ಇಂದು ವಯಸ್ಕರ ದಿನ

ನಮ್ಮ ಜೀವನದಲ್ಲಿ ದಿನಗಳು ಉರುಳುತ್ತಿವೆ. ವರ್ಷಗಳು ಕಣ್ಣು ಮಿಟುಕಿಸುವಷ್ಟರಲ್ಲಿ ಕಳೆದು ಹೋಗುತ್ತಿವೆ. ಕೊರೊನಾ ನಂತರ ಸಣ್ಣಪುಟ್ಟ ಅನಾರೋಗ್ಯವಾದರೂ ವಯಸ್ಸಾದ ಅನುಭವವಾಗುತ್ತಿದೆ. ನಿನ್ನ ಮೊನ್ನೆ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣವನ್ನು ಮುಗಿಸಿದ ನೆನಪುಗಳಿವೆ. ನಮ್ಮ ಸುತ್ತಮುತ್ತಲಿನವರು, ಗೆಳೆಯರು, ಸಂಬAಧಿಕರು, ಅನಾರೋಗ್ಯದಿಂದ ಮರಣವನ್ನಪ್ಪಿದರೆ ಮನಸ್ಸಿನಲ್ಲಿ ನಮಗೂ ವಯಸ್ಸಾಯ್ತೇನೋ ಎಂಬ ಅನುಭವವಾಗುತ್ತಿದೆ. ವಯಸಾಗುವುದು ಪ್ರಕೃತಿ ಸಹಜವಾದ ಕ್ರಿಯೆ. ಮಾತುಕತೆ, ನಡತೆಯಲ್ಲಿಯೇ ವಯಸ್ಸಾದ ಮುನ್ಸೂಚನೆ ಕಾಣಿಸುತ್ತದೆ. ನಾವು ವರ್ತಮಾನ ಪತ್ರಿಕೆಯಲ್ಲಿ ಓದಿರುತ್ತೇವೆ. ವಯೋಸಹಜ ಕಾಯಿಲೆಯಿಂದ ನರಳಿದರು, ಸಾವನಪ್ಪಿದರು ಎಂದು.

ವಯಸ್ಸಾದAತೆ ದೇಹವು ನಮ್ಮ ಮನಸ್ಸಿನ ಆಸೆಗಳಿಗೆ ಸ್ಪಂದಿಸುವುದಿಲ್ಲ. ಮನಸ್ಸು ಎಷ್ಟು ಬೇಕುಗಳ ಬೇಡಿಕೆಗಳನ್ನು ಇಡುತ್ತದೆಯೋ ದೇಹವು ಅಷ್ಟೇ ವೇಗವಾಗಿ ಬೇಡವೆಂದು ದೂರವಿಡುತ್ತದೆ. ಕೆಲಸ ಕಾರ್ಯಗಳೆಲ್ಲವೂ ಕುಂಠಿತವಾಗಿ ದೈಹಿಕ ಆರೋಗ್ಯವು ಹಿಂದೆ ಬೀಳುತ್ತಾ ದೈನಂದಿನ ಜೀವನ ನಿಭಾಯಿಸಲು ಕಷ್ಟವಾಗುತ್ತದೆ. ಕೆಲವರಿಗೆ ವೃದ್ಧಾಪ್ಯ ಶಾಪವೆನಿಸಬಹುದು. ಅನಾರೋಗ್ಯ, ಆರ್ಥಿಕ ತೊಂದರೆ, ಮಾನಸಿಕವಾಗಿ ಕುಗ್ಗುವಿಕೆ ವಯಸ್ಕರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ. ವಯಸ್ಸಾದ ಜನಸಂಖ್ಯೆಯು ಸಮಾಜಕ್ಕೆ ಅಮೂಲ್ಯವಾದ ಆಸ್ತಿ ಇದ್ದಂತೆ. ಅವರ ಅನುಭವದ ಮುಂದೆ ನಮ್ಮ ಯಾವ ಪದವಿಯೂ ಕೆಲಸ ಮಾಡುವುದಿಲ್ಲ.

