ಭಾಗಮAಡಲ, ನ. ೧೮: ತುಲಾಸಂಕ್ರಮಣದ ಪ್ರಯುಕ್ತ ಅಕ್ಟೋಬರ್ ೧೬ರಂದು ಭಾಗಮಂಡಲ ದಿಂದ ತಲಕಾವೇರಿಗೆ ಕೊಂಡೊಯ್ಯ ಲಾಗಿದ್ದ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣಗಳನ್ನು ಮರಳಿ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು.
ಜಾತ್ರೆಯ ಅಂಗವಾಗಿ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಂದ ಆಭರಣ ಗಳನ್ನು ಪಡೆದು ತಲಕಾವೇರಿಯಲ್ಲಿ ಮಾತೆಗೆ ತೊಡಿಸಿದ್ದರು. ಕಿರುಸಂಕ್ರಮಣ ದವರೆಗೆ ಕಾವೇರಿ ಕುಂಡಿಕೆಯಲ್ಲಿ ಆಭರಣ ಹಾಗೂ ಬೆಳ್ಳಿಯ ಕವಚಗಳನ್ನು ತೊಡಿಸಲಾಗಿತ್ತು. ಸಂಕ್ರಮಣ ಮುಗಿದ ಬಳಿಕ ಭಂಡಾರವನ್ನು ತರಲಾಯಿತು.
ಚಿನ್ನಾಭರಣಗಳನ್ನು ಮರಳಿ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ಹುಂಡಿ ಎಣಿಕೆ ಮಾಡಲಾಯಿತು. ಅಕ್ಟೋಬರ್ ೨೯ ರಿಂದ ನವಂಬರ್ ೧೮ರವರೆಗೆ ತಲಕಾವೇರಿ ಮತ್ತು ಭಾಗಮಂಡಲ ಎರಡೂ ಕ್ಷೇತ್ರಗಳಲ್ಲಿ ಒಟ್ಟು ೧೦,೯೩,೩೨೬ ರೂ. ಸಂಗ್ರಹವಾಗಿದೆ. ತಲಕಾವೇರಿ ಕ್ಷೇತ್ರದಲ್ಲಿ ರೂ. ೫,೩೯,೮೧೦ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ರೂ. ೩,೯೭,೫೦೦ ಹಾಗೂ ಭಗಂಡೇಶ್ವರ ದೇವಾಲಯದ ಅನ್ನರ್ಸತರ್ಪಣೆ ಯಿಂದ ರೂ. ೧,೫೬,೦೧೬ ಸಂಗ್ರಹವಾಗಿದೆ. ಭಾಗಮಂಡಲದಲ್ಲಿ ಒಂದು ತಿಂಗಳ ಕಾಲ ನಂದಾದೀಪವನ್ನು ಇರಿಸಲಾಗಿದೆ ಹಾಗೂ ಅಕ್ಷಯ ಪಾತ್ರೆಯನ್ನು ಇರಿಸಲಾಗಿದ್ದು ಸಾಂಪ್ರದಾಯಿಕ ಆಚರಣೆ ಸೋಮವಾರ ಸಮಾಪ್ತಿಗೊಂಡಿದೆ. -ಸುನಿಲ್