ಶನಿವಾರಸಂತೆ, ನ. ೧೭ : ವಿದ್ಯಾವಂತ ಯುವಕರ ಸಂಘಟನೆಯ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತದAತೆ ಜಾತಿ ವ್ಯವಸ್ಥೆ ವಿದ್ಯೆಯ ಮೂಲಕ ಬದಲಾವಣೆಯಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಪ್ರತಿಪಾದಿಸಿದರು.
ಸ್ಥಳೀಯ ಬಸಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ೫೦ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಪ್ರಯುಕ್ತ ಜಿಲ್ಲಾ ಮಟ್ಟದ ಹಿರಿಯ ದಲಿತ ಹೋರಾಟಗಾರರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಸಂಸ ಸಂಘಟನೆಗಳ ಸಮಾರಂಭದಲ್ಲಿ ಹಿರಿಯರಾಡುವ ಮಾತುಗಳು ಸ್ವೀಕಾರಾರ್ಹವಾಗಿದ್ದು ವೇದಿಕೆಯ ಸನ್ಮಾನವೆಂದರೆ ಸಾಧಕರು ಇತರರಿಗೆ ಸ್ಫೂರ್ತಿಯಾಗಬೇಕು. ಸನ್ಮಾನಿತರ ತ್ಯಾಗ, ಸಾಧನೆ ಸ್ಮರಣೀಯವಾಗಿದ್ದು, ವಿವಿಧ ಸಮಿತಿಗಳಲ್ಲಿ ನೀಡಿರುವ ಸ್ಥಾನಮಾನ ಗಳ ಮೂಲಕ ಜನಪರ ಕೆಲಸ ಮಾಡಬೇಕು.ಕಾರ್ಯಕ್ರಮ ಅರ್ಥಪೂರ್ಣವಾಗಲು ಎಲ್ಲಾ ದಸಂಸ ಸಂಘಟನೆಗಳು ಒಂದಾಗಬೇಕು. ದಲಿತ ಸಮುದಾಯಕ್ಕೆ ಗೌರವ ತರುವ ಕಾರ್ಯವಾಗಬೇಕು.ಸಂವಿಧಾನ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ದಲಿತರ ಹೋರಾಟದಲ್ಲಿ ತಾನೂ ಸ್ವತಃ ಭಾಗಿಯಾಗುತ್ತೇನೆ ಎಂದು ಹೇಳಿದರು. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮುಖ್ಯಭಾಷಣಕಾರ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮಾತನಾಡಿ, ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಮರೆತವರಿಗೆ ಬಾಳಿಲ್ಲ.೧೯೫೬ ರಲ್ಲಿ ಸಂವಿಧಾನ ಜಾರಿಯಾಗಿದ್ದು ವಿವಿಧ ವರ್ಗ, ದಲಿತ ಜಾತಿಯವರೆಲ್ಲ ಅಂಬೇಡ್ಕರ್ ಋಣದ ಮಕ್ಕಳೆಂಬುದನ್ನು ಮರೆಯುವಂತಿಲ್ಲ. ಸಮುದಾಯ ತನ್ನ ಚರಿತ್ರೆಯನ್ನು ಮರೆಯಬಾರದು.ಅಂಬೇಡ್ಕರ್ ವಿರಚಿತ ಕೃತಿಗಳನ್ನು ಓದಲೇ ಬೇಕು.ಅಂಬೇಡ್ಕರ್-ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರೇ ಹೋರಾಟದ ಹಾದಿಗಳು ಪರಿವರ್ತನೆ ಉಂಟು ಮಾಡುತ್ತವೆ. ದಲಿತ ಚಳುವಳಿಯ ಪ್ರಭಾವ ಅನೇಕರ ಮೇಲಾಗಿದೆ. ಎಂದರು.