ಇದಕ್ಕೆ ಪೂರಕವಾಗಿ ವಯಸ್ಸಾದವರ ಸಮಸ್ಯೆಯನ್ನು ನಿಭಾಯಿಸಲು ನವೆಂಬರ್ ೧೮ ಅನ್ನು "ವಿಶ್ವ ವಯಸ್ಕರ ದಿನ"ವನ್ನಾಗಿ ಆಚರಿಸಲಾಗುತ್ತದೆ. ವಯಸ್ಕರು ಎಂಬುದನ್ನು ಮೂರು ರೀತಿಯಲ್ಲಿ ವಿಭಾಗಿಸಬಹುದು - ಯುವ ವಯಸ್ಕರು, ಮಧ್ಯಮ ವಯಸ್ಕರು ವಯಸ್ಕರು.

"ಯುವ ವಯಸ್ಕರು" ಎಂದರೆ ೧೮ ಮತ್ತು ೩೯ ವಯಸ್ಸಿನೊಳಗಿನ ಅತಿ ಸಾಮರ್ಥ್ಯದ ಯುವ ಸಮೂಹ. ಈ ವಯಸ್ಸಿನಲ್ಲಿ "ಸಾಧಿಸಿದರೆ ಸಬಳವನ್ನು ನುಂಗಬಹುದು" ಆದರೆ ಈ ವಯಸ್ಕರು ಎತ್ತ ಸಾಗುತ್ತಿದ್ದಾರೆ.

ಇವರು ಆರೋಗ್ಯದ ಕಡೆ ಹೆಚ್ಚು ಗಮನಕೊಡದೆ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡು ಅನಾರೋಗ್ಯ ವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಮಾದಕ ಬಳಕೆಯು ಹೆಚ್ಚಾಗಿದ್ದು ಆರೋಗ್ಯ ಸಮಸ್ಯೆ ಅಧಿಕವಾಗುತ್ತಿದೆ. ವಿಶ್ವದಲ್ಲಿ ಯುವ ವಯಸ್ಕರಲ್ಲಿ ಆಲ್ಕೋಹಾಲ್ ಬಳಕೆಯು ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಹಾಗೆಯೇ ಅತೀ ಹೆಚ್ಚು ಅಕ್ರಮ ಮಾದಕ ದ್ರವ್ಯವನ್ನು ಬಳಸಿದ್ದಾರೆ ಎಂದು ವರದಿ ತಿಳಿಸುತ್ತದೆ. ವಯಸ್ಕರಿಗಿಂತ ಹೆಚ್ಚಾಗಿ ಯುವ ವಯಸ್ಕರು ಸಾವನ್ನಪ್ಪುತ್ತಿದ್ದಾರೆ.

ಮಧ್ಯಮ ವಯಸ್ಕರು ಮನೆ, ತೋಟ, ಮಕ್ಕಳು, ಶಾಲಾ ಶುಲ್ಕದಲ್ಲಿಯೇ ಕಳೆದು ಹೋಗುತ್ತಾರೆ. ಇವರು ಜೀವನ ಜಂಜಾಟದಲ್ಲಿ ಮುಳುಗಿ ಆರೋಗ್ಯದ ಕಡೆ ಗಮನ ಹರಿಸದೆ ವಯಸ್ಸಲ್ಲದ ವಯಸ್ಸಿನಲ್ಲಿ ಹೃದಯಾಘಾತ, ಪಾಶ್ವವಾಯು, ಮಧುಮೇಹ ಮೊದಲಾದ ಭೀಕರ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ.

