಿ ಹೋಗಲಿ, ಕರ್ನಾಟಕದಲ್ಲಿಯೂ ಎಲ್ಲಿಯೂ ರಮೇಶ್ ಕುಮಾರ್ ನಾಪತ್ತೆಯಾದ ಪ್ರಕರಣ ಕೂಡ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರಲಿಲ್ಲ, ಹೀಗಾಗಿ ಕರ್ನಾಟಕದವರು ಯಾರೂ ಈ ಕೇಸ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ.
ಹೀಗಿರುವಾಗ, ಯಾವುದೇ ಸುಳಿವು ದೊರಕದ ಪ್ರಕರಣ ಇದು, ಕೇಸ್ ಕ್ಲೋಸ್ ಎಂದು ಫೈಲ್ ಮುಚ್ಚಿಹಾಕಲು ಎಲ್ಲಾ ಅವಕಾಶಗಳೂ ಪೊಲೀಸರಿಗೆ ಇತ್ತು. ಆದರೆ, ಸತ್ತವನ ಕುಟುಂಬ ಜಗತ್ತಿನ ಎಲ್ಲಿಯೇ ಇರಲಿ, ನಾಪತ್ತೆಯಾದ ವನಿಗಾಗಿ ಆ ಕುಟುಂಬ ಹುಡುಕುತ್ತಿರಬಹುದು. ಈ ರೀತಿ ಶವ ಸುಟ್ಟು ಹಾಕಿದ ಆರೋಪಿಗಳಿಗೆ ಕಾನೂನು ಪ್ರಕಾರ ಪಾಠ ಕಲಿಸಿ ಕಂಬಿ ಹಿಂದೆ ತಳ್ಳಲೇಬೇಕು. ಏನಾದರಾಗಲಿ ಈ ಕೊಲೆ ಕೇಸ್ ಬೇಧಿಸಲೇಬೇಕು ಎಂದು ಛಲ ತೊಟ್ಟವರು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್.
ಇದಕ್ಕಾಗಿ ೧೬ ಪೊಲೀಸರನ್ನು ಆಯ್ಕೆ ಮಾಡಿ, ನಾಲ್ಕು ತಂಡಗಳಾಗಿ ವಿಭಾಗಿಸಲಾಯಿತು. ಸೋಮವಾರಪೇಟೆ ಎಸ್.ಐ. ಮುದ್ದುಮಹದೇವಪ್ಪ ಅವರಿಗೆ ತನಿಖೆಯ ಹೊಣೆ ನೀಡಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಅವರನ್ನು ತಂಡದಲ್ಲಿ ಪ್ರಮುಖ ಅಧಿಕಾರಿಯಾಗಿ ಸೇರ್ಪಡೆ ಮಾಡಲಾಯಿತು. ಯುವ ಪೊಲೀಸ್ ಪಡೆ ಗುರುತು ಪತ್ತೆಯಾಗದ ವ್ಯಕ್ತಿಯ ಹತ್ಯೆ ಪ್ರಕರಣಕ್ಕೆ ಸಜ್ಜುಗೊಂಡಿತು.
ಅಲ್ಲಿಂದಲೇ ಪ್ರಾರಂಭವಾದದ್ದು, ಸುಳಿವೇ ಇಲ್ಲದ ಕೇಸ್ನಲ್ಲಿ ಸುಳಿವು ಪತ್ತೆಹಚ್ಚಿ, ಕೊಲೆಯಾದನ ಪತ್ತೆಯ ಜೊತೆಗೇ ಕೊಲೆ ಮಾಡಿದವರನ್ನೂ ಪತ್ತೆಹಚ್ಚಿ ಶಿಕ್ಷಿಸಲು ಕೆಲಸ. ಇದನ್ನು ಪರಿಪೂರ್ಣವಾಗಿ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಖಂಡಿತವಾಗಿಯೂ ಕೊಡಗು ಪೊಲೀಸರಿಗೆ ಸಲ್ಲುತ್ತದೆ.
