ಮಡಿಕೇರಿ, ನ. ೧೬: ಮಕ್ಕಳ ದಿನಾಚರಣೆಯ ದಿನವಾದ ತಾ. ೧೪ ರ ಗುರುವಾರದಂದು ಜಿಲ್ಲೆಯ ಹಲವೆಡೆ ಸಂಭ್ರಮದ ಕಾರ್ಯಕ್ರಮಗಳು ಜರುಗಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ, ವಿವಿಧ ಶಾಲೆಗಳು, ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಮೂಲಕ ಚಾಚಾ ನೆಹರು ಅವರ ಜನ್ಮದಿನದಂದು ಆಯೋಜಿತಗೊಳ್ಳುವ ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಜರುಗಿದವು.ಮಡಿಕೇರಿ: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಸಂಚಾಲಕಿ ಕವಿತಾ ಬೊಳ್ಳಪ್ಪ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರಾಂಶುಪಾಲೆ ಸವಿತಾ ಎಂ.ಜಿ., ಶಾಲಾ ವಿದ್ಯಾರ್ಥಿ ನಾಯಕರು ಗಳಾದ ಭವನ್ ಜಿ.ವಿ., ಜನಿಷಾ ಸುಬ್ರಮಣಿ ಹಾಗೂ ವಿವಿಧ ತಂಡಗಳ ನಾಯಕರುಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ನಾಯಕರು ಇಂದಿನ ಮಕ್ಕಳು ಒಳ್ಳೆಯ ನಾಯಕತ್ವವನ್ನು ಬೆಳೆಸಿಕೊಂಡರೆ ಮುಂದೆ ಅವರು ಉತ್ತಮ ನಾಯಕರಾಗಿ ಮತ್ತು ಒಳ್ಳೆಯ ಪ್ರಜೆಗಳಾಗಿ ಹೊರ ಹೊಮ್ಮುತ್ತಾರೆ ಎಂದು ಹೇಳಿದರು.
ಶಾಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮಕ್ಕಳನ್ನು ರಂಜಿಸಿದರು. ನಂತರ ಮಕ್ಕಳಿಗೆ ತರಗತಿವಾರು ಆಟೋಟ ಸ್ಪರ್ಧೆ ಗಳನ್ನು ನಡೆಸಿ ವಿಜೇತರಿಗೆ ಬಹು ಮಾನಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು. ಮೇಘಾ ಭಟ್ ಪ್ರಾರ್ಥಿಸಿದರು. ಪೊನ್ನಮ್ಮ ಕೆ.ಎಸ್., ಟೈನಿ ಬಿ.ಪಿ. ಹಾಗೂ ಭರತ್ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು. ಪೊನ್ನಮ್ಮ ಕೆ.ಎಸ್. ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಗಣಿತ ಸ್ಪರ್ಧೆಯ ವಿಜೇತ ಮಕ್ಕಳಿಗೆ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ಗೋಪಾಲಕೃಷ್ಣ ಬಹುಮಾನ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನೇಕ ಯೋಜನೆಗಳನ್ನು ರೂಪಿಸಿದೆ. ಪೋಷಕರು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚಿನ ಜ್ಞಾನ ಪಡೆದ ಶಿಕ್ಷಕರುಗಳು ಸರ್ಕಾರಿ ಶಾಲೆಯಲ್ಲಿ ಇದ್ದಾರೆ. ಉತ್ತಮವಾಗಿ ಕಲಿಸುತ್ತಿದ್ದಾರೆ. ಮಕ್ಕಳು ಕೂಡ ಕಲಿಕೆಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ತಂಗಮ್ಮ, ಪಂಚಾಯಿತಿ ಕಾರ್ಯದರ್ಶಿ ಕೆ.ವಿ. ಹರೀಶ್, ಶಿಕ್ಷಕರಾದ ಶಿವಶಂಕರ್, ಮೋಹನ ಕುಮಾರಿ ಇದ್ದರು.
