ಗೋಣಿಕೊಪ್ಪಲು, ನ. ೧೭: ಕನ್ನಡ ಧ್ವಜ ಹಾಗೂ ಬಂಟಿAಗ್ಸ್ಗಳಿAದ ಕಂಗೊಳಿಸುತ್ತಿದ್ದ ಕಾಲೇಜಿನ ಆವರಣ, ವೇದಿಕೆಯಲ್ಲಿ ಕನ್ನಡಕ್ಕಾಗಿ ದುಡಿದ ಮಹನೀಯರ ಭಾವಚಿತ್ರ, ವಿದ್ಯಾರ್ಥಿಗಳು ಕೆಂಪು, ಹಳದಿ ಮಿಶ್ರಿತ ಬಟ್ಟೆತೊಟ್ಟು ೬೯ನೇ ಕನ್ನಡರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಆವರಣದಲ್ಲಿ ವಿವಿಧ ಕಲಾ ತಂಡಗಳಿAದ ಕಲಾ ಪ್ರದರ್ಶನ, ಬ್ಯಾಂಡ್‌ಸೆಟ್‌ಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಅನೇಕ ವಿದ್ಯಾರ್ಥಿಗಳು ಕನ್ನಡ ಬಾವುಟವನ್ನು ಹಿಡಿದು ಬೈಕ್‌ನಲ್ಲಿ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಆಗಮನ, ಇಂತಹ ಸಂಭ್ರಮ ನಡೆದದ್ದು ಪೊನ್ನಂಪೇಟೆ ಸಮೀಪದ ಕೂರ್ಗ್ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ-೫೦ರ ಸಂಭ್ರಮ’ ಕನ್ನಡರಾಜ್ಯೋತ್ಸವದ ಸಂಭ್ರಮ ಆಚರಣೆಯು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕೊಡವ ಎಜುಕೇಷನ್ ಸೊಸೈಟಿ, ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸಿಐಟಿ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇತಿಹಾಸ ತಜ್ಞ ಎ.ಎನ್. ಧರ್ಮೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆ ಮಾಡಿದರೆ ಸಾಲದು, ತಮ್ಮಲ್ಲಿ ನೈಪುಣ್ಯತೆ ಇದ್ದಲ್ಲಿ ಮಾತ್ರ ಜೀವನದ ಹಾದಿ ಸುಗಮವಾಗಲಿದೆ. ನೈಪುಣ್ಯತೆ ಇಲ್ಲದೆ ಇದ್ದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಯಾವುದೇ ವೃತ್ತಿ ಇರಲಿ ಅದನ್ನು ನೈಪುಣ್ಯತೆಯಿಂದ ಮಾಡಬೇಕು. ಇದರಿಂದ ಸಾಧನೆಗೆ ಅವಕಾಶವಿದೆ ಎಂದರು.
ಕರ್ನಾಟಕದಲ್ಲಿ ವಿವಿಧ ಭಾಷೆಗಳಿದ್ದರೂ ಕನ್ನಡಕ್ಕೆ ಮೊದಲ ಆದ್ಯತೆಯಿದೆ. ಕನ್ನಡ ಭಾಷೆ ಅಮ್ಮನ ಭಾಷೆಯಾಗಿದೆ. ಉಳಿದ ಭಾಷೆ ಕಲಿಯುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಬಹುದು. ನಮ್ಮ ಭಾಷೆಯನ್ನು ಯಾರೂ ಕೂಡ ಮರೆಯಬಾರದು. ವಿವಿಧ ಭಾಷೆ ಕಲಿತಲ್ಲಿ ಜೀವನದಲ್ಲಿ ಮುಂದೆ ಬರಬಹುದು ಎಂಬ ನಂಬಿಕೆ ಬ್ರಿಟಿಷರ ಕಾಲದಲ್ಲಿತ್ತು. ಇಂದು ನಂಬಿಕೆ ಹುಸಿಯಾಗಿದೆ. ಅಂದಿನ ಕಾಲದಲ್ಲಿ ಇಂಗ್ಲೀಷ್ ಕಲಿತವರು ಬ್ರಿಟಿಷರಿಗೆ ಹತ್ತಿರವಾಗುತ್ತಿದ್ದರು. ಈಗ ಭ್ರಮೆಯಿಂದ ಹೊರ ಬರಬೇಕಾಗಿದೆ.