ಸವಾಲಿನ ತನಿಖೆ
ಸುಟ್ಟು ಹೋಗಿದ್ದ ಶವದ ಮುಖವೇ ಗುರುತು ಸಿಕ್ಕದಂತಾಗಿತ್ತು, ಬಟ್ಟೆಯಾಗಲೀ, ಇತರ ವಸ್ತುಗಳಾಗಲೀ ಸ್ಥಳದಲ್ಲಿ ದೊರಕಿರಲಿಲ್ಲ. ಕತ್ತಲಲ್ಲಿ ಕೃತ್ಯ ನಡೆದಿದ್ದರಿಂದಾಗಿ ಸಿಸಿ ಕ್ಯಾಮರ ದೃಶ್ಯಗಳೂ ಸಮರ್ಪಕವಾಗಿ ಲಭಿಸಲಿಲ್ಲ. ಹೆದ್ದಾರಿಯಲ್ಲಿ ಹಂತಕರು ಬಂದ ಕಾರಣ ಹೆದ್ದಾರಿಯಲ್ಲಿ ಅಂದು ಸಂಚರಿಸಿದ್ದ ಎಲ್ಲಾ ವಾಹನಗಳ ನಂಬರ್ ಹುಡುಕಿ ಅವುಗಳ ಮಾಹಿತಿ ಪಡೆದುಕೊಳ್ಳುವ ಸವಾಲು ನಮಗಿತ್ತು. ಹೀಗಿದ್ದರೂ ತನಿಖಾ ತಂಡದವರು ಸಮರ್ಪಕ ರೀತಿಯಲ್ಲಿ ಎಳೆಎಳೆಯಾಗಿ ಪ್ರಕರಣಕ್ಕೆ ಸಂಬAಧಿಸಿದAತೆ ಸುಳಿವು ಒಟ್ಟುಗೂಡಿಸತೊಡಗಿ ದರು. ಸುಳಿವುಗಳು ಒಂದಕ್ಕೊAದು ಕೊಂಡಿಯAತೆ ಬಿಗಿಯುತ್ತಾ ಸಾಗಿತ್ತು. ಪನ್ಯದಲ್ಲಿ ಕಗ್ಗತ್ತಲಿನಲ್ಲಿ ಮೂವರು ನಿಂತಿದ್ದರು ಎಂದು ಸುಂಟಿಕೊಪ್ಪದ ಆಟೋ ಚಾಲಕ ಹೇಳಿಕೆ ನೀಡಿದ್ದು ಇದು ಓರ್ವನದ್ದಲ್ಲ, ತಂಡದಿAದಾದ ಕೃತ್ಯ ಎಂದು ತಿಳಿಯಲು ಸಹಕಾರಿಯಾಯಿತು. ಹಂತಕರು ಬಳಸಿದ್ದ ಕಾರ್ನ ಸಿಸಿ ಕ್ಯಾಮರ ದೃಶ್ಯಗಳನ್ನು ನೋಡಿ ಕಾರ್ ಹಿಂಬದಿಯಲ್ಲಿದ್ದ ಬೆನ್ಜ್ ಕಾರ್ನ ಸ್ಟಿಕ್ಕರ್ ನೋಡಿ ಅಂತಹ ಕಾರನ್ನೇ ಗುರಿಯಾಗಿಸಿಕೊಂಡು ತನಿಖೆ ಮುಂದುವರೆಸಿದ್ದೆವು. ಇಂತಹ ಅನೇಕ ಸೂಕ್ಷö್ಮ ಅಂಶಗಳ ಆಧಾರದಲ್ಲಿ ತನಿಖೆ ದಿನದಿನಕ್ಕೂ ಪ್ರಗತಿ ಹೊಂದಿ ಕೊನೆಗೂ ಹಂತಕರನ್ನು ಕಂಡುಹಿಡಿಯಲು ಸಾಧ್ಯವಾಯಿತು ಎಂದು ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ವಿವರಿಸುತ್ತಾರೆ.
ಪನ್ಯದಲ್ಲಿ ಕಾರ್ ಒಂದು ಕೇವಲ ೪೦ ನಿಮಿಷ ನಿಂತಿದ್ದ ಸಣ್ಣ ಸುಳಿವನ್ನು ಸಿಸಿ ಕ್ಯಾಮರದಲ್ಲಿ ಪತ್ತೆಹಚ್ಚಿ, ಕಾರ್ ಸಾಗಿದ ಮಾರ್ಗದ ಎಲ್ಲಾ ಸಿಸಿ ಕ್ಯಾಮರಗಳನ್ನು ಗಮನಿಸಿ ಮೊದಲ ಸುಳಿವು ಪಡೆಯದೇ ಹೋಗಿದ್ದರೆ ಖಂಡಿತಾ ಕೊಲೆಗಡುಕರು ಆರಾಮವಾಗಿ ತಪ್ಪಿಸಿಕೊಳ್ಳುತ್ತಿದ್ದರು.