ಚೆಯ್ಯಂಡಾಣೆ ಸ.ಮಾ. ಪ್ರಾಥಮಿಕ ಶಾಲೆಹೆಬ್ಬಾಲೆ: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಹವ್ಯಾಸಗಳನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಅನುದಾನಿತ ಶಾಲೆಗಳ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮೆ.ನಾ. ವೆಂಕಟ ನಾಯಕ್ ಹೇಳಿದರು. ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಸುಶೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಪ್ರಜ್ವಲ್, ದರ್ಶನ್ ಗೌಡ, ವಿ.ಟಿ. ಜೀವನ್, ಮನೋಜ್, ಧನುಷ್, ರಾಹುಲ್, ಚಿಂತನ, ಅಂಕಿತ, ಹರ್ಷಿತ್, ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್, ಶಿಕ್ಷಕರಾದ ಜಾನಕಿ, ಬಬಿತ, ಕೆ.ಎಸ್., ರಮ್ಯಾ, ಎಸ್.ಕೆ. ಶಿವಾನಂದ, ದೈಹಿಕ ಶಿಕ್ಷಣ ಶಿಕ್ಷಕಿ ಹೆಚ್.ಬಿ. ವಂಜಮ್ಮ, ಪುಷ್ಪಾವತಿ ಉಪಸ್ಥಿತ ರಿದ್ದರು. ವಿದ್ಯಾರ್ಥಿ ಪ್ರಗತಿ ಸ್ವಾಗತಿ ಸಿದರು. ಉಲ್ಲಾಸ್ ವಂದಿಸಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳ ದಿನಾಚರಣೆ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಮುಳ್ಳೂರು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜಾತ್ರೋತ್ಸವ ಶೀರ್ಷಿಕೆ ಯಡಿಯಲ್ಲಿ ವಿನೂತನವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಮತ್ತು ಸಹ ಶಿಕ್ಷಕರು ಜೊತೆಗೂಡಿ ವಾರ ಮೊದಲೆ ಶಾಲಾ ಮುಂಭಾಗದಲ್ಲಿ ನೈಜ ಜಾತ್ರೆಯ ವಾತಾವರಣ ಸೃಷ್ಟಿಸಿ ಸಿದ್ಧತೆ ನಡೆಸಿದರು. ಶಾಲಾ ಮುಂಭಾಗದಲ್ಲಿ ಸೃಷ್ಟಿಸಿದ ಜಾತ್ರೆಯಲ್ಲಿ ಕೃತಕವಾಗಿ ತಯಾರಿಸಿದ ಜಾಯಿಂಟ್ ವೀಲ್, ಕೊಲಂಬಸ್ ಮುಂತಾದವುಗಳನ್ನು ಅಳವಡಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ನಾನಾ ತರಹದ ಅಟಿಕೆ ವಸ್ತುಗಳು, ಬಲೂನ್, ಗೊಂಬೆ ಮುಂತಾದ ಅಟಿಕೆ ವಸ್ತುಗಳನ್ನು ತಂದು ಮಾರಾಟ ಮಾಡಿದರು. ಮಕ್ಕಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಸೇರಿದಂತೆ ಎಳನೀರನ್ನು ತಂದು ಜಾತ್ರೆಯಲ್ಲಿ ಮಾರಾಟ ಮಾಡಿದರು. ವಿಶೇಷವಾಗಿ ಮನೆಯಲ್ಲಿ ತಯಾರಿಸಿದ ಪಾನಿಪುರಿ, ಬೇಲ್‌ಪುರಿ, ಚರುಮುರಿಯನ್ನು ಜಾತ್ರೆಗೆ ತಂದು ಮಾರಾಟ ಮಾಡಿದರು.
ಜಾತ್ರೆಯಲ್ಲಿ ಕೃತಕ ಸಿನಿಮಾ ಥಿಯೇಟ್‌ರನ್ನು ನಿರ್ಮಿಸಲಾಗಿತ್ತು. ಸಿನೆಮಾ ಥಿಯೇಟರ್ ಒಳಗೆ ಸಿನೆಮಾ ವೀಕ್ಷಿಸಲು ಆಸನಗಳನ್ನು ಅಳವಡಿಸಲಾಗಿತ್ತು. ಕೊನೆಗೆ ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಮಕ್ಕಳ ಸಿನಿಮಾ ವೊಂದನ್ನು ತೋರಿಸಲಾಯಿತು. ಒಟ್ಟಿನಲ್ಲಿ ಮುಳ್ಳೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಜಾತ್ರೆ ನಡೆಯುವ ದೃಶ್ಯದಂತೆ ಆಚರಣೆ ಮಾಡಲಾಯಿತು.
