ಮಡಿಕೇರಿ, ನ. ೧೭: ತೂಕ್ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವಿಶೇಷ ಕಾರ್ಯಕ್ರಮವಾಗಿ ಕೊಡವ ವಾಲಗತಾಟ್ ನಮ್ಮೆ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ಆಯೋಜಿಸುತ್ತಿದ್ದು, ಈ ಬಾರಿ ಮೂರನೇ ವರ್ಷದ ಕಾರ್ಯಕ್ರಮ ಡಿಸೆಂಬರ್ ೧೦ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಜರುಗಲಿದೆ.
ಪೊನ್ನಂಪೇಟೆ ಕೊಡವ ಸಮಾಜದ ಸಹಕಾರದೊಂದಿಗೆ ೩ನೇ ವರ್ಷದ ‘ತೂಕ್ಬೊಳಕ್ ಕೊಡವ ವಾಲಗತಾಟ್ ಹಬ್ಬ- ೨೦೨೪’ ನಿಗದಿಯಾಗಿದೆ.
ಕೊಡವ ವಾಲಗದ ವಾದ್ಯವನ್ನು ಕೇಳಿದರೆ ಸಂತೋಷ ಪಡದವರು ವಿರಳ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರವರೆಗೆ ಕುಣಿಯಲು ಕಾಲು ತೆಗೆಯುವಂತಹ ಒಂದು ವಿಶೇಷತೆ ಕೊಡವ ವಾಲಗಕ್ಕೆ ಇದೆ. ಇದನ್ನು ಒಂದು ಹಬ್ಬದ ರೂಪದಲ್ಲಿ ತಂದು ಎಲ್ಲಾ ಜನರು ಸೇರಿ ಕೊಡವ ವಾಲಗವನ್ನು ಸಂಭ್ರಮಿಸಬೇಕೆAಬುದು ಈ ಹಬ್ಬದ ಉದ್ದೇಶ. ಅಲ್ಲದೆ ಕೊಡವ ಸಂಪ್ರದಾಯಕ್ಕೆ ವಾಲಗ ಕುಣಿತವನ್ನು ಎಲ್ಲಾ ವಯಸ್ಸಿನ ಜನರಿಗೆ ಅರಿವಿಕೆ ಕೊಟ್ಟು ವಾಲಗ ಕುಣಿತದ ಮಹತ್ವವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವುದು ಇದರ ಚಿಂತನೆಯಾಗಿದೆ ಎಂದು ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ೮ ವಿಭಾಗದಲ್ಲಿ ಗಂಡಸರಿಗೆ ಹಾಗೂ ಹೆಂಗಸರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯುತ್ತದೆ. ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ೧೬ ವಿಭಾಗಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಬಹಳಷ್ಟು ಸ್ಪರ್ಧಿಗಳು ಹೆಸರು ನೋಂದಾಯಿಸಿಕೊAಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೊದಲ ವರ್ಷದ ಕಾರ್ಯಕ್ರಮ ವೀರಾಜಪೇಟೆ ಕೊಡವ ಸಮಾಜ ಹಾಗೂ ಎರಡನೇ ವರ್ಷದ ಸ್ಪರ್ಧೆ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದಿತ್ತು.