ಕೈ ತುಂಬಾ ಸಂಬಳ ಪಡೆಯುತ್ತಿದ್ದವರು ಕಂಬಿ ಎಣಿಸುವಂತಾದರು!,
ನಿಹಾರಿಕ ಎಂಬ ಆರೋಪಿಯ ಹಿನ್ನೆಲೆ ಗಮನಿಸಿ, ಈಕೆ ಮೂಲತಃ ತೆಲಂಗಾಣ ರಾಜ್ಯದಡಿ ದಿಯೋತ್ರಿ ಜಿಲ್ಲೆಯ ಮೋಂಗಿರ ಗ್ರಾಮದವಳಾಗಿದ್ದಳು. ಬಹಳ ಬುದ್ದಿವಂತೆ, ತರಗತಿಯಲ್ಲಿ ಶೇ.೯೦ಕ್ಕಿಂತ ಕಡಿಮೆ ಅಂಕ ಪಡೆದವಳೇ ಅಲ್ಲ. ತಂದೆ ತೀರಿಕೊಂಡ ಹಿನ್ನೆಲೆ ಈಕೆಯ ತಾಯಿ ೧೬ ವರ್ಷದ ನಿಹಾರಿಕಳಿಗೆ ವಿವಾಹ ಮಾಡಿಸಿಬಿಟ್ಟಿದ್ದರು. ನಿಹಾರಿಕಳಿಗೆ ಎರಡೂ ಮಕ್ಕಳಾದವು. ಆದರೆ ಗಂಡನೊAದಿಗೆ ಸಾಮರಸ್ಯದ ಜೀವನ ಸಾಧ್ಯವಾಗದೇ ವಿಚ್ಚೇಧನ ನೀಡಿ ಸ್ವತಂತ್ರö್ಯ ಜೀವನಕ್ಕೆ ಮುಂದಾದಳು. ವಿವಾಹದ ಬಳಿಕ ಇಂಜಿನಿಯರಿAಗ್ ಶಿಕ್ಷಣ ಪಡೆದಳಲ್ಲದೇ ಐಟಿ ಸಂಸ್ಥೆಯಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಳು. ತಿಂಗಳಿಗೆ ಕನಿಷ್ಟ ರೂ. ೧.೨೦ ಲಕ್ಷ ವೇತನವೂ ಲಭಿಸುತ್ತಿತ್ತು. ಈ ನಡುವೇ ಹರ್ಯಾಣದಲ್ಲಿದ್ದ ವ್ಯಕ್ತಿಯ ಪರಿಚಯವಾಗಿ ಆತನನ್ನೂ ಮದುವೆಯಾದಳು. ಅವನಿಗೆ ನಿಹಾರಿಕಳ ವರ್ತನೆ ಸರಿಬಾರದೇ ಆಕೆಯ ಮೇಲೆ ಕೇಸ್ ದಾಖಲಿಸಿ ನಿಹಾರಿಕಳನ್ನು ಹರ್ಯಾಣದ ಜೈಲಿಗೆ ಅಟ್ಟಿದ್ದ, (ಆ ಜೈಲಿನಲ್ಲಿಯೇ ಸಂತೋಷಿಯ ಪರಿಚಯವಾಗಿ, ಆಕೆಯ ಮಗ ಅಂಕುರ್ ರಾಣನ ಪರಿಚಯ ನಿಹಾರಿಕಳಿಗೆ ಆಗಿತ್ತು) ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಬೆಂಗಳೂರಿನಲ್ಲಿದ್ದರೂ ತೆಪ್ಪಗಿರದ ನಿಹಾರಿಕ ಐಷಾರಾಮಿ ಶೈಲಿಯ ಜೀವನಕ್ಕೆ ಮಾರು ಹೋದಳು. ಇದಕ್ಕಾಗಿ ಈಕೆಯ ಬಲೆಗೆ ೨೦೧೮ ರಲ್ಲಿ ಬಿದ್ದವನೇ ತೆಲಂಗಾಣದ ಉದ್ಯಮಿ ರಮೇಶ್ ಕುಮಾರ್ ಈತನಿಂದ ಲಕ್ಷಗಟ್ಟಲೆ ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದ ನಿಹಾರಿಕ ಈತನ ವಹಿವಾಟು ಗಮನಿಸಿ ೮ ಕೋಟಿ ರೂಪಾಯಿಗೆ ಬೇಡಿಕೆ ಮುಂದಿಟ್ಟಿದ್ದಳು, ರಮೇಶ್ ಕುಮಾರ್ ಅಷ್ಟೊಂದು ಹಣ ಕೊಡಲು ಮುಂದಾಗದಿದ್ದಾಗ ಆಕ್ರೋಶಗೊಂಡ ನಿಹಾರಿಕ ಆತನನ್ನೇ ಕೊಲೆ ಮಾಡಿ ಆತನಲ್ಲಿದ್ದ ಆಸ್ತಿ, ನಗದನ್ನು ತನ್ನ ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದಳು.
