ಪಡಿತರ ಚೀಟಿ ರದ್ದು ಗೊಂದಲ - ಸಚಿವರ ಸ್ಪಷ್ಟನೆ

ಬೆಂಗಳೂರು, ನ. ೧೮: ಕರ್ನಾಟಕದಲ್ಲಿನ ಬಡತನ ರೇಖೆಗಿಂತ ಮೇಲಿರುವವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಎಂಬ ಚರ್ಚೆ ನಡುವೆಯೇ ಯಾವುದೇ ಕಾರ್ಡ್ಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಅನರ್ಹರನ್ನು ಎಪಿಎಲ್‌ಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿ ವಿಚಾರವನ್ನು ಸಮ್ಮನೇ ರಾಜಕೀಯಗೊಳಿಸಲಾಗುತ್ತಿದೆ. ಸರ್ಕಾರ ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಅನರ್ಹ ಬಿಪಿಎಲ್ ಕಾರ್ಡುದಾರರನ್ನು ರದ್ದು ಮಾಡಿಲ್ಲ ಬದಲಾಗಿ ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ. ಸದ್ಯ ಜನಸಂಖ್ಯೆಯ ಸುಮಾರು ೮೦ ಪ್ರತಿಶತ ಜನರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ. ಆದಾಗ್ಯೂ, ಕೆಲವು ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಬಂದಿದೆ. ನಾವು ಅಂತಹ ಕಾರ್ಡ್ಗಳನ್ನು ಮರುವರ್ಗೀಕರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೋದಿ ಬ್ರೆಜಿಲ್ ಭೇಟಿ

ಬ್ರೆಜಿಲ್, ನ. ೧೮: ಆಫ್ರಿಕಾ ಖಂಡದ ನೈಜೀರಿಯಾ ಭೇಟಿ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ೨೦ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಭೇಟಿ ನೀಡಿದ್ದಾರೆ. ಬ್ರೆಜಿಲ್ ಭೇಟಿ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ಶೃಂಗಸಭೆಯಲ್ಲಿ ಚರ್ಚೆಗಳು ಮತ್ತು ವಿವಿಧ ವಿಶ್ವ ನಾಯಕರೊಂದಿಗೆ ಫಲಪ್ರದ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.

ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಗಿಭದ್ರತೆ

ನವದೆಹಲಿ, ನ. ೧೮ : ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು ೫,೦೦೦ಕ್ಕೂ ಸಿಬ್ಬಂದಿಯನ್ನು ಒಳಗೊಂಡ ೫೦ ಕೇಂದ್ರೀಯ ಸಶಸ್ತç ಪೊಲೀಸ್ ಪಡೆ ತುಕಡಿಗಳನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ. ಜಿರೀಬಾಮ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನವೆಂಬರ್ ೧೨ರಂದು ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ ೨೦ ಹೆಚ್ಚುವರಿ ಕೇಂದ್ರೀಯ ಸಶಸ್ತç ಪೊಲೀಸ್ ಪಡೆ ತುಕಡಿಗಳನ್ನು ರಾಜ್ಯಕ್ಕೆ ಕಳುಹಿಸಿತ್ತು. ಈ ಸಿಎಪಿಎಫ್ ತುಕಡಿಗಳಲ್ಲಿ ೧೫ ಸಿಆರ್‌ಪಿಎಫ್ ತುಕಡಿಗಳು ಮತ್ತು ೫ ಗಡಿ ಭದ್ರತಾ ಪಡೆ ತುಕಡಿಗಳು ಸೇರಿದ್ದವು. ಈ ವಾರದೊಳಗೆ ಹೆಚ್ಚುವರಿ ೫೦ ಸಿಎಪಿಎಫ್ ತುಕಡಿಗಳನ್ನು ಮಣಿಪುರಕ್ಕೆ ಕಳುಹಿಸುವಂತೆ ಆದೇಶಿಸಲಾಗಿದೆ.

ಗ್ಯಾರಂಟಿ ವಿರುದ್ಧ ಸುಳ್ಳು ಜಾಹೀರಾತು - ಮೊಕದ್ದಮೆ ಹೂಡುವ ಚಿಂತನೆ

ಬೆAಗಳೂರು, ನ. ೧೮: ತಮ್ಮ ಸರ್ಕಾರದ ಪ್ರಮುಖ ಐದು 'ಗ್ಯಾರಂಟಿ' ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತುಗಳನ್ನು ನೀಡಿದ ಆರೋಪದ ಮೇಲೆ ಮಹಾರಾಷ್ಟç ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಮಹಾ ಸರ್ಕಾರದ ವಿರುದ್ಧ ಕಾನೂನು ಕ್ರಮದ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಮತ ಪಡೆಯುವ ಸಲುವಾಗಿ ಮಹಾರಾಷ್ಟçದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಹದಗೆಟ್ಟ ಮಟ್ಟಕ್ಕೆ ತಲುಪಿದ ದೆಹಲಿಯ ಗಾಳಿಯ ಗುಣಮಟ್ಟ

