ಕೊಡ್ಲಿಪೇಟೆ, ನ. ೧೮: ಪೈಸಾರಿ, ಕೆರೆ ಬದಿ, ಗೋಮಾಳ ಹಾಗೂ ಊರುಡುವೆ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿರುವ ಮಂದಿಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಇವರಿಗೆ ಹಕ್ಕುಪತ್ರ ಒದಗಿಸಬೇಕೆಂದು ಬ್ಯಾಡಗೊಟ್ಟ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಅಧ್ಯಕ್ಷೆ ರೇಣುಕಾ ಮೇದಪ್ಪ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಆವರಣದಲ್ಲಿ ಜರುಗಿತು.

ಕಂದಾಯ ಇಲಾಖೆಗೆ ಸಂಬAಧಿಸಿದAತೆ ಗ್ರಾಮ ಆಡಳಿತಾಧಿಕಾರಿ ಚೈತ್ರಾ ಅವರು ಮಾಹಿತಿ ನೀಡುವ ಸಂದರ್ಭ ಹಕ್ಕು ಪತ್ರಗಳ ಬಗ್ಗೆ ಚರ್ಚೆಯಾಯಿತು. ಹಿಂದಿನಿAದಲೂ ಕೆರೆ ಏರಿ, ಊರುಡುವೆ ಸೇರಿದಂತೆ ಇತರ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಾಗುವಳಿ ಮಾಡುತ್ತಾ ಬಂದಿರುವ ಕೃಷಿಕರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾತಿ ಮಾಡುವಾಗ ಆ ಜಾಗದ ಜಮಾಬಂದಿಯಲ್ಲಿ ಹೇಮಾವತಿ ನಿರಾಶ್ರಿತರಿಗೆ ಮೀಸಲು ಅಥವಾ ಗ್ರಾಮದ ಅವಶ್ಯಕ್ಕಿಂತ ಹೆಚ್ಚು ಹುಲ್ಲುಗಾವಲು ಎಂದು ನಮೂದಾಗಿರುವುದರಿಂದ ಮಂಜೂರಾತಿಯಾಗದೆ ತೊಂದರೆ ಎದುರಾಗಿದೆ. ಇವುಗಳನ್ನು ಸರಪಡಿಸಿ ಮಂಜೂರಾತಿ ಮಾಡಿಕೊಡುವಂತೆ ಕೃಷಿಕರು ಒತ್ತಾಯಿಸಿದರು.

ಆರೋಗ್ಯ ಇಲಾಖೆಗೆ ಸಂಬAಧಿಸಿದAತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೆ. ಮಂಜುಳಾ ಮಾಹಿತಿ ನೀಡಿದರು

ಬೆಂಬಳೂರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿ (ಸಿಹೆಚ್‌ಓ) ಬ್ಯಾಡಗೊಟ್ಟ ಮತ್ತು ಕ್ಯಾತೆ ವಾರ್ಡ್ಗಳಲ್ಲಿಯೂ ಗ್ರಾಮವಾರು ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸಿದರು. ಗ್ರಾಮಸ್ಥರ ಬೇಡಿಕೆ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಅನಾರೋಗ್ಯವಿರುವ ವಯಸ್ಕರಿಗೆ ಅವರ ಮನೆಗೆ ತೆರಳಿ ಚಿಕಿತ್ಸೆ ನೀಡುವಂತೆ ಸೂಚಿಸಲಾಯಿತು,

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಶ್ವತವಾಗಿ ಆ್ಯಂಬ್ಯುಲೆನ್ಸ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹ ಕೇಳಿಬಂತು.

ಕೃಷಿಕರು ಭೂಮಿ ಸಿದ್ಧತೆ ಹಾಗೂ ಔಷಧಿ ಸಿಂಪಡಣೆ ಮತ್ತು ಗೊಬ್ಬರ ಹಾಕುವ ಬಗ್ಗೆ ಮಾಹಿತಿ ನೀಡಿದ ತಾಲೂಕು ಕೃಷಿ ಇಲಾಖಾ ಸಹಾಯಕ ನಿರ್ದೇಶಕ ವೀರಣ್ಣ ಕೆ.ಪಿ. ಅವರು, ಇಲಾಖೆಯಲ್ಲಿ ಬಿತ್ತನೆ ಬೀಜ ಮತ್ತು ಔಷಧಿ, ಕೃಷಿ ಸುಣ್ಣ, ಕಳೆಯಂತ್ರ, ಸ್ಪಿçಂಕ್ಲರ್, ಡಿಸೇಲ್ ಪಂಪ್, ಪವರ್ ಟಿಲ್ಲರ್ ಸೇರಿದಂತೆ ಯಂತ್ರೋಪಕರಣಗಳು ಸಹಾಯಧನದಲ್ಲಿ ಲಭ್ಯವಿದೆ ಎಂದರು.

ಪAಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ನೌಕರ ನಂಜುAಡಸ್ವಾಮಿ ಅವರು ಶಾಲೆಗೆ ಸಂಬAಧಿಸಿದAತೆ ಮಾಹಿತಿ ನೀಡುವಾಗ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಸತಿ ಶಾಲೆಗೆ ಅವಕಾಶ ಮಾಡಿಕೊಡದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಸಂಬAಧಿಸಿದAತೆ ಕೊಡ್ಲಿಪೇಟೆ ವಿದ್ಯಾರ್ಥಿ ನಿಲಯದ ವಾರ್ಡನ್ ಬಸವರಾಜು ಅವರು ಅಪೂರ್ಣ ಮಾಹಿತಿ ನೀಡುತ್ತಿದ್ದ ಸಂದರ್ಭ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ವಿದ್ಯುತ್ ಉಪ ಕೇಂದ್ರದ ಅಭಿಯಂತರ ಪ್ರಕಾಶ್ ಅವರು, ಪ್ರಧಾನ ಮಂತ್ರಿ ಸೌರ ಗೃಹ ಯೋಜನೆಯು ಸೌರ ಘಟಕ ಬಳಸಿ ವಿದ್ಯುತ್ ಬಿಲ್ ಉಳಿಸಲು ಸಹಕಾರಿಯಾಗಿದೆ. ಸಾರ್ವಜನಿಕರು ಸೂಕ್ತ ದಾಖಲಾತಿ ನೀಡಿ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬೀದಿ ದೀಪ ಅಳವಡಿಸಿರುವುದರಿಂದ ಅನುದಾನ ಕಡಿಮೆ ಇರುವ ಕಾರಣ ಇಲಾಖೆಯಿಂದಲೆ ಫೇಸ್ ಲೈನ್ ಅಳವಡಿಸಲು ಕ್ರಮ ವಹಿಸುವಂತೆ ಸಭೆ ಒತ್ತಾಯಿಸಿತು. ಶಿಕ್ಷಣ ಇಲಾಖೆಗೆ ಸಂಬAಧಿಸಿದAತೆ ಕ್ಷೇತ್ರ ಸಂಪನ್ಮೂಲ ಅಧಿಕಾರಿ ರವೀಶ್ ಮಾಹಿತಿ ನೀಡಿದರು.

ಬ್ಯಾಡಗೊಟ್ಟ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಮೆಲ್ಚಾವಣಿ ಹಾನಿಯಾಗಿವೆ. ಒಂದು ವರ್ಷದಿಂದಲೂ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಬಿಇಓ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರುಗಳು ಸಭೆಯಲ್ಲಿ ಅವರು ವ್ಯಕ್ತಪಡಿಸಿದರು.

ಭೂ ದಾಖಲಾತಿಗಳಿಲ್ಲದ ಮನೆಗಳಿಂದ ಕಂದಾಯ ವಸೂಲಾತಿ ಮಾಡುತ್ತಿರುವಂತೆ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿ ಮತ್ತು ಹೊಟೇಲ್‌ಗಳಿಗೆ ಕಂದಾಯ ವಿಧಿಸಬೇಕು. ಇದರಿಂದ ಪಂಚಾಯಿತಿಗೆ ಆದಾಯ ಬರುತ್ತದೆ ಎಂದು ಸಾರ್ವಜನಿಕರು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಅಧಿಕಾರಿಗಳು ಸಭೆಗೆ ಗೈರಾಗಿರುವ ಬಗ್ಗೆ ನೋಟೀಸ್ ನೀಡಲು ತೀರ್ಮಾನಿಸಲಾಯಿತು.

ಅಧ್ಯಕ್ಷೆ ರೇಣುಕಾ ಮಾತನಾಡಿ, ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಕಂದಾಯ ಪಾವತಿಸಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರುಗಳಾದ ಹನೀಫ್, ದಿನೇಶ್‌ಕುಮಾರ್, ಮೋಕ್ಷಿತ್ ರಾಜ್, ದೊಡ್ಡಯ್ಯ, ಲೀನಾಪರಮೇಶ್, ವಿನೋದಾ ಆನಂದ್, ಅಭಿವೃದ್ಧಿ ಅಧಿಕಾರಿ ಗಿರೀಶ್, ನೌಕರ ರಾಜೇಶ್ ಸೇರಿದಂತೆ ಇತರರು ಇದ್ದರು.

ಗ್ರಾಮಸ್ಥರಾದ ಡಿ.ಆರ್.ವೇದ್‌ಕುಮಾರ್, ಸುಲೈಮಾನ್, ಮಲ್ಲೇಶ್, ಮೇದಪ್ಪ, ಚಂದ್ರಶೇಖರ್, ಮಂಜುನಾಥ್, ಶಿವಕುಮಾರ್, ಕಾಂತರಾಜ್, ಕೇಶವ, ವಿಶ್ವನಾಥ್ ಸೇರಿದಂತೆ ಇತರರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.