ಗೋಣಿಕೊಪ್ಪ ವರದಿ, ನ. ೧೭ : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ಸಹಯೋಗದಲ್ಲಿ ನಡೆದ ಹಾಕಿಕೂರ್ಗ್ ಟೂರ್ನಿಯಲ್ಲಿ ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ಚಾಂಪಿಯನ್ ಸ್ಥಾನ ಅಲಂಕರಿಸಿದ್ದು, ಮೂರ್ನಾಡು ಬ್ಲೇಜ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಹಣಾಹಣಿಯಲ್ಲಿ ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ಮೂರ್ನಾಡು ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಬೇಗೂರು ಪರವಾಗಿ ಚೆಪ್ಪುಡಿರ ಪ್ರಣವ್ ಎರಡು ಗೋಲು ಹೊಡೆದು ಟೂರ್ನಿ ಗೆಲ್ಲಿಸಿಕೊಟ್ಟರು. ಬ್ಲೇಜ್ ತಂಡಕ್ಕೆ ದೊರೆತ ೯ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಲಾಗದೆ ಸೋಲಿಗೆ ಶರಣಾಯಿತು.
ಕೋಣನಕಟ್ಟೆ ಇಲೆವೆನ್ ತಂಡದ ದಿವಾನ್ ಸುಬ್ಬಯ್ಯ ಬೆಸ್ಟ್ ಡಿಫೆಂಡರ್, ಬೇಗೂರು ತಂಡದ ವೇಣು ಬೆಸ್ಟ್ ಗೋಲ್ ಕೀಪರ್, ಕುಂದ ತಂಡದ ಅನ್ನಡಿಯಂಡ ಪೊನ್ನಣ್ಣ ಬೆಸ್ಟ್ ಮಿಡ್ ಫೀಲ್ಡರ್, ಬೇಗೂರು ತಂಡದ ಅಯ್ಯಂಡ ಪೊನ್ನಣ್ಣ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿ ಪಡೆದುಕೊಂಡರು.
ನವೆಂಬರ್ ೫ ರಿಂದ ಆರಂಭಗೊAಡಿದ್ದ ಲೀಗ್ ಟೂರ್ನಿ ಮತ್ತು ನಾಕೌಟ್ ಟೂರ್ನಿ ಭಾನುವಾರ ತೆರೆ ಕಂಡಿತು. ಇಲ್ಲಿ ಪ್ರೀ ಕ್ವಾರ್ಟರ್ ಪ್ರವೇಶಿಸಿದ ೧೬ ತಂಡಗಳು ನೆಸ್‌ಕೆಫೆ ಕಪ್‌ಗೆ ಪ್ರವೇಶ ಪಡೆದುಕೊಂಡವು.
ದಾನಿ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಚೆಪ್ಪುಡಿರ ಭವ್ಯ ರಾಕೇಶ್, ಅಂಜಪರವAಡ ಅನಿಲ್, ಮೇವಡ ಚಿಣ್ಣಪ್ಪ ಬಹುಮಾನ ವಿತರಿಸಿದರು. ಚೆಪ್ಪುಡಿರ ಕಾರ್ಯಪ್ಪ ಪಂದ್ಯದ ವಿವರಣೆ ನೀಡಿದರು. ಟೂರ್ನಿ ನಿರ್ದೇಶಕ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಳ್ಳಿಚಂಡ ಗೌತಂ, ತೀರ್ಪುಗಾರರಾಗಿ ಸಣ್ಣುವಂಡ ಲೋಕೇಶ್, ಕುಪ್ಪಂಡ ದಿಲನ್ ಬೋಪಣ್ಣ ಕಾರ್ಯ ನಿರ್ವಹಿಸಿದರು.
ಒಲಂಪಿಯನ್ ಕರ್ನಲ್ ಬಾಳೆಯಡ ಕೆ. ಸುಬ್ರಮಣಿ ಮಾತನಾಡಿ, ಹೆಚ್ಚು ಟೂರ್ನಿ ಆಯೋಜನೆಯಿಂದ ಪ್ರತಿಭೆಗೆ ಅವಕಾಶ ದೊರೆಯುತ್ತಿದೆ ಎಂದರು. ಹಾಕಿಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ಮಾತನಾಡಿ, ಹಾಕಿಕೂರ್ಗ್ ಟೂರ್ನಿ ಹೆಚ್ಚು ನಡೆಯುತ್ತಿದ್ದು, ಕ್ರೀಡೆಗೆ ಪ್ರೋತ್ಸಾಹ ದೊರೆಯುತ್ತಿದೆ ಎಂದರು. ಪ್ರಧಾನ ಕಾರ್ಯದರ್ಶಿ ಅಮ್ಮಂಡಿರ ಚೇತನ್, ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಇದ್ದರು.
ನೆಸ್‌ಕೆಫೆ ಕಪ್‌ಗೆ ಪ್ರವೇಶ ಪಡೆದ ತಂಡಗಳು
ಬ್ಲೇಜ್ ಮೂರ್ನಾಡು, ನಾಪೋಕ್ಲು ಶಿವಾಜಿ, ಬೊಟ್ಟಿಯತ್ನಾಡ್ ಕುಂದ, ಎಸ್‌ಆರ್‌ಸಿ ಕಾಕೋಟು ಪರಂಬು, ಯುಎಸ್‌ಸಿ ಬೇರಳಿನಾಡ್, ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್ ರೆಡ್, ಮಹಾದೇವ ಸ್ಪೋರ್ಟ್ಸ್ ಕ್ಲಬ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್, ಕಕ್ಕಬ್ಬೆ ಮಲ್ಮ, ಅಮ್ಮತ್ತಿ ರಾಯಲ್ಸ್ ಕ್ಲಬ್, ಎಂಆರ್‌ಎಫ್ ಮೂರ್ನಾಡು, ಅಂಜಿಗೇರಿನಾಡ್, ಕೋಣನಕಟ್ಟೆ ಇಲೆವೆನ್, ಕಿರುಗೂರು ಸ್ಪೋರ್ಟ್ಸ್ ಕ್ಲಬ್, ಬೇಗೂರು ಈಶ್ವರ ಯೂತ್ ಕ್ಲಬ್, ಎಎಸ್‌ಸಿ ಅಮ್ಮತ್ತಿ.