ಸುಂಟಿಕೊಪ್ಪ,ನ. ೧೮: ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲವು ತಿಂಗಳುಗಳಿAದ ದುರಸ್ತಿಗೀಡಾಗಿದ್ದ ಆ್ಯಂಬ್ಯುಲೆನ್ಸ್ಸ್ ವಾಹನವು ಸಾರ್ವಜನಿಕರ ಸೇವೆಗೆ ದೊರೆಯದೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಬಗ್ಗೆ ಎಸ್‌ಡಿಟಿಯು ಸಂಘಟನೆಯ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು.

ಅಧಿಕಾರಿಗಳು ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆ್ಯಂಬ್ಯುಲೆನ್ಸ್ ವಾಹನದ ದುರಸ್ತಿ ಕಾರ್ಯ ನಡೆಸಿ ಸಾರ್ವಜನಿಕರ ಸೇವೆಗೆ ಒದಗಿಸಿದ್ದಾರೆ.

ತಾ. ೬ ರಂದು ಎಸ್‌ಡಿಟಿಯು ಸಂಘಟನೆಯ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ತಾ. ೭ ರಂದು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ವಾಹನ ದುರಸ್ತಿಗೊಳಿಸಿ ಸೇವೆಗೆ ಸಿದ್ಧಪಡಿಸಿದರು. ಈ ಸಂದರ್ಭ ಎಸ್‌ಡಿಟಿಯುವಿನ ಅಧ್ಯಕ್ಷ ಅಣ್ಣ ಶರೀಫ್, ಸಂಘಟನಾ ಕಾರ್ಯದರ್ಶಿ ಕೆ.ಎ. ಲತೀಫ್ ಹಾಜರಿದ್ದರು.