ಈ ನಡುವೇ ಬೆಂಗಳೂರಿನಲ್ಲಿನ ರಾಮಮೂರ್ತಿ ನಗರದ ಮನೆಯಲ್ಲಿಯೇ ನಾಯಿ ಪಾಲನೆ ಕೇಂದ್ರ ತೆರೆದ ನಿಹಾರಿಕಳಿಗೆ ನಾಯಿಗಳ ಆರೈಕೆಗಾಗಿ ಬರುತ್ತಿದ್ದ ಡಾ. ನಿಖಿಲ್ ರೆಡ್ಡಿ ಪರಿಚಯವಾದ ಮಾತ್ರವಲ್ಲ ಆತನನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಪ್ರೀತಿಸತೊಡಗಿದ್ದಳು. ಶಿಕ್ಷಕನ ಮಗನಾಗಿ ಉತ್ತಮ ವೃತ್ತಿ ನಿರ್ವಹಿಸುತ್ತಿದ್ದ ನಿಖಿಲ್ ರೆಡ್ಡಿ, ನಿಹಾರಿಕಳ ಮೋಹದ ಬಲೆಗೆ ಬಿದ್ದು ರಮೇಶ್ ಕುಮಾರ್ ಹತ್ಯೆಗೆ ನೆರವು ನೀಡಿದ ಆರೋಪದಲ್ಲಿ ಜೈಲು ಸೇರುವಂತಾದ.
ನಿಹಾರಿಕ, ಡಾ. ನಿಖಿಲ್ ರೆಡ್ಡಿ - ಇಬ್ಬರೂ ಬುದ್ದಿವಂತರೇ, ಕೈ ತುಂಬಾ ಸಂಬಳ ಪಡೆಯುತ್ತಿದ್ದ ಸ್ಥಿತಿವಂತರೇ. ಆದರೆ, ಹಣದಾಸೆ ನಿಹಾರಿಕಳನ್ನು ಅಪರಾಧ ಲೋಕಕ್ಕೆ ಪರಿಚಯಿಸಿದರೆ. ಈಕೆಯ ಪ್ರೇಮದ ಹುಚ್ಚು ಡಾ. ನಿಖಿಲ್ ರೆಡ್ಡಿಯನ್ನು ಜೈಲಿನ ಕಂಬಿ ಎಣಿಸುವಂತೆ ಮಾಡಿದೆ. ಅಂಕುರ್ ರಾಣ ಎಂಬ ಚಾಲಾಕಿ ಆರೋಪಿ ಈವರೆಗೂ ಜೈಲು ಸೇರದೇ ಇದ್ದರೂ ಆತನ ಕುತಂತ್ರಗಳಿಗೆ ಕೊಡಗು ಪೊಲೀಸರ ತನಿಖೆ ಜೀವನದಲ್ಲಿಯೇ ಸರಿಯಾದ ಪಾಠ ಕಲಿಸಿ ಸೆರೆಮನೆ ವಾಸಕ್ಕೆ ಕಾರಣವಾಗಿದೆ, ವಿವಾಹವಾಗಿದ್ದರೂ ಮತ್ತೋರ್ವಳ ಆಸೆಯಿಂದ ಉದ್ಯಮಿ, ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದ್ದ ರಮೇಶ್ ಕುಮಾರ್ ತನ್ನ ಜೀವವನ್ನೇ ಬರ್ಬರ ರೀತಿಯಲ್ಲಿ ಬಲಿ ಕೊಟ್ಟಿದ್ದಾನೆ.ರಮೇಶ್ ಮಿಸ್ ಆಗಿದ್ದು ಗೊತ್ತೇ ಇರಲಿಲ್ಲ !