ಆದರೆ ವಯಸ್ಕರು ಅವರ ಪೂರ್ವಾಶ್ರಮದ ಸಾಂಪ್ರದಾಯಿಕ ಆಹಾರ ಶೈಲಿಯೊಂದಿಗೆ ಬದುಕಿದ ಕಾರಣ ೭೦-೮೦ ವರ್ಷಗಳಿಗೂ ಮೇಲ್ಪಟ್ಟು ಬದುಕುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ಜಗತ್ತಿನಲ್ಲಿ ೬೦ ವರ್ಷಕ್ಕಿಂತ ಮೇಲ್ಪಟ್ಟ ೬೦೦ ಮಿಲಿಯನ್ ಜನರಿದ್ದಾರೆ. ಮುಂದಿನ ೧೧ ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಅಂದಾಜಿನ ಪ್ರಕಾರ ಅತಿ ಶೀಘ್ರದಲ್ಲೇ ಪ್ರಪಂಚವು ಮಕ್ಕಳಿಗಿಂತ ವಯಸ್ಸಾದವರ ಜನಸಂಖ್ಯೆಯನ್ನು ಹೆಚ್ಚು ಹೊಂದುತ್ತದೆ. ಪ್ರಪಂಚವು ಹಿಂದೆAದಿಗಿAತಲೂ ಹೆಚ್ಚು ಜನರು ತಮ್ಮ ೮೦ ಅಥವಾ ೯೦ ರ ದಶಕವನ್ನು ನೋಡುತಿದ್ದಾರೆ. ಮಕ್ಕಳು ಮತ್ತು ಯುವಜನರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಆತಂಕಕಾರಿ ವರದಿಯೂ ಇದೆ.

ಹೆಚ್ಚಿನ ಮಕ್ಕಳು ತಮ್ಮ ಅಜ್ಜಿಯರನ್ನು ಮತ್ತು ಅವರ ಮುತ್ತಜ್ಜರನ್ನು, ವಿಶೇಷವಾಗಿ ಅವರ ಮುತ್ತಜ್ಜಿಯರೊಂದಿಗಿದ್ದಾರೆ. ಮಹಿಳೆಯರು ಪುರುಷರಿಗಿಂತ ಆರರಿಂದ ಎಂಟು ವರ್ಷಗಳ ಕಾಲ ಬದುಕುತ್ತಾರೆ.

ಪ್ರತಿ ಮನೆಯಲ್ಲೂ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಮಕ್ಕಳಿಗಿಂತ ಹೆಚ್ಚು ಸಂಖ್ಯೆಯ ವಯಸ್ಕರು ಸಮಾಜದಲ್ಲಿ ಇದ್ದಾರೆ. ಯುವಜನರು ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಕುಟುಂಬದ ಮಾದರಿಗಳು ಬದಲಾಗುತ್ತಿವೆ. ತಂತ್ರಜ್ಞಾನವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೆಲವು ವಯಸ್ಕರು "ಮನೆಯಲ್ಲಿ ವಾಸಿಸುತ್ತಿದ್ದಾರೆ" ಮನೆಯಲ್ಲಿ ವಾಸಿಸುತ್ತಿದ್ದರೆ ವಯಸ್ಕನು "ಪೋಷಕರೊಂದಿಗೆ ವಾಸಿಸುತ್ತಾನೆ" ಎಂದರ್ಥ. ಇನ್ನು ಕೆಲವು ವಯಸ್ಸಾದವರು ಅನಾಥಾಶ್ರಮಗಳಲ್ಲಿ ಜೀವನ ನಡೆಸುತ್ತಿದ್ದು, ಅಲ್ಲಿರುವ ಸಮಾನ ಮನಸ್ಕರೊಂದಿಗೆ ತಮ್ಮ ವಯಸ್ಕ ದಿನಗಳನ್ನು ಕಳೆಯುತ್ತಿದ್ದಾರೆ.