ಇದೀಗ ಸ್ಪರ್ಧಾತ್ಮಕ ಯುಗದಲ್ಲಿ ನೈಪುಣ್ಯತೆ ಹೊಂದದಿದ್ದಲ್ಲಿ ಏನು ಮಾಡಲೂ ಸಾಧ್ಯವಿಲ್ಲ. ಯಾವುದೇ ಕೆಲಸ ಮಾಡಿದರೂ ನೈಪುಣ್ಯತೆಯಿಂದ ಮಾಡಿದ್ದಲ್ಲಿ ನಮ್ಮ ಕೆಲಸವನ್ನು ಜನರು ಗುರುತಿಸುತ್ತಾರೆ ಎಂದರು.
ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ, ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಡಾ.ಎಂ.ಸಿ. ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕಾಲೇಜು ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿದ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಸಾಧನೆ ಮಾಡಬೇಕು ಎಂದರು.
ಕನ್ನಡ ಭಾಷೆ ನಮ್ಮ ಮೊದಲ ಆದ್ಯತೆಯಾಗಬೇಕು. ಕನ್ನಡದೊಂದಿಗೆ ಕೆಲವರು ಪ್ರತಿಷ್ಠೆಗಾಗಿ ಸಮಾರಂಭಗಳಲ್ಲಿ ಇಂಗ್ಲಿಷ್ ಮಿಶ್ರಿತ ಮಾತನಾಡುವುದು ಉತ್ತಮವಲ್ಲ ಎಂದ ಅವರು ಪ್ರತಿ ವಿದ್ಯಾರ್ಥಿಯು ಸಾಧನೆ ಮಾಡಲು ಹಲವು ಅವಕಾಶಗಳಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ, ಗೌರವ ಜಂಟಿ ಕಾರ್ಯದರ್ಶಿ ಚಿರಿಯಪಂಡ ಎಂ. ರಾಜ ನಂಜಪ್ಪ ಕನ್ನಡದ ಪರವಾಗಿ ಹಲವು ವಿಚಾರಗಳನ್ನು ಮಂಡಿಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸೌಕರ್ಯಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ, ಕೊಡವ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಸಿ.ಪಿ. ರಾಕೇಶ್ ಪೂವಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಬಸವರಾಜ್, ಪಿಯುಸಿ ಪ್ರಾಂಶುಪಾಲರಾದ ಡಾ. ರೋಹಿಣಿ ತಿಮ್ಮಯ್ಯ, ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಎಂ. ಜ್ಞಾನೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಆಡಳಿತ ಮಂಡಳಿಯು ಸನ್ಮಾನಿಸಿ ಗೌರವಿಸಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಶಿಕ್ಷಕ ವರ್ಗ ಪಾಲ್ಗೊಂಡಿದ್ದರು.
ಎಲೆಕ್ಟಾçನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಪ್ರಾಧ್ಯಾಪಕಿ ಕೆ.ಆರ್. ಸುಷ್ಮಾ, ದೀಪಿಕಾ ಎಸ್., ಪ್ರಾರ್ಥಿಸಿ ಐ.ಪಿ.ಯು.ಸಿ. ಕನ್ನಡ ಉಪನ್ಯಾಸಕಿ ಕುಮಾರಿ ಸುಶ್ಮಿತ ಪಿ.ವಿ. ಸ್ವಾಗತಿಸಿ, ಸಿ.ಐ.ಪಿ.ಯು. ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಪ್ರಾಸ್ತಾವಿಕ ಮಾತನಾಡಿ, ವಿಘ್ನೇಶ್ ಟಿ.ವಿ. ಅತಿಥಿಗಳನ್ನು ಪರಿಚಯಿಸಿ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಪ್ರಾಧ್ಯಾಪಕರಾದ ಜ್ಞಾನೇಶ್ ಎಂ. ವಂದಿಸಿದರು. ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವು ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ನಾಡಗೀತೆ ಹಾಗೂ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು