ಮಡಿಕೇರಿ, ನ. ೧೭: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಇವರ ಸಂಯುಕ್ತಾಶ್ರಯದಲ್ಲಿ ೭೧ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’ ದಿನಾಚರಣೆಯನ್ನು ಮಕ್ಕಂದೂರು ಪ್ಯಾಕ್ಸ್ನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಈ ಬಾರಿಯ ಸಪ್ತಾಹದ ಧ್ಯೇಯ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬುದಾಗಿದೆ. ೨೦೨೫ ರ ವೇಳೆಗೆ ರಾಷ್ಟç ೫ ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯನ್ನು ಹೊಂದಬೇಕು. ೨೦೪೭ರ ಸ್ವಾತಂತ್ರ ಶತಮಾನೋತ್ಸವದ ವೇಳಗೆ ೩೦ ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯನ್ನು ಹೊಂದಬೇಕೆAಬ ಮಹತ್ತಾದ ಆಕಾಂಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ವಿಕಸಿತ ಭಾರತದ ಕಲ್ಪನೆಯ ಸಹಕಾರಕ್ಕೆ ರಾಷ್ಟçದ ಸಂಘ ಸಂಸ್ಥೆಗಳು ಮಹತ್ತರ ಕೊಡುಗೆ ನೀಡಬಲ್ಲವು ಎಂಬುದನ್ನು ಮನಗಂಡು ಇತ್ತೀಚೆಗೆ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯವನ್ನು ತೆರೆದಿದೆ. ಸಚಿವರಾದ ಅಮಿತ್‌ಶಾ ಅವರನ್ನು ಸಹಕಾರ ಸಚಿವರನ್ನಾಗಿ ನೇಮಿಸಿದೆ. ಈಗಲೂ ಪ್ಯಾಕ್ಸ್ ಅಧ್ಯಕ್ಷರಾಗಿರುವ ಅಮಿತ್‌ಶಾ ರವರ ಮಾರ್ಗದರ್ಶನದಲ್ಲಿ ಹಲವಾರು ಯೋಜನೆಗಳು ರೂಪುಗೊಂಡು ಜಾರಿಯ ಹಂತದಲ್ಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಕ್ಕಂದೂರು ಪ್ಯಾಕ್ಸ್ನ ಅಧ್ಯಕ್ಷರಾದ ರವಿ ಕುಶಾಲಪ್ಪರವರು ಮಾತನಾಡಿ, ವೈಯಕ್ತಿಕವಾಗಿ ಜನರಿಗೆ ಸಹಾಯಮಾಡಲು ಸಹಕಾರ ಕ್ಷೇತ್ರವೇ ಸೂಕ್ತ. ಆಪತ್ಕಾಲದಲ್ಲಿ ನಮ್ಮೊಂದಿಗೆ ನಿಲ್ಲುವುದು ಸಹ ಇದೇ ಕ್ಷೇತ್ರ ಎಂದರು.
ಈ ಸಂದರ್ಭದಲ್ಲಿ ಸಂಘದ ಅಭಿವೃದ್ಧಿಗಾಗಿ ಕೈಜೋಡಿಸಿದ ಮಾಜಿ ಅಧ್ಯಕ್ಷರುಗಳಾದ ಸಿ.ಸಿ. ಮುತ್ತಣ್ಣ, ಎಂ.ಯು. ನಾಣಯ್ಯ, ಕೆ.ಟಿ. ಪ್ರಸನ್ನ, ನಿವೃತ್ತ ಕಾರ್ಯದರ್ಶಿಯಾದ ಎಸ್.ಪಿ. ಪೊನ್ನಣ್ಣ ಅವರುಗಳನ್ನು ಸನ್ಮಾನಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎನ್.ಎಂ. ಉಮೇಶ್ ಉತ್ತಪ್ಪ ಅವರು, ಹಿರಿಯ ಸಹಕಾರಿಗಳ ಶ್ರಮದಿಂದಾಗಿ ನಾವು ಇಂದು ಸಂಘವನ್ನು ಉತ್ತಮ ಮಟ್ಟದಲ್ಲಿ ನಡೆಸಿಕೊಂಡು ಹೋಗಲು ಅನುವಾಗುತ್ತಿದೆ. ಸಹಕಾರ ಸಂಘಗಳು ಎಲ್ಲಾ ವಲಯಗಳನ್ನು ವ್ಯಾಪಿಸಿದ್ದು ಶೇ. ೧೦೦ ರಷ್ಟು ಗ್ರಾಮೀಣ ಪ್ರದೇಶದಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಹುಸೇವಾ ಕೇಂದ್ರಗಳಾಗಿ ಮಾರ್ಪಟ್ಟಿದ್ದು ಉದ್ಯೋಗ ಸೃಷ್ಟಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ದೇಶಕ್ಕೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ದಿನದ ಮಹತ್ವದ ಕುರಿತು ಕೆ.ಐ.ಸಿ.ಎಂ. ಮಡಿಕೇರಿ ಪ್ರಾಂಶುಪಾಲೆ ಡಾ. ಆರ್.ಎಸ್. ರೇಣುಕಾ ಅವರು ಮಾತನಾಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಕೆ.ಎನ್. ಸತೀಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಬಿ.ಎ. ರಮೇಶ್ ಚಂಗಪ್ಪ, ಕೆ.ಎಂ. ತಮ್ಮಯ್ಯ, ಪಿ.ಬಿ. ಯತೀಶ್, ಎನ್.ಎ. ರ‍್ಯಾಲಿ ಮಾದಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಶೈಲಜಾ, ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಎನ್. ರಮೇಶ್, ಮಕ್ಕಂದೂರು ಪ್ಯಾಕ್ಸ್ನ ಉಪಾಧ್ಯಕ್ಷರಾದ ಸಿ.ಪಿ. ತಿಮ್ಮಯ್ಯ, ಪ್ಯಾಕ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾವತಿ ಉಪಸ್ಥಿತರಿದ್ದರು.
ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರೆ, ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿ, ವಂದಿಸಿದರು.