vಮಡಿಕೇರಿ, ನ. ೧೮: ದಿನಂಪ್ರತಿ ನ್ಯಾಯಾಲಯಗಳಲ್ಲಿ ವಿವಿಧ ರೀತಿಯ ಕಲಾಪಗಳ ಜಂಜಾಟದಲ್ಲೇ ತೊಡಗುವ ವಕೀಲರುಗಳು ಇಂದು ತಮ್ಮ ಕೆಲಸದ ಒತ್ತಡವನ್ನು ಒಂದಷ್ಟು ಮರೆತು, ಕ್ರೀಡಾಕೂಟದ ಸಂಭ್ರಮದಲ್ಲಿ ಮಿಂದೆದ್ದರು. ಮಡಿಕೇರಿ ವಕೀಲರ ಸಂಘದಿAದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾದಿನಾಚರಣೆ ಸಂಭ್ರಮದಿAದ ಜರುಗಿತು. ವಕೀಲರುಗಳೊಂದಿಗೆ ನ್ಯಾಯಾಲಯದ ಇತರ ಸಿಬ್ಬಂದಿಗಳು ಪಾಲ್ಗೊಂಡು ಇಡೀ ದಿನ ಕ್ರೀಡಾಕಲರವ ಕಂಡುಬAದಿತು. ಕ್ರಿಕೆಟ್, ಹಗ್ಗ ಜಗ್ಗಾಟ, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ಉತ್ತಮ ಆರೋಗ್ಯಕ್ಕೆ ಸಹಕಾರಿ
ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು, ಒಳ್ಳೆಯ ಆರೋಗ್ಯ ಇದ್ದಾಗ ಮಾತ್ರ ಉತ್ತಮ ಮನಸ್ಸು ಕೂಡ ಇರುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ಹೊಂದಲು ಕ್ರೀಡೆ ಸಹಕಾರಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ವಕೀಲರ ಸಂಘದ ಬೇಡಿಕೆಯಾಗಿರುವ ಸಂಘದ ಕಟ್ಟಡಕ್ಕೆ ಸೂಕ್ತ ತಡೆಗೋಡೆ ನಿರ್ಮಾಣ ಸಂಬAಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು. ಸಮಾಜದ ಆರೋಗ್ಯ ಕಾಪಾಡುವಲ್ಲಿ ವಕೀಲ ವೃತ್ತಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಮಾತನಾಡಿ, ವಕೀಲರು ಒಂದು ದಿನ ಎಲ್ಲಾ ಕೆಲಸದ ಒತ್ತಡ ಮರೆತು ಕ್ರೀಡಾಕೂಟದ ಮೂಲಕ ಸಂಭ್ರಮಿಸುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
(ಮೊದಲ ಪುಟದಿಂದ) ಕ್ರೀಡೆ ಸಹಕಾರಿ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ವಕೀಲರ ಸಂಘದ ಬೇಡಿಕೆಯಾಗಿರುವ ಸಂಘದ ಕಟ್ಟಡಕ್ಕೆ ಸೂಕ್ತ ತಡೆಗೋಡೆ ನಿರ್ಮಾಣ ಸಂಬAಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು. ಸಮಾಜದ ಆರೋಗ್ಯ ಕಾಪಾಡುವಲ್ಲಿ ವಕೀಲ ವೃತ್ತಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಮಾತನಾಡಿ, ವಕೀಲರು ಒಂದು ದಿನ ಎಲ್ಲಾ ಕೆಲಸದ ಒತ್ತಡ ಮರೆತು ಕ್ರೀಡಾಕೂಟದ ಮೂಲಕ ಸಂಭ್ರಮಿಸುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮಾತನಾಡಿ, ವಕೀಲರಲ್ಲಿನ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಎಲ್ಲಾ ಕೆಲಸಕಾರ್ಯಗಳ ಜಂಜಾಟ ಮರೆತು ಒಗ್ಗಟ್ಟಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರ ಮಿಸಲು ಇಂಥಹ ಕ್ರೀಡಾಕೂಟವನ್ನು ವಕೀಲರ ಸಂಘ ಆಯೋಜಿಸಿದೆ ಎಂದು ಹೇಳಿದರು. ವೇದಿಕೆಯಲ್ಲಿ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜು ಸಿ.ಕೆ., ವಕೀಲರ ಸಂಘದ ಕಾರ್ಯದರ್ಶಿ ಡಿ.ಎಂ. ಕೇಶವ, ಉಪಾಧ್ಯಕ್ಷ ಎಂ.ಪಿ. ನಾಗರಾಜ್, ಸರ್ಕಾರಿ ಅಭಿಯೋಜಕರಾದ ಶ್ರೀಧರನ್ ನಾಯರ್ ಉಪಸ್ಥಿತರಿದ್ದರು. ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ನ್ಯಾಯಾಲಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕ್ರೀಡಾ ಕಾರ್ಯದರ್ಶಿ ಕಪಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.