ಗೋಣಿಕೊಪ್ಪ ವರದಿ, ನ. ೧೭ : ಬೆಂಗಳೂರು ಶಾಂತಿನಗರದಲ್ಲಿರುವ ಫೀ. ಮಾ. ಕೆ.ಎಂ ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೪ ªಯೋಮಿತಿಯ ಮಿನಿ ಒಲಂಪಿಕ್ಸ್ ಹಾಕಿಯಲ್ಲಿ ಹಾಕಿಕೂರ್ಗ್ ಬಾಲಕರ ತಂಡ ಗೆಲುವಿನ ಓಟ ಮುಂದುವರಿಸಿದೆ.

ಭಾನುವಾರ ಬೆಳಗಾವಿ ತಂಡದ ವಿರುದ್ದದ ಪಂದ್ಯದಲ್ಲಿ ೧-೧ ಗೋಲುಗಳ ಡ್ರಾ ಫಲಿತಾಂಶ ನೀಡಿತು. ಕೂರ್ಗ್ ಪರ ಪ್ರಥಮ್ ಪೂವಯ್ಯ ಏಕೈಕ ಗೋಲು ಹೊಡೆದರು. ತರಬೇತುದಾರರಾಗಿ ತೀತಮಾಡ ವಿನು, ವ್ಯವಸ್ಥಾಪಕ ವಿನೋದ್ ತಂಡದಲ್ಲಿದ್ದಾರೆ.

ಬಾಲಕಿಯರ ತಂಡವು ಹಾಕಿ ಬಳ್ಳಾರಿ ವಿರುದ್ಧ ೨-೦ ಗೋಲುಗಳ ಗೆಲುವು ದಾಖಲಿಸಿತು. ೧ ಮತ್ತು ೨೯ ನೇ ನಿಮಿಷಗಳಲ್ಲಿ ಪೊನ್ನಚೆಟ್ಟಿರ ಅಂಚಲ್ ದೇಚಮ್ಮ ೨ ಗೋಲು ಗಳಿಸಿದರು.