ವಿಶೇಷವಾಗಿ ಜಾತ್ರೆಯಲ್ಲಿ ಮಕ್ಕಳೆ ವ್ಯಾಪಾರಿಗಳು ಮತ್ತು ಮಕ್ಕಳೆ ಗ್ರಾಹಕರಾಗಿದ್ದು ವಿಶೇಷವಾಗಿತು. ಜಾತ್ರೆಯಲ್ಲಿ ಪೋಷಕರು, ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಶಾಲೆಯ ವಿದ್ಯಾರ್ಥಿ ನಾಯಕ ಮೋಕ್ಷಿತ್ ವಹಿಸಿದ್ದರು. ಅತಿಥಿಗಳಾಗಿ ಶಾಲೆಯ ಗೃಹಮಂತ್ರಿ ಚರಣ್, ಉಪಾಧ್ಯಕ್ಷರಾಗಿ ಜಸ್ಮಿತಾ ವೇದಿಕೆಯಲ್ಲಿದ್ದರು.
ದಿನದ ಮಹತ್ವದ ಕುರಿತು ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಆರ್. ಪ್ರೇಮಕುಮಾರಿ ಮಾತನಾಡಿದರು. ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪತ್ರಕರ್ತ ಅಶ್ರಫ್ ನೀಡಿದ ಬಹುಮಾನವನ್ನು ಅತಿಥಿಗಳು ವಿತರಿಸಿದರು. ಕಾರ್ಯಕ್ರಮಕ್ಕೆ ಶಿಕ್ಷಕಿ ಜಯಪ್ರದ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಏರ್ಪಡಿಸಿದರು.
ವಿದ್ಯಾರ್ಥಿ ಪ್ರಣಮ್ಯ ಸ್ವಾಗತಿಸಿ, ಮೌನ ನಿರೂಪಿಸಿ, ಯಶ್ಮಿತ ವಂದಿಸಿದರು.
ಹೆಗ್ಗಳ ಶಾಲೆಕಡಗದಾಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿ ಯಿಂದ ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ವಿಜೃಂಭಣೆಯಾಗಿ ಕಾರ್ಯಕ್ರಮವು ನೆರವೇರಿತು.
ಮಕ್ಕಳು ಕೃಷ್ಣ, ರಾಧೆ, ಆಂಜನೇಯ, ಪೊಲೀಸ್, ಸೈನಿಕ, ಭಾರತಾಂಬೆ, ಮಹಾತ್ಮ ಗಾಂಧೀಜಿ, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಟೊಮೊಟೊ, ಸ್ಟಾçಬೆರಿ, ಸೇಬು, ವಿವೇಕಾನಂದ, ರೈತ, ಪೂಜಾರಿ, ಏಂಜಲ್, ಛದ್ಮವೇಷ ರೂಪ ಧಾರಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಶುಭ ಅವರು ಮಾತನಾಡಿ, ಮಕ್ಕಳ ವೇಷ ಭೂಷಣಗಳು ನಮ್ಮ ಸಂಸ್ಕೃತಿ, ಇತಿಹಾಸ, ಪುರಾಣವನ್ನು ನೆನಪಿಸುತ್ತದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಹಿರಿಯರ ತತ್ವ, ಆದರ್ಶಗಳು, ಉಳಿದು ಮುಂದಿನ ಪ್ರಜೆಗಳಾದ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು. ಎಲ್ಲ ಮಕ್ಕಳು ವಿಶ್ವಮಾನವರಾಗಿರುತ್ತಾರೆ. ಆ ಮಕ್ಕಳಿಗೆ ಧೈರ್ಯ ತುಂಬಿ ಸರಿಯಾದ ಮಾರ್ಗದರ್ಶನ ನೀಡಬೇಕಾಗುತ್ತದೆ. ಚಿಕ್ಕಂದಿನಿAದ ತೇನ್ ಸಿಂಗ್ ಕಂಡ ಕನಸನ್ನು ಜೀವನದಲ್ಲಿ ಸಾಧಿಸಿದ್ದನ್ನು ಉದಾಹರಣೆ ನೀಡಿದರು. ಮಕ್ಕಳ ಗುರಿ ಸಾಧನೆಗೆ ಸರಿಯಾದ ಮಾರ್ಗದರ್ಶ ಕರಾಗಿ ಪೋಷಕರು ಶಿಕ್ಷಕರು ದಾರಿದೀಪವಾಗಬೇಕೆಂದು ತಿಳಿಸಿದರು.
ಮೇಲ್ವಿಚಾರಕಿ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಕ್ಕಳ ದಿನಾಚರಣೆ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷಿತ ಆರೈಕೆ, ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ಅರಿವು ಮೂಡಿಸುವ ಕಾರ್ಯಕ್ರಮ ವಾಗಬೇಕು ಎಂದು ತಿಳಿಸಿದರು. ವಿನೂತನವಾಗಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆ ಅನಿಲ, ಸಹಾಯಕಿ ಹೇಮಲತಾ ಅವರು ಮಕ್ಕಳ ಹೆಸರಿನಲ್ಲಿ ತರಕಾರಿ ಪಾಟ್‌ಗಳು, ಮಾಡುವುದರ ಮೂಲಕ ಮಕ್ಕಳಲ್ಲಿ ರಾಸಾಯನಿಕ ಮುಕ್ತ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸಿದರು.
