ಸೋಮವಾರಪೇಟೆ, ನ. ೧೭: ಈ ಹಿಂದೆ ಸೋಮವಾರಪೇಟೆ ನ್ಯಾಯಾಲ ಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಶಿವಮೊಗ್ಗದಲ್ಲಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ. ಶೈನಿ ಅವರು ಇಲ್ಲಿನ ವಕೀಲರ ಸಂಘಕ್ಕೆ ಭೇಟಿ ನೀಡಿ ರ‍್ಚೆ ನಡೆಸಿದರು.

ಸೋಮವಾರಪೇಟೆಯಲ್ಲಿ ವಕೀಲರಾಗಿದ್ದ ಶೈನಿ ಅವರು ೨೦೧೮ ರಲ್ಲಿ ಪ್ರಥಮ ರ‍್ಜೆ ದಂಡಾಧಿಕಾರಿಗಳಾಗಿ ಆಯ್ಕೆ ಯಾಗಿದ್ದರು. ನಂತರ ಸ್ರ‍್ಧಾತ್ಮಕ ಪರೀಕ್ಷೆಯಲ್ಲಿ ಉತ್ತರ‍್ಣರಾಗಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದರು. ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂರ‍್ಭ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣ, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್.ಸಿ. ರೇಖಾ, ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ, ಹಿರಿಯ ವಕೀಲರಾದ ಡಿ.ಕೆ. ತಿಮ್ಮಯ್ಯ ಹಾಗೂ ಹೆಚ್.ಎಸ್. ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.