ವೀರಾಜಪೇಟೆ, ನ. ೧೭: ನದಿಮೂಲದಿಂದ ಮನೆಮನೆಗೆ ನೀರೊದಗಿಸುವ ಕೇಂದ್ರ ಸರಕಾರದ ಅಮೃತ್ ೨.೦ ಯೋಜನೆಯಿಂದ ರೂ. ೫೮.೩೮ ಕೋಟಿ ವೆಚ್ಚದಲ್ಲಿ ವೀರಾಜಪೇಟೆ ಪುರಸಭೆಯ ೫,೫೧೯ ಮನೆಗಳಿಗೆ ನೀರೊದಗಿಸಲಾಗುತ್ತದೆ. ಇದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಕೇಂದ್ರ ಪುರಸ್ಕöÈತ ಅಮೃತ ೨.೦ ಯೋಜನೆಯಡಿ ಬೇತ್ರಿ ಗ್ರಾಮದ ಹತ್ತಿರವಿರುವ ಕಾವೇರಿ ನದಿ ಮೂಲದಿಂದ ವೀರಾಜಪೇಟೆ ಪಟ್ಟಣಕ್ಕೆ ನೀರು ಸರಬರಾಜು ಯೋಜನೆಯಲ್ಲಿ ರೂ ೫೮.೩೮ ಕೋಟಿ ರೂ ವೆಚ್ಚದಲ್ಲಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಹತ್ತಿರ ೧೦ ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹಗಳನ್ನು ನಿರ್ಮಿಸಲಾಗುತ್ತಿದೆ.

ವೀರಾಜಪೇಟೆ ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಸುಮಾರು ೩೪ ಕಿಲೋಮೀಟರ್ ದೂರದಲ್ಲಿ ೨೦೧೧ರ ಜನಗಣತಿಯ ಪ್ರಕಾರ ಪಟ್ಟಣದ ಜನಸಂಖ್ಯೆಯು ೧೭,೨೪೬ ಇದ್ದು ಪ್ರಸ್ತುತ ಜನಸಂಖ್ಯೆ ಸುಮಾರು ೧೯,೦೦೦ ಇದೆ ಎಂದು ಅಂದಾಜಿಸಲಾಗಿದ್ದು ವಲಸೆ ಜನಸಂಖ್ಯೆ ಹೆಚ್ಚಳವಿರುತ್ತದೆ. ಹಾಗಾಗಿ ನೀರಿನ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ನಗರವಾಸಿಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ಅಲ್ಲದೆ ಇತ್ತಿಚೆಗೆ ಜಲಮೂಲಗಳು ಬತ್ತಿ ಹೋಗಿರುವುದರಿಂದ ಎಲ್ಲರೂ ನಲ್ಲಿ ನೀರನ್ನು ಆಶ್ರಯಿಸುತ್ತಾರೆ.ಹವಾಮಾನ ವೈಪರೀತ್ಯ, ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅನಿಯಮಿತ ಮಳೆ, ವಿದ್ಯುತ್ ಸಂಪರ್ಕ ಕಡಿತ ಹೀಗೆ ಹಲವಾರು ಕಾರಣಗಳಿಂದ ಪಟ್ಟಣದ ಜನತೆಗೆ ಕೆಲವೊಮ್ಮೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಬಹಳ ಕಷ್ಟದ ಪರಿಸ್ಥಿತಿ ಎದುರಾಗುತ್ತಿತ್ತು. ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗಿ ಇನ್ನಷ್ಟು ಹೈರಾಣಾಗುವ ಸ್ಥಿತಿ ಬರುತ್ತಿತ್ತು. ಎರಡು, ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿತ್ತು. ಕೆಲವೊಮ್ಮೆ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿ ನೀರು ನಲ್ಲಿಯಲ್ಲಿ ಹರಿದು ಬರುತ್ತಿತ್ತು. ಇದೀಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬAತೆ ವೀರಾಜಪೇಟೆ ಪಟ್ಟಣದಾದ್ಯಂತ ಇರುವ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ಹರಿಸಲು ಎಲ್ಲ ಯೋಜನೆಗಳು ಸಿದ್ದಗೊಂಡಿದ್ದು ಕಾಮಗಾರಿ ನಡೆಯುತ್ತಿದೆ. ೨೦೨೫ರಲ್ಲಿ ಮನೆಮನೆಯಲ್ಲಿ ಶುದ್ದ ಕಾವೇರಿ ಹರಿಯಲಿದ್ದಾಳೆ.