ವಿಪರ್ಯಾಸ ನೋಡಿ, ನಿಹಾರಿಕಾಳ ಸಹವಾಸ ಮಾಡಿದ ಬಳಿಕ ರಮೇಶ್ನ ಪತ್ನಿ ಅರ್ಚನಾ ಕೂಡ ಆತನಿಂದ ದೂರವಾಗಿದ್ದಳು. ಒಂದೂವರೆ ವರ್ಷದಿಂದ ರಮೇಶ್ ಮತ್ತು ಅರ್ಚನಾಳಿಗೆ ಸಂಪರ್ಕವೇ ಇರಲಿಲ್ಲ. ಹೀಗಾಗಿ ರಮೇಶ್ ನಾಪತ್ತೆಯಾದ ವಿಚಾರದ ದೂರು ಕೂಡ ದಾಖಲಾಗಿರಲೇ ಇಲ್ಲ. ರಮೇಶ್ನನ್ನು ಹತ್ಯೆ ಮಾಡಲಾಗಿದೆ ಎಂದು ಕೊಡಗು ಪೊಲೀಸರೇ ರಮೇಶ್ನ ವಕೀಲ ಸಹೋದರನಿಗೆ ಮಾಹಿತಿ ನೀಡಿದ್ದರು.
ಹತ್ಯೆಗೀಡಾದ ರಮೇಶ್ ಕುಮಾರ್ ಕುಟುಂಬ ವರ್ಗ ತೆಲಂಗಾಣದ ಸಿಂಗಾಪುರ ಸಿಟಿಯಿಂದ ಕೊಡಗಿಗೆ ಬಂದು ತನಿಖೆ ಕೈಗೊಂಡ ಪೊಲೀಸರನ್ನು ಪ್ರಶಂಶಿಸಿದ್ದರು. ರಮೇಶ್ ಕುಮಾರ್ ದೇಹ ಪೂರ್ತಿ ಸುಟ್ಟು ಹೋಗಿದ್ದರಿಂದಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಕೆಲವು ಮೂಳೆಗಳನ್ನೇ ಪಡೆದುಕೊಂಡು ಅದನ್ನು ವಿಸರ್ಜಿಸಿ ಅಂತಿಮ ಸಂಸ್ಕಾರದ ಕ್ರಿಯೆ ಕೈಗೊಂಡರು. ತೆಲಂಗಾಣದಿAದ ಕರ್ನಾಟಕದಲ್ಲಿ ೮೦೦ ಕಿ.ಮೀ. ಅಂತರದಲ್ಲಿ ರಮೇಶ್ ಶವ ಸುಟ್ಟು ಹಾಕಿದ್ದರೂ ಎಂದೂ ಯಾರೂ ಭಾವಿಸಿರಲಿಲ್ಲ. ಎಲ್ಲರ ನಿರೀಕ್ಷೆ ಮೀರಿ, ಲೆಕ್ಕಾಚಾರ ತಪ್ಪುವಂತೆ ರಮೇಶ್ ಕುಮಾರ್ ಹತ್ಯೆ ಮತ್ತು ಆರೋಪಿಗಳ ಬಂಧನವೂ ಆಯಿತು.
ಯಾಕೆ ಮಹತ್ವದ ಕೇಸ್ ಎಂದರೆ...
