ಸೋಮವಾರಪೇಟೆ, ನ. ೧೭: ರೈತರ ಆತಂಕಕ್ಕೆ ಕಾರಣವಾಗಿರುವ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ರೈತರು ಆತಂಕ ಪಡುವ ಆಗತ್ಯ ಇಲ್ಲ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಪಿಟಿಸಿ ಹಾಲ್‌ನಲ್ಲಿ ನಡೆದ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ವ್ಯವಸಾಯ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿ ರೈತರಿಗೆ ಸೇರಿದ್ದು ಎಂಬುದೇ ಸತ್ಯ. ಈ ಬಗ್ಗೆ ಸಂಬAಧಪಟ್ಟ ಇಲಾಖೆಯ ಸಚಿವರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಸಿ ಆ್ಯಂಡ್ ಡಿ ಮತ್ತು ಸೆಕ್ಷನ್ ೪ ಸರ್ವೆ ಬಗ್ಗೆ ರೈತರಲ್ಲಿ ಆತಂಕ ಮೂಡಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ, ನಂತರ ರೈತ ಮುಖಂಡರೊAದಿಗೆ ಅರಣ್ಯ ಹಾಗೂ ಕಂದಾಯ ಮಂತ್ರಿಗಳೊAದಿಗೆ ಮತ್ತೊಮ್ಮೆ ಚರ್ಚಿಸಲು ಮುಂದಾಗಲಾಗುವುದು. ಈ ಹಿಂದೆಯೂ ಇಲಾಖಾ ಸಚಿವರೊಂದಿಗೆ ಸುದೀರ್ಘ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.

ಹಲವಾರು ದಶಕಗಳಿಂದ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವುದರಿಂದ ಆ ಭೂಮಿಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ರೈತರಲ್ಲಿ ಆತಂಕ ಬೇಡ ಎಂದ ಅವರು ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ಮಾಡಬೇಕು. ಸಿ ಆ್ಯಂಡ್ ಡಿ, ಪೈಸಾರಿ, ಅರಣ್ಯ ಭೂಮಿ ಎಷ್ಟಿದೆ ಎಂಬುದನ್ನು ಗುರುತಿಸಿದರೆ, ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕವಾಗಬೇಕು. ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಬೇಕು. ಕಂದಾಯ ಇಲಾಖೆಯಲ್ಲಿ ರೈತರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಉಚಿತವಾಗಿಯೇ ಆಗಬೇಕು. ತಾಲೂಕಿನಲ್ಲಿ ಕಾನೂನು ಕಾಲೇಜು ಮತ್ತು ನರ್ಸಿಂಗ್ ಕಾಲೇಜು ಸ್ಥಾಪನೆ ಆಗಬೇಕು. ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಮಲ್ಲಳ್ಳಿ ಜಲಪಾತ, ಹೊನ್ನಮ್ಮನ ಕೆರೆ ಬೆಟ್ಟದಲ್ಲಿ ಕೇಬಲ್ ಕಾರು ಯೋಜನೆ ಕೈಗೊಳ್ಳಬೇಕು ಎಂದು ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಶಾಸಕರಿಗೆ ಮನವಿ ಮಾಡಿದರು.

ಕೌನ್ಸಿಲಿಂಗ್ ಮೂಲಕ ವೈದ್ಯರ ನೇಮಕಕ್ಕೆ ಸರ್ಕಾರ ದಿನಾಂಕ ನಿಗದಿಗೊಳಿಸಿತ್ತು. ಆದರೆ, ಕೆಲವು ವೈದ್ಯರು ಹೈಕೋರ್ಟ್ನಲ್ಲಿ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಾದ ಕೂಡಲೆ ಕೌನ್ಸಿಲಿಂಗ್ ನಡೆಯಲಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕವಾಗಲಿದೆ ಎಂದು ಶಾಸಕರು ಹೇಳಿದರು. ಶತಮಾನೋತ್ಸವ ಭವನ, ಒಳಾಂಗಣ ಕ್ರೀಡಾಂಗಣ, ಬಸ್‌ಸ್ಟಾö್ಯಂಡ್, ಸೇತುವೆ, ರಸ್ತೆ ಇಂತಹ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕಾರ್ಯಪ್ರವೃತ್ತವಾಗಿದ್ದೇನೆ ಎಂದು ಶಾಸಕರು ಭರವಸೆ ನೀಡಿದರು.

ಹೈಕೋರ್ಟ್ ವಕೀಲರಾದ ಅಮೃತೇಶ್ ಮಾತನಾಡಿ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಬೇಜವಾಬ್ದಾರಿತನದಿಂದ ಸಿ ಆ್ಯಂಡ್ ಡಿ ಜಾಗದ ವಿಷಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿ ಆ್ಯಂಡ್ ಡಿ ಮತ್ತು ಸೆಕ್ಷನ್ ೪ ಸರ್ವೆ ವಿಷಯದಲ್ಲಿ ಸರ್ಕಾರವಾಗಲೀ ಸಂಬAಧಪಟ್ಟ ಇಲಾಖೆಯಾಗಲಿ ನಿಯಮಬದ್ಧವಾಗಿ ಕ್ರಮಕೈಗೊಂಡಿಲ್ಲ. ಜನಪ್ರತಿನಿಧಿಗಳು ಮತ್ತು ರೈತರು ಸರ್ಕಾರದೊಂದಿಗೆ ಮಾತುಕತೆ ನಡೆಸಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ರೈತರು ಆತಂಕಪಡುವ ಅಗತ್ಯವಿಲ್ಲ. ಕೃಷಿ ಮಾಡುತ್ತಿರುವುದೇ ರೈತರಿಗೆ ದಾಖಲೆಯಾಗಿದೆ ಎಂದು ಹೇಳಿದರು. ಸದ್ಯಕ್ಕೆ ಸರ್ಕಾರದ ಭರವಸೆಯಂತೆ ಮೂರು ಎಕರೆ ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ನೀಡಿದರೆ ಒಂದಷ್ಟು ರೈತರಿಗೆ ಉಪಯೋಗವಾಗಿಲಿದೆ ಎಂದರು.

ಸಮಿತಿ ಪದಾಧಿಕಾರಿಗಳಾದ ಕೆ.ಎನ್. ದೀಪಕ್, ಕೊಡ್ಲಿಪೇಟೆ ಜಯರಾಮ್, ಜಿ.ಎಂ. ಹೂವಯ್ಯ, ಕೂಗೆಕೋಡಿ ನವೀನ್, ಹರಗ ತ್ರಿಶೂಲ್ ಇದ್ದರು.