ಪಟ್ಟಣದ ಪ್ರಸ್ತುತ ನೀರು ಸರಬರಾಜು ವ್ಯವಸ್ಥೆಯ ವಿವರ

೧೯೬೬ರಲ್ಲಿ ವೀರಾಜಪೇಟೆ ಪಟ್ಟಣಕ್ಕೆ ಕದನೂರು ಗ್ರಾಮದ ಹತ್ತಿರವಿರುವ ನದಿಯಿಂದ ಮೊದಲನೇ ಹಂತದ ನೀರು ಸರಬರಾಜು ಯೋಜನೆ ಜಾರಿಯಲ್ಲಿತ್ತು. ಈ ಯೋಜನೆ ಬಳಕೆಯಲ್ಲಿ ಇಲ್ಲದಿದ್ದರೂ ಈ ಯೋಜನೆಯಲ್ಲಿ ಪಟ್ಟಣದ ಶಿವಕೇರಿಯಲ್ಲಿ ನಿರ್ಮಿಸಲಾಗಿರುವ ೦.೪೬ ಎಂಜಿಡಿ (ಮಿಲಿಯನ್ ಗ್ಯಾಲನ್ಸ್ ಪರ್ ಡೇ) ನೀರು ಶುದ್ಧೀಕರಣ ಘಟಕವನ್ನು ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಬಳಸಲಾಗುತ್ತಿದೆ. ೨೦೦೪ರಲ್ಲಿ ಪಟ್ಟಣದಿಂದ ಸುಮಾರು ೧೨ ಕಿಲೋಮೀಟರ್ ದೂರದಲ್ಲಿ ಬೇತ್ರಿಯ ಕಾವೇರಿ ನದಿಯಿಂದ ನೀರು ಸರಬರಾಜು ಯೋಜನೆಯಲ್ಲಿ ಚಾಲನೆಗೊಳಿಸಲಾಗಿದೆ.

ಇದೇ ಯೋಜನೆಯನ್ನು ೨೦೩೦ ನೇ ಸಾಲಿನ ೨೪,೦೦೦ ಜನಸಂಖ್ಯೆಗೆ ಅನುಗುಣವಾಗಿ ೭೦ ಎಲ್‌ಪಿಸಿಡಿ (ಲೀಟರ್ ಪರ್ ಕ್ಯಾಪಿಟಾ ಪರ್ ಡೇ) ರಂತೆ ೧.೬೦ ಎಂಎಲ್‌ಡಿಗೆ ವಿನ್ಯಾಸ ಮಾಡಲಾಗಿದ್ದು ಈ ಯೋಜನೆಯಿಂದ ಪಟ್ಟಣಕ್ಕೆ ಸುಮಾರು ೧.೩೩ ಎಂಎಲ್‌ಡಿ (ಮೆಗಾಲೀರ‍್ಸ್ ಪರ್‌ಡೇ) ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣಕ್ಕೆ ಕೊಳವೆ ಬಾವಿ ಮತ್ತು ತೆರೆದ ಬಾವಿಯಿಂದ ಸುಮಾರು ೩೦ ಎಲ್‌ಪಿಸಿಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ಒಟ್ಟು ಎಲ್ಲಾ ಮೂಲಗಳಿಂದ ಸುಮಾರು ೧೦೦ ಎಂಪಿಸಿಡಿ ರಷ್ಟು ನೀರು ಸರಬರಾಜು ಮಾಡಲಾಗುತ್ತಿದೆ.