ರಮೇಶ್ ಕುಮಾರ್ ನನ್ನು ತೆಲಂಗಾಣದಲ್ಲಿ ಅಂದರೆ ಕೊಡಗಿನಿಂದ ೮೦೦ ಕಿ.ಮೀ. ದೂರದಲ್ಲಿ ನಿಹಾರಿಕಾ, ರಾಣ ಸೇರಿಕೊಂಡು ಕೊಲೆ ಮಾಡಿ ಶವವನ್ನು ಬೆಂಗಳೂರಿಗೆ ತಂದು ಡಾ. ನಿಖಿಲ್ನ ಜೊತೆ ರಾತೋರಾತ್ರಿ ಕೊಡಗಿನ ಪನ್ಯಕ್ಕೆ ತಂದು ಇಲ್ಲಿ ಪೆಟ್ರೋಲ್ ಹಾಕಿ ಸುಟ್ಟು ನಿಟ್ಟುಸಿರುಬಿಡುತ್ತಾರೆ. ಯಾರಿಗೂ ಗೊತ್ತಾಗದಂತೆ ಪ್ರಕರಣ ಮುಗಿಸಿದ್ದೇವೆ ಎಂದು ಇವರು ಅಂದುಕೊಳ್ಳುತ್ತಾರೆ. ನಿಜ, ಮೂವರು ಕೂಡ ಅತೀ ಬುದ್ದಿವಂತರು, ರಾಣನಿಗೆ ಕ್ರಿಮಿನಲ್ ಮನಸ್ಥಿತಿ ಕೂಡ ಇದ್ದ ಹಿನ್ನೆಲೆಯಲ್ಲಿ, ಬೇರೇ ಪ್ರಕರಣಗಳಂತೆ ಇಲ್ಲಿ ಹೆಚ್ಚಿನ ಸಾಕ್ಷಾö್ಯಧಾರಗಳನ್ನು ಹತ್ಯೆ ನಡೆದ ಮತ್ತು ಶವ ಸುಟ್ಟ ಸ್ಥಳದಲ್ಲಿ ಎಲ್ಲಿಯೂ ಬಿಟ್ಟಿರಲಿಲ್ಲ.
ಹೀಗಿದ್ದರೂ, ಕೊಡಗು ಪೊಲೀಸರು, ಛಲ ಬಿಡದೇ ಸಿಕ್ಕಿದ್ದ ಸಣ್ಣ ಸುಳಿವನ್ನು ಬೆನ್ನತ್ತಿ ಮೂವರೂ ಆರೋಪಿಗಳನ್ನು ಸಾವಿರಾರು ಕಿ.ಮೀ. ಸಂಚರಿಸಿ ಪತ್ತೆ ಮಾಡಿ ಜೈಲಿಗಟ್ಟಿದ್ದು ಮಾತ್ರ ನಿಜಕ್ಕೂ ಗ್ರೇಟ್.
ಬಂಧನದ ನಂತರವೂ ಸಿನಿಮೀಯ ಘಟನೆಯಂತೆ ರಾಣ ಪೊಲೀಸ್ ಕಸ್ಟಡಿಯಿಂದ ಪರಾರಿಯಾದರೂ, ಅಲ್ಲಿಯೂ ಛಲ ಬಿಡದೇ ಕೊಡಗು ಪೊಲೀಸರು ಹರಿದ್ವಾರ, ದೆಹಲಿ, ಜೈಪುರಗಳಿಗೆ ತೆರಳಿ ರಾಣನ ಬೆನ್ನು ಬಿದ್ದು ಕೊನೆಗೂ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದರು.
ಗುರುತು ಪರಿಚಯವೇ ಇಲ್ಲದ ನಗರ, ಯಾರೂ ಸಹಾಯ ಮಾಡುವವರಿಲ್ಲದ ಪರಿಸ್ಥಿತಿ, ವಿಮಾನ ಪ್ರಯಾಣ ಬೇರೆ ಅನೇಕ ಪೊಲೀಸರಿಗೆ ಹೊಸದ್ದು. ಉತ್ತರ ಭಾರತದಲ್ಲಿ ರುಚಿಸದ ತಿಂಡಿತಿನಿಸು, ನಿದ್ದೆಯಿಲ್ಲ, ವಿಶ್ರಾಂತಿ ಇಲ್ಲ, ರಾಣನಿಗಾಗಿ ಸತತ ಹುಡುಕಾಟ, ಕೊಡಗಿನಲ್ಲಿ ರಾಣ ಪರಾರಿಯಾಗಲು ಕಾರಣರಾದ ಪೊಲೀಸ್ ಇಲಾಖೆ ಬಗ್ಗೆ ಕೆಲವರಿಂದ ಟೀಕೆ, ಆಕ್ರೋಶ, ಕುಟುಂಬ ವರ್ಗದಿಂದ ಎಲ್ಲಿದ್ದೀರಿ, ಹೇಗಿದ್ದೀರಿ, ಯಾವಾಗ ಬರುತ್ತೀರಿ ಎಂದೆಲ್ಲಾ ಆತಂಕದ ಕರೆಗಳು.
