ಕರಿಕೆ, ನ. ೧೭: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ತಿಂಗಳಿAದ ಚಿರತೆಯೊಂದು ನಿರಂತರ ಉಪಟಳ ನೀಡುತ್ತಿದ್ದು, ಆತಂಕ ಉಲ್ಬಣಗೊಂಡಿದೆ.

ಅರಣ್ಯ ಇಲಾಖೆ ಕ್ಯಾಮರಾ ಅಳವಡಿಸಿ ಬೋನ್ ಇಟ್ಟು ಚಿರತೆ ಸೆರೆಗೆ ಪ್ರಯತ್ನ ನಡೆಸುತ್ತಿದೆ. ಆದರೆ ಚಾಣಾಕ್ಷ ಚಿರತೆ ದಿನ ರಾತ್ರಿ ವಿವಿಧ ಕಡೆ ತನ್ನ ಸ್ಥಾನ ಪಲ್ಲಟಗೊಳಿಸಿ ನಾಯಿ ಬೇಟೆಯಾಡುತ್ತಿದೆ. ಕಳೆದ ರಾತ್ರಿ ಹೆಚ್.ಎಂ. ಕೇಶವ ಎಂಬವರ ಕೋಳಿಗೂಡಿಗೆ ದಾಳಿಮಾಡಿ ಗೂಡು ಮುರಿದು ಕೋಳಿಗಳನ್ನು ಹೊತ್ತೊಯ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಸೆರೆಹಿಡಿಯಲು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಸುಧೀರ್ ಹೊದ್ದೆಟ್ಟಿ