ನಿರಂತರವಾಗಿ ಬಾಲ್ಯದ ಗೆಳೆಯರೊಂದಿಗೆ, ಮೊಮ್ಮಕ್ಕಳೊಂದಿಗೆ ಸಂಬAಧಿಕರೊAದಿಗೆ ಸಂಪರ್ಕದಲ್ಲಿದ್ದು ಸಂತೋಷದಿAದ ದಿನ ಕಳೆಯುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ. ಮಧ್ಯ ವಯಸ್ಕರು ತಮ್ಮ ವಯಸ್ಸಾದ ಪೋಷಕರೊಂದಿಗೆ ವಾಸಿಸುವುದರ ಮೂಲಕ ಅವರಿಗೆ ಸಹಕರಿಸಬಹುದು. ಫೈಬರ್ ಆಹಾರಗಳನ್ನು ಸೇವಿಸುವುದರೊಂದಿಗೆ ವಯಸ್ಸಾದಂತೆ ಆರೋಗ್ಯಕರ ವಯಸ್ಸಾಗುವಿಕೆಗಾಗಿ ಜೀವನ ಶೈಲಿಯನ್ನು ಸರಿಹೊಂದಿಸುವುದು ಅತ್ಯಗತ್ಯ.

ಬೆಳೆಯುತ್ತಿರುವ ದೇಶಗಳಲ್ಲಿ ಅಸಂಖ್ಯಾತ ಲಕ್ಷಾಂತರ ಜನರು ಮಧ್ಯ ವಯಸ್ಕ ಜೀವನವನ್ನು ತಲುಪಿದ್ದಾರೆ. ಯುವಜನರ ಜೀವನ ಸ್ಥಿತಿಯು ನಿಜವಾಗಿಯೂ ಬದಲಾಗಿದೆ. ಪೋಷಕರು ಮತ್ತು ಅಜ್ಜಿಯರ ಪರಿಸ್ಥಿತಿಗಿಂತ ಭಿನ್ನ ಜೀವನ ಅವರದು. ಕೆಲವು ಯುವ ವಯಸ್ಕರನ್ನು ಮಾತ್ರ ಅವಿಭಕ್ತ ಕುಟುಂಬದಲ್ಲಿ ಕಾಣಬಹುದು.

ಏನೇ ಆದರೂ ೧೯೧೦ ರಲ್ಲಿ ಹೆಣ್ಣಿನ ಜೀವಿತಾವಧಿ ೩೩ ವರ್ಷಗಳು ಇಂದು ಅದು ೮೨ ವರ್ಷಗಳಾಗಿವೆ. ಅಂದರೆ ಸುಮಾರು ೫೦ ವರ್ಷಗಳ ಜೀವನ ಹೆಚ್ಚಿಗೆ ಸಿಕ್ಕಿದೆ. ಇದು ವಿಜ್ಞಾನದ ಬೆಳವಣಿಗೆಯೊಂದಿಗೆ ಆರೋಗ್ಯ ಚಿಕಿತ್ಸೆಯ ಸುಧಾರಣೆಯಾಗಿದೆ.