ಈಗ ಇರುವ ನೀರು ಸರಬರಾಜು ಯೋಜನೆಯು ಸುಮಾರು ೨೦ ವರ್ಷ ಹಳೆಯದಾಗಿದ್ದು ಪ್ರಸ್ತುತ ಯೋಜನೆಯಿಂದ ೧.೩೩ಎಂಎಲ್ಡಿ ನೀರು ಸರಬರಾಜು ಮಾಡಲಾಗುತ್ತಿದ್ದು ಪಟ್ಟಣದ ಇಂದಿನ ನೀರಿನ ಬೇಡಿಕೆಯು ೪.೧೦ ಎಂಎಲ್‌ಡಿ ಇದೆ. ಪಟ್ಟಣದಲ್ಲಿ ಈಗ ಇರುವ ಕೊಳವೆ ಸಾಲುಗಳು ಹಳೆಯದಾಗಿದ್ದು ಬಹಳಷ್ಟು ಕಡೆ ನೀರಿನ ಸೋರಿಕೆ ಇರುವುದರಿಂದ ನೀರು ಸರಬರಾಜು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

ಅಮೃತ್ ೨.೦ ಯೋಜನೆಯಡಿ ಕಾಮಗಾರಿ

ಕೇಂದ್ರ ಪುರಸ್ಕöÈತ ಅಮೃತ ೨.೦ ಯೋಜನೆಯನ್ನು ಕೇಂದ್ರ ಸರಕಾರವು ೨೦೨೧ ರಂದು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದ್ದು, ಯೋಜನೆಯ ಕಾರ್ಯ ಮಾರ್ಗಸೂಚಿಗಳನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆಗೊಳಿಸಿದೆ. ಅದರಂತೆ ಒಂದು ಲಕ್ಷ ಜನಸಂಖ್ಯೆಗಿAತ ಕಡಿಮೆ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ನೀರು ಸರಬರಾಜು ಕಲ್ಪಿಸುವ ಯೋಜನೆಯನ್ನು ಉದ್ದೇಶಿಸಲಾಗಿದ್ದು, ಅಮೃತ್ ೨.೦ ಯೋಜನೆ ಮಾರ್ಗಸೂಚಿ ಪ್ರಕಾರವಾಗಿ ನಗರ ಪಟ್ಟಣದ ಎಲ್ಲಾ ಮನೆಗಳಿಗೆ ಕೊಳವೆ ಮುಖಾಂತರ ನೀರು ಪೂರೈಕೆ ಮತ್ತು ಕ್ರಿಯಾತ್ಮಕ ಗೃಹ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. ಅದರಂತೆ ವೀರಾಜಪೇಟೆ ಪಟ್ಟಣಕ್ಕೆ ಬೇತ್ರಿ ಗ್ರಾಮದ ಹತ್ತಿರ ಕಾವೇರಿ ನದಿ ಮೂಲದಿಂದ ಹಾಲಿ ಇರುವ ನೀರು ಸರಬರಾಜು ಯೋಜನೆಯನ್ನು ಅಭಿವೃದ್ಧಿಪಡಿಸಲು ೫೮.೩೮ ಕೋಟಿಗಳ ಅಂದಾಜು ಪಟ್ಟಿಗೆ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಾರಂಭವಾಗಿದೆ.

ಅನುಮೋದನೆಗೊಂಡಿರುವ ಯೋಜನೆಯ ವಿವರ

ವೀರಾಜಪೇಟೆ ಪಟ್ಟಣಕ್ಕೆ ಮುಂದಿನ ೩೦ ವರ್ಷಗಳ ಅಂದರೆ ೨೦೫೫ನೇ ವರ್ಷದ ನೀರಿನ ಬೇಡಿಕೆಗೆ ಅನುಗುಣವಾಗಿ ಬೇತ್ರಿ ಕಾವೇರಿ ನದಿ ದಡದಲ್ಲಿ ಇರುವ ಮೂಲಸ್ಥಾವರದಿಂದ ಹೆಚ್ಚುವರಿಯಾಗಿ ೫.೦ ಎಂಎಲ್‌ಡಿ ನೀರನ್ನು ಸರಬರಾಜು ಮಾಡಲು ಯೋಜನೆ ರೂಪಿಸಿದ್ದಾರೆ.

ಈ ಯೋಜನೆಯಡಿ ಅಲ್ಲಿರುವ ಜ್ಯಾಕ್‌ವೆಲ್ ಮತ್ತು ಪಂಪ್ ಹೌಸ್, ೨೦೦ ಮೀಟರ್ ವ್ಯಾಸದ ಏರು ಕೊಳವೆ ಮಾರ್ಗ, ಶಿವಕೇರಿಯಲ್ಲಿರುವ ನೀರು ಶುದ್ಧೀಕರಣ ಘಟಕ, ಅರಸು ನಗರದಲ್ಲಿರುವ ೩.೫೦ ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹಾಗಾರವನ್ನು ಬಳಸಿಕೊಂಡು ನೀರು ಸರಬರಾಜು ಯೋಜನೆಯನ್ನು ಹಾಕಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಈಗ ಇರುವ ಎರಡು ಸಾಲು ೪೦೦ ಮಿ.ಮಿ. ವ್ಯಾಸದ ಆರ್‌ಸಿಸಿ ಕನೆಕ್ಟಿಂಗ್ ಕೊಳವೆ ಸಾಲನ್ನು ೬೧೦ ಮಿ.ಮೀ. ವ್ಯಾಸದ ಎಂ.ಎಸ್. ಕನೆಕ್ಟಿಂಗ್ ಕೊಳವೆ ಸಾಲುಗಳಿಗೆ ಬದಲಾಯಿಸಲಾಗುತ್ತದೆ. ಬೇತ್ರಿಯಲ್ಲಿರುವ ಮೂಲಸ್ಥಾವರದ ಬಳಿ ೧೦.೦ ಮಿ.*೮.೦ ಅಳತೆಯ ಮೇಲ್ಮಟ್ಟದ ಟ್ರಾನ್ಸಾ÷್ಫರ್ಮರ್ ಅಂಡ್ ಕಂಟ್ರೋಲ್ ಪ್ಯಾನೆಲ್ ಕೊಠಡಿ ನಿರ್ಮಿಸುವುದು.

ಹೆಚ್ಚುವರಿಯಾಗಿ ಎರಡು ೯೦ ಎಚ್‌ಪಿ ಡಿಪ್‌ವೆಲ್ ವರ್ಟಿಕಲ್ ಟರ್ಬೆÊನ್ ಪಂಪ್ಸೆಟ್ ಅಳವಡಿಸುವುದು, ಮೂಲಸ್ಥಾವರದಿಂದ ಕದನೂರು ಗ್ರಾಮದ ಹತ್ತಿರ ನಿರ್ಮಿಸಲಾಗುವ ನೀರು ಶುದ್ಧೀಕರಣ ಘಟಕದವರೆಗೆ ೩೨೩.೯ ಮಿ.ಮಿಮಿ ವ್ಯಾಸದ ಎಂಎಸ್ ಏರು ಕೊಳವೆಮಾರ್ಗವನ್ನು ಅಳವಡಿಸುವುದು, ಕದನೂರು ಗ್ರಾಮದ ಹತ್ತಿರ ೪.೦೦ ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಿಸುವುದು, ಶಿವಕೇರಿ ಬಳಿ ಇರುವ ೧.೩೩ ಎಂಎಲ್‌ಡಿ ಸಾಮರ್ಥ್ಯದ ರಾಪಿಡ್ ಫಿಲ್ಟರ್ ಟೈಮ್ ನೀರು ಶುದ್ದೀಕರಣ ಘಟಕವನ್ನು ಟು ವಿ ವೈರ್ ಸಿಸ್ಟಮ್ ಮಾದರಿಗೆ ಉನ್ನತೀಕರಿಸುವುದು ಹಾಗೂ ಬೇತ್ರಿಯಲ್ಲಿರುವ ಜ್ಯಾಕ್‌ವೆಲ್ ಮತ್ತು ಪಂಪ್ ಹೌಸ್ ಮತ್ತು ಅರಸು ನಗರದಲ್ಲಿರುವ ೩.೫೦ ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹಕಾರದ ರಿಪೇರಿ ಕಾಮಗಾರಿ, ಕದನೂರು ಗ್ರಾಮದ ಹತ್ತಿರ ಹೊಸದಾಗಿ ನಿರ್ಮಿಸಲಾಗುವ ನೀರು ಶುದ್ಧೀಕರಣ ಘಟಕದಲ್ಲಿ ಎರಡು ೧೨೦ ಹೆಚ್‌ಪಿ ಸಾಮರ್ಥ್ಯದ ಸೆಂಟ್ರಿಫುö್ಯಗಲ್ ಪಂಪ್ಸೆಟ್ ಅಳವಡಿಸುವುದು, ಶಿವಕೇರಿಯ ನೀರು ಶುದ್ಧೀಕರಣ ಘಟಕದಲ್ಲಿ ಎರಡು ೨೫ ಹೆಚ್‌ಪಿ ಸಾಮರ್ಥ್ಯದ ಸೆಂಟ್ರಿಫುö್ಯಗಲ್ ಪಂಪ್ಸೆಟ್ ಅಳವಡಿಸುವುದು.

