ಚೆಯ್ಯಂಡಾಣೆ, ನ. ೧೮: ಸಾಹಿತ್ಯೋತ್ಸವದ ಮೂಲಕ ಎಸ್ ಎಸ್ ಎಫ್ ಸಾಹಿತ್ಯಕ್ಕೆ ಒತ್ತು ನೀಡುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆಯ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದರು. ಕೊಂಡAಗೇರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರಿಗೆ ತಮ್ಮ ಚಿಂತನೆಯನ್ನು ಕಲಿಸಿಕೊಡುವಂತಹ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿದೆ, ಬಹುಷಾ ಇದಕ್ಕಿಂತ ಒಳ್ಳೆ ಕಾರ್ಯ ಬೇರೊಂದಿಲ್ಲ, ನಮ್ಮ ಸಮಾಜದಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಂತಹ ಸಮಯ ಬಂದಿದೆ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು, ವಿದ್ಯಾಭ್ಯಾಸ ಮಾಡಿದರೆ ಮಾತ್ರ ಒಳ್ಳೆಯ ಅವಕಾಶಗಳು ಸಿಗುತ್ತದೆ, ಸಮಾಜದ ಮುಂಚೂಣಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದರು.
ಕೊAಡAಗೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ೨ ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ೧೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ೧೧೦ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ತೀರ್ಪುಗಾರರಾಗಿ ೫೦ ಮಂದಿ ಕಾರ್ಯ ನಿರ್ವಹಿಸಿದರು.
ರಾಜ್ಯಮಟ್ಟದಲ್ಲಿ ಚಾಂಪಿಯನ್ ಆಗಿ ದಕ್ಷಿಣ ಕನ್ನಡ ಈಸ್ಟ್ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡರೆ, ರನ್ನರ್ಸ್ ಸ್ಥಾನಕ್ಕೆ ಬೆಂಗಳೂರು ತಂಡ ತೃಪ್ತಿ ಪಟ್ಟುಕೊಂಡರು. ಮೂರನೇ ಸ್ಥಾನಕ್ಕೆ ದಕ್ಷಿಣ ಕನ್ನಡ ಈಸ್ಟ್ ಆಯ್ಕೆಯಾದರು. ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾ. ೨೯, ೩೦ ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಸಾಹಿತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಯ್ಯದ್ ಶಿಯಾಬುದ್ದಿನ್ ಮಶ್ಹೂರ್ ತಲಕ್ಕಿ ತಂಙಳ್ ಪ್ರಾರ್ಥನೆಗೆ ನೇತೃತ್ವ ವಹಿಸಿ ಮಾತನಾಡಿದರು. ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷರಾದ ಹಾಫೀಝ್ ಸೂಪಿಯಾನ್ ಸಖಾಫಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆ ನಡೆಸುತ್ತಿರುವ ಕಾರ್ಯಕ್ರಮವನ್ನು ಸವಿಸ್ತಾರವಾಗಿ ವಿವರಿಸಿದರು.ಎಸ್ ಎಸ್ ಎಫ್ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ಮುನ್ನುಗ್ಗಬೇಕೆಂದು ಕರೆ ನೀಡಿದರು.
ಪ್ರಮುಖ ಸಾಹಿತಿ ಇಸ್ಮತ್ ಫಝೀರ್ ಎಸ್‌ಎಸ್‌ಎಫ್ ನ ಬಗ್ಗೆ ಹೆಮ್ಮೆ ಇದೆ ಈ ಸಂಘಟನೆ ಸಾಹಿತ್ಯಕ್ಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಮಾಜಿ ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷರು ಹಾಗೂ ಸಾಹಿತ್ಯೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಹಕರಿಸಬೇಕೆಂದರು. ಇದೇ ಸಂದರ್ಭ ಎಸ್‌ಎಸ್‌ಎಫ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಸಯ್ಯದ್ ಸೈಫುದ್ದಿನ್ ತಂಙಳ್, ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಖಾಲಿದ್ ಫೈಝಿ, ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷರಾದ ಬಷೀರ್ ಸಅದಿ, ಮಹಲ್ ಖತೀಬ್ ಸ್ವಾದಿಕ್ ಸಖಾಫಿ, ಎಸ್‌ಎಸ್‌ಎಫ್ ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಎನ್.ಸಿ. ರಹೀಂ, ಮುಹಿನ್ ಸಖಾಫಿ, ಸಖಾಫಿ, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಹನೀಫ್, ಅಲ್ಪಸಂಖ್ಯಾತ ವೀರಾಜಪೇಟೆ ತಾಲೂಕು ಅಧ್ಯಕ್ಷ ರಫೀಕ್, ಅಲ್ಪಸಂಖ್ಯಾತ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಸಿರ್, ವೀರಾಜಪೇಟೆ ಯುವ ಜೆಡಿಎಸ್ ಅಧ್ಯಕ್ಷ ಸೈಪುದ್ದಿನ್, ಯಾಕೂಬ್ ಮಾಸ್ಟರ್, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಕೆಸಿಎಫ್ ನಾಯಕ ಖಲಂದರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಸಖಾಫಿ, ಕೋಶಾಧಿಕಾರಿ ಮುಸ್ತಫಾ ನಹಿಮಿ, ಮತ್ತಿತರರು ಉಪಸ್ಥಿತರಿದ್ದರು.