ಸೋಮವಾರಪೇಟೆ, ನ. ೧೭: ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಕೊಡವ ಸಮು ದಾಯದ ಜನಸಂಖ್ಯೆ ಸೋಮವಾರ ಪೇಟೆ ತಾಲೂಕಿನಲ್ಲಿ ಕಡಿಮೆ ಯಿದ್ದರೂ, ಇರುವ ಕೊಡವರನ್ನು ಒಂದುಗೂಡಿಸಿ ಸಂಘಟನೆಯ ಮೂಲಕ ಸಮುದಾಯ ಹಾಗೂ ಶೈಕ್ಷಣಿಕ ಸೇವೆಗೆ ಸೋಮವಾರಪೇಟೆ ಕೊಡವ ಸಮಾಜ ಸದಾ ಶ್ರಮಿಸುತ್ತಿದೆ. ೧೯೭೪-೭೫ರ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದ ಕೊಡವ ಸಮಾಜಕ್ಕೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ.
ಸೋಮವಾರಪೇಟೆ ಪಟ್ಟಣ ವನ್ನು ಕೇಂದ್ರ ಸ್ಥಾನವನ್ನಾಗಿಸಿ ಕೊಂಡು ತಾಲೂಕು ವ್ಯಾಪ್ತಿಯ ಕೊಡವ ಸಮುದಾಯ ಸಂಘಟನೆ ಯಾಗಿ ಇಲ್ಲಿನ ಕ್ಲಬ್‌ರಸ್ತೆಯಲ್ಲಿ ತಮ್ಮದೇ ಆದ ಸ್ವಂತ ಕಟ್ಟಡದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿಕೊಂಡು ಸಮುದಾಯದ ಸೇವೆಗೆ ಶ್ರಮಿಸುತ್ತಿದೆ.
ಹಿರಿಯರೊಂದಿಗೆ ಯುವ ಸಮುದಾಯಕ್ಕೂ ಸಮಾಜದಲ್ಲಿ ಸ್ಥಾನಮಾನ ನೀಡಲಾಗಿದ್ದು, ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರವನ್ನು ಒಳಗೊಂಡಿರುವ ಕೊಡವರು, ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೆ ತಮ್ಮ ಸಂಸ್ಕೃತಿಯನ್ನು ಕಲಿಸುವ ವೇದಿಕೆ ಸೃಷ್ಟಿಸಿದ್ದಾರೆ.
೧೯೭೪-೭೫ರಲ್ಲಿ ಸ್ಥಾಪನೆ: ಸೋಮವಾರಪೇಟೆ ಕೊಡವ ಸಮಾಜವನ್ನು ೧೯೭೪-೭೫ನೇ ಸಾಲಿನಲ್ಲಿ ಸ್ಥಾಪಿಸಲಾಗಿದ್ದು, ಆರಂಭದಲ್ಲಿ ೧೨ ಮಂದಿಯ ತಂಡ ಸಮುದಾಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ, ಅಡಿಗಲ್ಲು ಇಟ್ಟರು. ಹಂಚೆಟ್ಟಿರ ಕುಟ್ಟಪ್ಪ ಅವರು ಪಟ್ಟಣದ ಕ್ಲಬ್ ರಸ್ತೆಯಲ್ಲಿ ಹೊಂದಿದ್ದ ೪೦ ಸೆಂಟ್ ಜಾಗವನ್ನು ಸಮುದಾಯ ಭವನಕ್ಕೆಂದು ನೀಡಿದ್ದು, ಅಂದು ಕಾರ್ಯಾರಂಭ ಗೊಂಡ ಸೋಮವಾರಪೇಟೆ ಕೊಡವ ಸಮಾಜ ಇಂದು ಸುಸಜ್ಜಿತ ಸಮುದಾಯ ಭವನವನ್ನು ಒಳಗೊಂಡಿದೆ.