ಕದನೂರು ಗ್ರಾಮದ ಹತ್ತಿರ ಹೊಸದಾಗಿ ನಿರ್ಮಿಸಲಾಗುವ ನೀರು ಶುದ್ಧೀಕರಣ ಘಟಕದಿಂದ ಹೊಸದಾಗಿ ನಿರ್ಮಿಸಲಾಗುವ ಜಲ ಸಂಗ್ರಹಗಾರರಿಗೆ ೩೦೦ ಮಿ.ಮಿ. ೨೫೦ ಮಿ.ಮೀ. ಮತ್ತು ೨೦೦ ಮಿ.ಮೀ. ವ್ಯಾಸದ ಡಿಐ ಶುದ್ದ ನೀರಿನ ಏರು ಕೊಳವೆ ಮಾರ್ಗಗಳನ್ನು ಅಳವಡಿಸುವುದು,

ಶಿವಕೇರಿಯ ನೀರು ಶುದ್ಧೀಕರಣ ಘಟಕದಿಂದ ಅರಸು ನಗರದಲ್ಲಿರುವ ೩.೫೦ ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಗಾರ ಮತ್ತು ನೆಹರು ನಗರದಲ್ಲಿರುವ ಜಲ ಸಂಗ್ರಹಕಾರಗಳಿಗೆ ೧೫೦ ಮಿಲಿ ಮೀಟರ್ ವ್ಯಾಸದ ಡಿಐ ಶುದ್ದ ನೀರಿನ ಕೊಳವೆ ಮಾರ್ಗಗಳನ್ನು ಅಳವಡಿಸುವುದು, ಪಂಜರಪೇಟೆ ಹತ್ತಿರ ೧೦.೦ ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹÀಗಳನ್ನು ನಿರ್ಮಿಸುವುದು. ಬೇತ್ರಿಯಲ್ಲಿರುವ ಮೂಲ ಸ್ಥಾವರಕ್ಕೆ ಮತ್ತು ಕದನೂರಿನಲ್ಲಿ ನಿರ್ಮಿಸಲಾಗುವ ನೀರು ಶುದ್ಧೀಕರಣ ಘಟಕಕ್ಕೆ ೧೧ಕೆ.ವಿ. ನಿರಂತರ ವಿದ್ಯುತ್ ಸಂಪರ್ಕವನ್ನು ಒದಗಿಸುವುದು, ನೀರು ಸರಬರಾಜು ಘಟಕಗಳಿಗೆ ಆನ್ಲೆöÊನ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ.

ಈ ಯೋಜನೆಯನ್ನು ಕಾರ್ಯಗತಗೊಳಿಸಿದ ನಂತರ ವೀರಾಜಪೇಟೆ ಪಟ್ಟಣಕ್ಕೆ ಮುಂದಿನ ೩೦ ವರ್ಷಗಳಿಗೆ ಬರುವ ಜನಸಂಖ್ಯೆಗೆ ದಿನಂಪ್ರತಿ ತಲಾ ೧೩೫ ಲೀಟರ್‌ರಂತೆ ನೀರನ್ನು ಸರಬರಾಜು ಮಾಡಲು ಹಾಗೂ ೨೦೨೫ ನೇ ಸಾಲಿನಲ್ಲಿ ಪಟ್ಟಣದಲ್ಲಿ ಎಲ್ಲಾ ಮನೆಗಳಿಗೆ ನೀರು ಸರಬರಾಜು ಸಂಪರ್ಕ ದೊರೆಯಲಿದೆ.