ಸುವರ್ಣ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ದಸಂಸ ಸ್ಥಾಪಕ ಪ್ರೊಫೆಸರ್ ಬಿ.ಕೃಷ್ಣಪ್ಪ ಪ್ರಶಸ್ತಿಯನ್ನು ಸಾಧಕರಾದ ಸೋಮವಾರಪೇಟೆಯ ಜಯಪ್ಪ ಹಾನಗಲ್, ಹಿರಿಕರದ ಎಚ್.ಜೆ.ಹನುಮಯ್ಯ, ವೀರಾಜಪೇಟೆಯ ವೀರಭದ್ರಯ್ಯ, ಡಿ.ಎಸ್. ನಿರ್ವಾಣಪ್ಪ ಜೆ. ಸೋಮಣ್ಣ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ.ರಾಮಕುಮಾರ್, ಸೋಮವಾರಪೇಟೆಯ ದಿ.ಗುರುಲಿಂಗಪ್ಪ, ಕೊಡ್ಲಿಪೇಟೆಯ ದಿ.ಡಿ.ಸಿ.ನಿರ್ವಾಣಪ್ಪ, ಶನಿವಾರಸಂತೆಯ ದಿ.ಶಿವಶಂಕರ್, ಮುಳ್ಳೂರು ದಿ.ಸಣ್ಣಯ್ಯ ಅವರುಗಳ ಸೇವೆ ಸ್ಮರಿಸಿ ಅವರ ಮನೆಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕೊಡ್ಲಿಪೇಟೆಯ ಮಾನವತಾ ಕಲಾ ತಂಡದವರು ಗೀತೆಗಳನ್ನು ಹಾಡಿ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ದಸಂಸನ ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಸಿ.ಜೆ.ಮೋಹನ್ ಮೌರ್ಯ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹಾಸನ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ.ಮಹಾಲಿAಗಯ್ಯ, ಬೆಂಗಳೂರು ಅಕ್ಕ ಐ.ಎ.ಎಸ್.ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಸುವರ್ಣ ಮಹೋತ್ಸವ ಆಚರಣಾ ಸಮಿತಿ ಉಪಾಧ್ಯಕ್ಷ ಡಿ.ವಿ.ಜಗದೀಶ್, ಎಸ್.ಎಸ್.ಶಿವಲಿಂಗ, ಸನ್ಮಾನ ಆಯ್ಕೆ ಸಮಿತಿ ಅಧ್ಯಕ್ಷ ಡಿ.ಆರ್.ಕೆಂಚೇಶ್ವರ, ಹಿರಿಯ ದಲಿತ ಹೋರಾಟಗಾರ ಸಿದ್ಧಣ್ಣ, ಕೊಡ್ಲಿಪೇಟೆಯ ಮುಖಂಡರಾದ ಪುಟ್ಟಸ್ವಾಮಿ, ಔರಂಗಜೇಬ್, ಸುವರ್ಣ ಮಹೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಡಿ.ಜೆ.ಈರಪ್ಪ, ಕಾರ್ಯದರ್ಶಿ ಡಿ.ಎನ್.ವಸಂತ್, ಡಿ.ಜಿ.ವಿಜಯ, ಡಿಲಾಕ್ಷ, ಕೆ.ಡಿ.ಜಗದೀಶ್, ಖಜಾಂಚಿ ಡಿ.ಆರ್. ವೇದಕುಮಾರ್, ಗೌರವ ಸಲಹೆಗಾರ ಎಂ.ಕಾಳಯ್ಯ, ನಿರ್ದೇಶಕರಾದ ಸಿ.ಸಿ.ಲೋಕೇಶ್, ಎಂ.ಎಸ್.ಕುಮಾರ್, ಧರ್ಮ, ಹೇಮಂತ್, ಆದಿ, ಯೋಗೇಶ್ ಉಪಸ್ಥಿತರಿದ್ದರು. ಡಿ.ಆರ್.ವೇದಕುಮಾರ್ ಸ್ವಾಗತಿಸಿದರು. ಡಿ.ಎನ್. ವಸಂತ್ ನಿರೂಪಿಸಿ ವಂದಿಸಿದರು.