ಶ್ರೀಮಂಗಲ, ನ. ೧೮: ಕಾಕೂರು ಗ್ರಾಮದ ಕುಟ್ಟ- ಶ್ರೀಮಂಗಲ ಮುಖ್ಯರಸ್ತೆಯ ಸಮೀಪದ ಅಂಚೆ ಕಚೇರಿಯ ಬೀಗ ಒಡೆದು ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.

ಶನಿವಾರ ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳು ಕರ್ತವ್ಯ ಮುಗಿಸಿ ಬಾಗಿಲು ಹಾಕಿ ತೆರಳಿದ ನಂತರ ಸೋಮವಾರ ಬೆಳಿಗ್ಗೆ ಸಮೀಪದ ಅಂಗಡಿಯವರು, ಬಾಗಿಲು ಮುರಿದಿರುವುದನ್ನು ಕಂಡು ಅಂಚೆ ಕಚೇರಿಯ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆ ಪೊಲೀಸರಿಗೆ ಅಂಚೆ ಕಚೇರಿಯ ಸಿಬ್ಬಂದಿ ಸತ್ಯ ಅವರು ನೀಡಿದ ದೂರಿನಂತೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಿಲನ್ನು ಮುರಿದು, ಅಂಚೆ ಕಚೇರಿಯ ಮೇಜಿನ ಕಪಾಟಿನಲ್ಲಿ ನೂರು ರೂಪಾಯಿ ಮಾತ್ರ ಇದ್ದುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸಮೀಪದ ಅಂಗಡಿಯ ಸಿಸಿ ಟಿವಿಯಲ್ಲಿ ಎರಡು ಜನ ಕಳ್ಳರು ಹೊಂಚು ಹಾಕಿ ಬೀಗ ಮುರಿಯುತ್ತಿರುವುದು ಕಂಡುಬAದಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.