ಮಡಿಕೇರಿ, ನ. ೧೮: ರಾಜ್ಯ ಒಲಂಪಿಕ್ ಸಂಸ್ಥೆ, ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಮಿನಿ ಒಲಂಪಿಕ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಂಡರ್ ೧೪ ಬಾಲಕರ ತಂಡವು ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿ ಹಾಸನ ತಂಡದ ವಿರುದ್ಧ ೧-೦ ಗೋಲುಗಳ ಅಂತರದಿAದ ಪರಾಭವಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ಮೊದಲ ಬಾರಿಗೆ ಫೈನಲ್ಗೆ ಲಗ್ಗೆಯಿಟ್ಟು ಕೊಡಗು ತಂಡವು ಹೊಸ ಇತಿಹಾಸ ಸೃಷ್ಟಿಸಿತ್ತು.
ನವೆಂಬರ್ ೧೬ ರಿಂದ ೧೮ರವರೆಗೆ ಬೆಂಗಳೂರಿನ ರಾಜ್ಯ ಫುಟ್ಬಾಲ್ ಸಂಸ್ಥೆಯ ಮೈದಾನದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಬಾಲಕರ ತಂಡವು ಮೊದಲ ಪಂದ್ಯವನ್ನು ೩-೧ ಗೋಲುಗಳ ಅಂತರದಿAದ ಮೈಸೂರು ತಂಡವನ್ನು ಮಣಿಸಿತು.
ದ್ವಿತೀಯ ಪಂದ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ೩-೧ ಗೋಲುಗಳ ಅಂತರದಿAದ ಸೋಲಿಸಿತು. ಮೂರನೇ ಪಂದ್ಯದಲ್ಲಿ ದಾವಣಗೆರೆ ಜಿಲ್ಲಾ ತಂಡವನ್ನು ೪-೧ ಗೋಲುಗಳ ಅಂತರದಿAದ ಮಣಿಸಿ ಬಾಲಕರ ಎ ಗುಂಪಿನಲ್ಲಿ ಪ್ರಥಮ ಸ್ಥಾನಗಳಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ನಾಗೇಶ್ ಇದ್ದರು. ಕೊಡಗು ತಂಡದ ತರಬೇತುದಾರರಾಗಿ ಮಡಿಕೇರಿಯ ಕ್ರಿಸ್ಟೋಫರ್ ಕಾರ್ಯನಿರ್ವಹಿಸಿದ್ದರು.