ಇನ್ನು ಶಿಕ್ಷಣದ ಘಟ್ಟಕ್ಕೆ ಬಂದರೆ ಬಡತನದ ಕಾರಣದಿಂದ ಬಾಲ್ಯದಲ್ಲಿ ವಿದ್ಯಾಭ್ಯಾಸ ಕುಂಠಿತಗೊAಡವರು ವಯಸ್ಕರ ಶಿಕ್ಷಣದ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಸಾಕ್ಷರತೆ ಕಡಿಮೆ ಇರುವ ಗ್ರಾಮೀಣ ಭಾಗದ ೧೫-೬೦ ವರ್ಷದೊಳಗಿನ ವಯೋಮಾನದ ಎಲ್ಲಾ ವರ್ಗದ ಅನಕ್ಷರಸ್ಥರನ್ನು ಗುರುತಿಸಿ, ಅವರಿಗೆ ಸ್ವಯಂಸೇವಕರ ಮೂಲಕ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸುತ್ತಿದೆ. ಶೇ.೮೫ ರಷ್ಟು ಮಹಿಳೆಯರು ಮತ್ತು ಶೇ. ೧೫ ರಷ್ಟು ಪುರುಷರನ್ನು ಗುರುತಿಸಿ, ಅವರಿಗೆ ಸಾಮಾನ್ಯ ಓದು ಬರಹ ಕಲಿಸುವುದೇ ವಯಸ್ಕರ ಶಿಕ್ಷಣ. ಇದರ ಅವಶ್ಯಕತೆ ಎಷ್ಟಿದೆ ಎಂದರೆ ತಾವು ಸೇವಿಸುವ ಮಾತ್ರೆಯ ಬಗ್ಗೆ ತಿಳಿದು ಕೊಳ್ಳುವುದಕ್ಕಾಗಿಯಾದರೂ, ಹೆಬ್ಬೆಟ್ಟಿನ ಬದಲಾಗಿ ಸಹಿ ಮಾಡುವು ದಕ್ಕಾಗಿಯಾದರೂ, ಮತದಾನದ ಹಕ್ಕನ್ನು ಸುಲಭವಾಗಿ ಚಲಾಯಿಸುವುದಕ್ಕಾಗಿಯಾದರು ಮಧ್ಯ ವಯಸ್ಕರರು ಅಕ್ಷರಭ್ಯಾಸವನ್ನು ಮಾಡಬೇಕಾಗಿದೆ. ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು, ದೈನಂದಿನ ಕೆಲಸವನ್ನು ನಿಭಾಯಿಸಲು ಆರೋಗ್ಯಕ್ಕಾಗಿ ಕಲಿಕೆ ಬೇಕು. ಶಿಕ್ಷಣವು ಭವಿಷ್ಯದ ಜೀವನಕ್ಕಾಗಿ ಕೇವಲ ಸಿದ್ಧತೆಯಲ್ಲ. ಇಡೀ ಜೀವನದಲ್ಲಿ ಕಲಿಕೆ ಇದೆ. ಆದ್ದರಿಂದ, ಶಿಕ್ಷಣಕ್ಕೆ ಅಂತ್ಯವಿಲ್ಲ. ಈ ಹೊಸ ಹೊಸ ತಿಳಿಯುವಿಕೆಗಾಗಿ ಓದುಬೇಕು. ವೃದ್ಧಾಪ್ಯದಲ್ಲಿ ಸಮಯ ಕಳೆಯಲು ಅಕ್ಷರ ಜ್ಞಾನ ಬೇಕೇಬೇಕು. ವಯಸ್ಕರ ಶಿಕ್ಷಣ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ ಅಂದರೆ ಪ್ರೌಢಾವಸ್ಥೆಯವರಿಗೂ ಲಭ್ಯವಿದೆ.

ಪ್ರತಿಯೊಬ್ಬ ವಯಸ್ಕನ ಮನಸ್ಸಿನಲ್ಲಿಯೂ ಕಲಿಯುವ ಮಗುತನವಿದೆ, ಮಗುವಿನ ಹೃದಯವೆ? ಎಂಬುದು ಸತ್ಯ. ನಾವು ವಯಸ್ಕರಂತೆ ಇರಬೇಕು ಎಂದು ನಾವೇ ಮನವರಿಕೆ ಮಾಡಿಕೊಂಡಿದ್ದೇವೆ ಅಷ್ಟೇ.

ಪ್ರತಿ ವಯಸ್ಕನ ಒಳಗೆ ಇನ್ನೂ ಮುಗ್ದತೆಯ ಮಗು ಇದ್ದೇ ಇದೆ.

ಕೊನೆಹನಿ

ನಮ್ಮಲ್ಲಿ ಹೆಚ್ಚಿನವರು ಹಂಚಿಕೊಳ್ಳುವ ಒಂದು ವಿಷಯ ವೆಂದರೆ ವಯಸ್ಸಾಗುತ್ತಿದೆ...!

- ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕರು, ಕಾವೇರಿ ಕಾಲೇಜು ಗೋಣಿಕೊಪ್ಪ.