ಸಮಾಜದ ಸ್ಥಾಪಕ ಸಮಿತಿಯಲ್ಲಿ ಬೊಳ್ಳೆಯಂಡ ಉತ್ತಯ್ಯ, ಮುಕ್ಕಾಟೀರ ಮಾದಪ್ಪ, ಮಲಚ್ಚಿರ ಮಾಚಯ್ಯ, ಮಣವಟ್ಟಿರ ಅಯ್ಯಣ್ಣ, ಮಾಳೇಟಿರ ತಿಮ್ಮಯ್ಯ, ಮೋಟನಾಳಿರ ಕಾರ್ಯಪ್ಪ, ಕಾರ್ಯಪಂಡ ಕಾಳಪ್ಪ, ಪೆಮ್ಮಂಡ ಪೂಣಚ್ಚ, ಪಾಸುರ ಮುತ್ತಪ್ಪ, ಬಿದ್ದಾಟಂಡ ಬೋಪಯ್ಯ, ಹಂಚೆಟ್ಟಿರ ಚಂಗಪ್ಪ, ಮಚ್ಚಂಡ ನಾಚಪ್ಪ ಅವರುಗಳನ್ನು ಒಳಗೊಂಡ ತಂಡ ಈ ಭಾಗದಲ್ಲಿ ಕೊಡವ ಸಮಾಜಕ್ಕೆ ಅಡಿಪಾಯ ಹಾಕಿದ್ದು, ಸ್ಥಾಪಕ ಅಧ್ಯಕ್ಷರಾಗಿ ಮುಕ್ಕಾಟಿರ ಮಾದಪ್ಪ ಅವರು ಜವಾಬ್ದಾರಿ ವಹಿಸಿಕೊಂಡರು.
ನAತರದ ದಿನಗಳಲ್ಲಿ ನಾಳಿಯಂಡ ಈಶ್ವರಿ ಮೇದಪ್ಪ, ಮೇಜರ್ ಬೊಳ್ಳಂಡ ಕಾವೇರಪ್ಪ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕಳೆದ ೨೦೦೮ ರಿಂದ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಅವರು ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಮುದಾಯ ಭವನವನ್ನು ಆಧುನೀಕರಣಗೊಳಿಸಲಾಗಿದ್ದು, ವಾಣಿಜ್ಯ ಚಟುವಟಿಕೆಗಳೊಂದಿಗೆ ಸಮುದಾಯದ ಬೆಳವಣಿಗೆಗೆ ಬಳಸಿ ಕೊಳ್ಳಲಾಗುತ್ತಿದೆ.
ಹಬ್ಬ ಹರಿದಿನಗಳು, ಸಮ್ಮೇಳ ನಗಳು, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಮರಣ ನಿಧಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗಿದೆ. ಇದರೊಂದಿಗೆ ಆಲೇಕಟ್ಟೆಯಲ್ಲಿ ಸಮುದಾಯಕ್ಕೆ ಸ್ಮಶಾನವನ್ನೂ ಸ್ಥಾಪಿಸಿಕೊಂಡಿದ್ದು, ತೋಟ-ಸ್ವಂತ ಜಾಗವಿಲ್ಲದ ಕೊಡವ ಕುಟುಂಬಗಳಲ್ಲಿ ಯಾರಾದರೂ ಮೃತರಾದರೆ ಇಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ. ಇದರ ಪಕ್ಕದಲ್ಲಿಯೇ ಸ್ವಂತ ಜಾಗವನ್ನೂ ಕೊಡವ ಸಮಾಜ ಹೊಂದಿದೆ. ಈ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೂ ಚಿಂತನೆ ಹರಿಸಲಾಗಿದೆ.
ಡಿ. ೨೪-೨೫ರಂದು ಸುವರ್ಣ ಮಹೋತ್ಸವ: ಸೋಮವಾರಪೇಟೆ ಕೊಡವ ಸಮಾಜ ಸ್ಥಾಪನೆಯಾಗಿ ೫೦ ವರ್ಷಗಳು ತುಂಬುತ್ತಿದ್ದು, ಇದೇ ಡಿ. ೨೪ ಮತ್ತು ೨೫ರಂದು ಸಮುದಾಯ ಭವನದಲ್ಲಿ ಅದ್ದೂರಿ ಸುವರ್ಣ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಹತ್ತು ಹಲವು ವೈಶಿಷ್ಟö್ಯಪೂರ್ಣ ಕಾರ್ಯಕ್ರಮ ಗಳೊಂದಿಗೆ ಸುವರ್ಣ ಸಂಭ್ರಮದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರ ತರಲು ನಿರ್ಧರಿಸಲಾಗಿದೆ. ಸೋಮವಾರಪೇಟೆ ಕೊಡವ ಸಮಾಜಕ್ಕೆ ಒಳಪಟ್ಟಂತೆ ೮೬೦ ಸದಸ್ಯರಿದ್ದಾರೆ. ಕೊಡವ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಸಮುದಾಯದ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದು ವಿಶೇಷ.
- ವಿಜಯ್ ಹಾನಗಲ್