ಈ ಎಲ್ಲಾ ಸವಾಲುಗಳನ್ನೂ ಮೀರಿ ಕೊಡಗು ಪೊಲೀಸರು ಅರೆಬೆಂದ ಸ್ಥಿತಿಯಲ್ಲಿದ್ದ ಅಪರಿಚಿತವಾಗಿದ್ದ ಶವದ ಪ್ರಕರಣಕ್ಕೆ ಮುಕ್ತಾಯ ಹಾಡಿದ್ದಾರೆ. ಕೊಡಗು ಮಾತ್ರವೇ ಅಲ್ಲ, ಕರ್ನಾಟಕದ ಪೊಲೀಸ್ ಇಲಾಖೆಯ ದಾಖಲೆಗಳಲ್ಲಿಯೇ ಅಪರೂಪದ ಪ್ರಕರಣ ಎಂಬ ದಾಖಲೆಗೆ ಈ ತನಿಖೆ ಕಾರಣವಾಗಿದೆ, ಸೂಕ್ಷö್ಯಮತಿಯ, ಚಾಣಕ್ಷö್ಯ ಪೊಲೀಸ್ ಅಧಿಕಾರಿಯ ಮಾರ್ಗದರ್ಶನ ಇದ್ದರೆ ಎಂತಹ ಪ್ರಕರಣವನ್ನೂ ಬೇಧಿಸಬಹುದು ಎಂಬುದನ್ನು ಈ ಕೇಸ್ ನಿರೂಪಿಸಿದೆ. ಈ ಅಂಕಣದ ಪ್ರಾರಂಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೊಲೆ ನಡೆದ ಸ್ಥಳದಲ್ಲಿ ಹೇಳಿದ್ದ ಮಾತನ್ನು ಉಲ್ಲೇಖಿಸಲಾಗಿತ್ತು. ಆ ಮಾತೆಂದರೆ,,
'ಎಲ್ಲಾ ಸುಳಿವು ದೊರಕಿ ಕೊಲೆ ಪ್ರಕರಣ ಪತ್ತೆ ಹಚ್ಚುವುದು ಗ್ರೇಟ್ ಅಲ್ಲ. ಯಾವುದೇ ಸುಳಿವಿಲ್ಲದ ಕೇಸ್ನಲ್ಲಿ ನಿಜವಾದ ಹಂತಕನನ್ನು ಪತ್ತೆಹಚ್ಚಿ ಶಿಕ್ಷೆ ನೀಡುವುದೇ ನಿಜವಾದ ಚಾಲೆಂಜ್. ಕೊಡಗು ಪೊಲೀಸರಾಗಿ ನಾವು ಈ ಕಠಿಣ ಚಾಲೆಂಜ್ ಸ್ವೀಕರಿಸಿ, ಕೊಲೆಯಾದವನ್ನು ಮಾಹಿತಿ ಪತ್ತೆಹಚ್ಚಿ, ಹಂತಕರನ್ನು ಸೆರೆಹಿಡಿಯಲೇಬೇಕು.
ಈ ಮೂಲಕ ಕೊಡಗು ಪೊಲೀಸ್ ಏನೆಂದು ತೋರಿ ಸೋಣ,, !' ಹೌದು,, ನುಡಿದಂತೆ ನಡೆದಿದ್ದಾರೆ, ಹೇಳಿ ದಂತೆ ಮಾಡಿ ತೋರಿಸಿದ್ದಾರೆ,, ಸುಳಿವಿಲ್ಲದ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಸಮಾಜಕ್ಕೆ ನಿರೂಪಿಸಿಯೇ ಬಿಟ್ಟಿದ್ದಾರೆ - ಕೊಡಗು ಪೊಲೀಸ್ ಏನೆಂದು!!! (ಮುಕ್ತಾಯ)