ಅಮೃತಸ್ಥಾನ ಎಸ್ಟೇಟ್ ಮಾಲೀಕರಾದ ಗಂಗಾ ಅವರು ಎಲ್ಲಾ ಛದ್ಮವೇಷಧಾರಿಗಳಿಗೆ ಬಹುಮಾನ ವನ್ನು ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಕಲ್ಮೇಶ್ ಅವರಿಂದ ಹಾಜರಿದ್ದ ಎಲ್ಲಾ ಮಹಿಳೆಯರಿಗೆ ಮತ್ತು ಮರಗೋಡು ವೃತ್ತದ ಸಹಾಯಕಿ ಯರಿಗೆ ಆರೋಗ್ಯ ತಪಾಸಣೆ ಬಿಪಿ, ಶುಗರ್, ಪರಿಶೀಲನೆ ನೆರವೇರಿತು. ಪ್ರತಿಮ ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜೋಯಪ್ಪ, ಶಮ್ಮಿ ಪ್ರಭು ಇನ್ನರ್ ವ್ಯಾಲಿ ಸಂಸ್ಥೆಯ ಸದಸ್ಯರು, ಕುಂಞಪ್ಪ, ರತಿ, ಪುಟ್ಲಪ್ಪ ಪೈಸಾರಿ, ಅಂಗನವಾಡಿ ಕಾರ್ಯಕರ್ತೆ ಪುಷ್ಪ ಹಾಜರಿದ್ದರು.ಐಗೂರು: ಸೋಮವಾರ ಪೇಟೆ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘ ಮತ್ತು ಲಯನ್ಸ್ ಸಂಸ್ಥೆಯ ವತಿಯಿಂದ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಲಯನ್ಸ್ನ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು. ದಿ. ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕುರಿತು ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರ ಸಂಘದ ತಂಗಮ್ಮ ಮಾತನಾಡಿದರು. ಎಲ್.ಕೆ.ಜಿ. ಮತ್ತು ಶಾಲಾ ವಿದ್ಯಾರ್ಥಿಗಳಿಂದ ಚಿತ್ರಕಲೆ, ದೇಶಭಕ್ತಿ ಗೀತೆ, ನೃತ್ಯ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಲಯನ್ಸ್ ಸಂಸ್ಥೆ, ಸ.ನಿ. ನೌಕರರ ಸಂಘ ಮತ್ತು ಕಸಾಪ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ರೋಹಿತ್, ಕಾರ್ಯದರ್ಶಿ ಪ್ರವೀಣ್, ಸ.ನೌ. ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಉಪಾಧ್ಯಕ್ಷ ಕುಟ್ಟಪ್ಪ, ಖಜಾಂಚಿ ಕೆಂಚೆಗೌಡ, ನಿರ್ದೇಶಕರಾದ ಮೇದಪ್ಪ, ಸುರೇಶ್, ಶೋಭಾ, ಮಾಚಯ್ಯ, ಚಂದ್ರಪ್ಪ, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು, ಅಧ್ಯಾಪಕ ವೃಂದ ಮತ್ತು ಪೋಷಕರು ಭಾಗವಹಿಸಿದ್ದರು.ಸೋಮವಾರಪೇಟೆ: ಸಮೀಪದ ಮಾದಾಪುರದಲ್ಲಿರುವ ಎಸ್.ಜೆ.ಎಂ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಮಾದಾಪುರ ಪಟ್ಟಣ ವ್ಯಾಪ್ತಿಯ ಭಾಗಗಳಿಗೆ ತೆರಳಿ ಸಾರ್ವಜನಿಕರಿಗೆ ಸಿಹಿ ನೀಡಿ ಮಕ್ಕಳ ದಿನವನ್ನು ಆಚರಿಸಿದರು. ಸಮುದಾಯ ಸಹಾಯಕ ವರ್ಗವೆಂದು ಗುರುತಿಸಲಾಗಿರುವ ಆರಕ್ಷಕ ಠಾಣೆ, ಆಸ್ಪತ್ರೆ, ಬ್ಯಾಂಕ್, ಆಟೋ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಅಲ್ಲಿನ ಸಿಬ್ಬಂದಿಗಳು, ಸಾರ್ವಜನಿಕರಿಗೆ ಸಿಹಿ ನೀಡಿ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು.ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯ, ಶಿಕ್ಷಕರುಗಳಾದ ನಿವೇದಿತ, ಲವ್ಯ, ಜೊಹ್ರಾ, ದೀಪಿಕಾ, ಧನ್ಯ, ಅಂಕಿತ, ಆದಿರಾ, ಸಂಜಯ್ ಸೇರಿದಂತೆ ಶಾಲಾಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಚೆಯ್ಯಂಡಾಣೆ: ಬಕ್ಕ ಹಾಗೂ ಕಾರುಗುಂದ ೧ ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸೌಮ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ
ಪುಟಾಣಿ ಮಕ್ಕಳಿಂದ ಪ್ರಾರ್ಥನೆ, ಅಭಿನಯ ಗೀತೆ ಮತ್ತು ಆಟೋಟ ಸ್ಪರ್ಧೆಗಳು ನಡೆದವು. ವಿಜೇತರಾದ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಧುಮೇಹ ತಪಾಸಣೆ ಶಿಬಿರ ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಯರಾದ ಶೈಲಜಾ, ರೋಹಿಣಿ ಹಾಗೂ ಆಶಾ ಕಾರ್ಯPಮಡಿಕೇರಿ: ಮಹದೇವಪೇಟೆ ವಾರ್ಡ್ ಸಂಖ್ಯೆ ೮ರ ಚೌಡೇಶ್ವರಿ ದೇವಸ್ಥಾನ ಸಮೀಪದಲ್ಲಿರುವ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ವಾರ್ಡ್ ಸದಸ್ಯೆ ಸವಿತ ರಾಕೇಶ್ ಮಾತನಾಡಿದರು. ಮಕ್ಕಳಿಗೆ ಛದ್ಮವೇಷ ಹಾಗೂ ಕಾಳು ಹೆಕ್ಕುವ ಸ್ಪರ್ಧೆ ನಡೆಸಲಾಯಿತು. ಶ್ವೇತಾ ಪ್ರಾರ್ಥಿಸಿದರು, ಸೇಲಿಕತ್ ಸ್ವಾಗತಿಸಿ, ಕಾರ್ಯಕರ್ತೆ ಶ್ರುತಿ ನಿರೂಪಿಸಿ, ವಂದಿಸಿದರು. ಸಮಿತಿ ಅಧ್ಯಕ್ಷೆ ಸೋನಾ ಚಂದನ್, ಸಹಾಯಕಿ ಶ್ಯಾಮಲಾ ಹಾಗೂ ಪೋಷಕರು ಹಾಜರಿದ್ದರು. ವಾರ್ಡ್ ಸದಸ್ಯೆ ಸವಿತಾ ರಾಕೇಶ್ ಎಲ್ಲಾ ಮಕ್ಕಳಿಗೆ ಬಹುಮಾನಗಳನ್ನು ನೀಡಿದರು.Àರ್ತೆ ಜಯಚಿತ್ರ, ಪ್ರಮೀಳಾ, ಸಹಾಯಕಿ ಹೇಮಾವತಿ, ಪೋಷಕರು, ಮತ್ತಿತರರು ಹಾಜರಿದ್ದರು.
ಈ ಸಂದರ್ಭ ಆರೋಗ್ಯ ಕಾರ್ಯಕರ್ತೆಯರಾದ ಕೃತಿಕಾ ರಾಣಿ ಮತ್ತು ಚಲಿತ ಅವರಿಂದ *ಗೋಣಿಕೊಪ್ಪ: ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಾಷಣ, ನೃತ್ಯ, ಸಂಗೀತ ಪ್ರತಿಭೆಗಳ ಮೂಲಕ ಗಮನ ಸೆಳೆದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದರು.
ಮುತ್ತೂಟ್ ಸಂಸ್ಥೆಯ ವತಿಯಿಂದ ಅತ್ಯುತ್ತಮ ಅಂಕಗಳಿಸಿದ ಐದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ
ರತ್ನ ಪುರಸ್ಕಾರ ನೀಡುವ ಮೂಲಕ ಗೌರವಿಸಲಾಯಿತು. ಮುಖ್ಯ ಶಿಕ್ಷಕ ಹೆಚ್.ಕೆ ಕುಮಾರ್ ಹಾಗೂ ಸಹ ಶಿಕ್ಷಕರು ಮುತ್ತೂಟ್ ಸಂಸ್ಥೆಯ ಪ್ರಮುಖರು ಅತಿಥಿಗಳಾಗಿ ಭಾಗವಹಿಸಿದ್ದರು.