ನವದೆಹಲಿ, ನ. ೧೮: ದೆಹಲಿಯ ಗಾಳಿಯ ಗುಣಮಟ್ಟ ಸೋಮವಾರ ತೀವ್ರ ಹದಗೆಟ್ಟ ಮಟ್ಟಕ್ಕೆ ತಲುಪಿದ್ದು, ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ೪೮೪ ದಾಖಲಾಗಿದೆ. ದೆಹಲಿಯೊಳಗೆ ಟ್ರಕ್ ಪ್ರವೇಶದ ನಿಷೇಧ ಮತ್ತು ಸಾರ್ವಜನಿಕ ಯೋಜನೆಗಳಲ್ಲಿ ನಿರ್ಮಾಣವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳು ಸೋಮವಾರ ಬೆಳಿಗ್ಗೆ ಜಾರಿಗೆ ಬಂದವು. ದಟ್ಟವಾದ ವಿಷಕಾರಿ ಹೊಗೆಯು ಬೆಳಿಗ್ಗೆ ಗೋಚರತೆ ತೀವ್ರವಾಗಿ ಕುಸಿಯಲು ಕಾರಣವಾಯಿತು. ಅಧಿಕಾರಿಗಳ ಪ್ರಕಾರ, ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ೧೫೦ ಮೀಟರ್ ಗೋಚರತೆ ಇತ್ತು. ಬೆಳಿಗ್ಗೆ ೮ ಗಂಟೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ೪೮೪ ರಷ್ಟಿದೆ, ಇದು ಈ ಋತುವಿನ ಅತ್ಯಂತ ಕಳಪೆ ಗುಣಮಟ್ಟವಾಗಿದೆ.

ಆಪ್ ತೊರೆದು ಬಿಜೆಪಿ ಸೇರಿದ ಕೈಲಾಶ್ ಗೆಹ್ಲೋಟ್

ನವದೆಹಲಿ, ನ. ೧೮: ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಮಾಜಿ ಸಚಿವ ಮತ್ತು ಆಪ್ ನಾಯಕ ಕೈಲಾಶ್ ಗೆಹ್ಲೋಟ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ನಿರ್ದೇಶನ ಮತ್ತು ಆಂತರಿಕ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಭಾನುವಾರ ಎಎಪಿಗೆ ರಾಜೀನಾಮೆ ನೀಡಿದ್ದ ಗೆಹ್ಲೋಟ್, ಇಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಎಎಪಿಗೆ ರಾಜೀನಾಮೆ ನೀಡಿದ ಕುರಿತು ಮಾತನಾಡಿದ ಕೈಲಾಶ್ ಗೆಹ್ಲೋಟ್, ಇದು ನನಗೆ ಸುಲಭದ ಹೆಜ್ಜೆಯಲ್ಲ. ನಾನು ಅಣ್ಣಾಜಿಯವರ ಕಾಲದಿಂದಲೂ ಎಎಪಿಯೊಂದಿಗೆ ಸಂಬAಧ ಹೊಂದಿದ್ದೇನೆ ಮತ್ತು ದೆಹಲಿಯ ಜನರಿಗಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ಒತ್ತಡದಲ್ಲಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ನಾನು ಎಎಪಿಗೆ ಸೇರಲು ನನ್ನ ವಕೀಲ ವೃತ್ತಿಯನ್ನು ತೊರೆದಿದ್ದೇನೆ ಮತ್ತು ನಮ್ಮ ಏಕೈಕ ಉದ್ದೇಶ ದೆಹಲಿಯ ಜನರಿಗೆ ಸೇವೆ ಸಲ್ಲಿಸುವುದಾಗಿದೆ ಎಂದರು.

೭ನೇ ಅಂತಸ್ತಿನಿAದ ಹಾರಿ ಯುವಕ ಸಾವು

ಬೆಂಗಳೂರು, ನ. ೧೮: ೧೬ ವರ್ಷದ ಯುವಕನೋರ್ವ ತನ್ನ ಅಪಾರ್ಟ್ಮೆಂಟ್‌ನ ೭ನೇ ಅಂತಸ್ತಿನಿAದ ಕೆಳಗೆ ಹಾರಿ ಪ್ರಾಣಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಗೆದ್ದಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಕೆಳಗೆ ಬಿದ್ದ ರಭಸಕ್ಕೆ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ಯುವಕನ ಈ ರೀತಿಯ ನಡೆಗೆ ಕಾರಣವೇನು ಎಂಬುದನ್ನು ತನಿಖೆ ಮಾಡುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಡ್ಡಾದಿಡ್ಡಿ ಲಾರಿ ಓಡಿಸಿದ ಚಾಲಕನ ಹತ್ಯೆ

ಚಿಕ್ಕೋಡಿ, ನ. ೧೮: ಅಡ್ಡಾದಿಡ್ಡಿಯಾಗಿ ಲಾರಿ ಓಡಿಸುತ್ತಿದ್ದ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಬಳಿ ನಡೆದಿದೆ. ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (೨೩) ಮೃತ ಲಾರಿ ಚಾಲಕ. ಕೊಲೆಯಾದ ಎಂಟು ಗಂಟೆಗಳಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಸಂಕೇಶ್ವರದಿAದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಅಜೀಮ್, ಚಾಲನೆ ವೇಳೆ ಬೈಕ್, ಕ್ಯಾಂಟರ್‌ಗೆ ಗುದ್ದಿ ಗಾಬರಿಯಿಂದ ಹೊರಟಿದ್ದ. ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಬೆನ್ನತ್ತಿ ಕಾಟಬಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ಪರಸಪ್ಪ ಹಾಗೂ ಹಣಮಂತ ತಡೆದಿದ್ದಾರೆ. ಬಳಿಕ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಅಜೀಂ ಮರ್ಮಾಂಗಕ್ಕೆ ಒದ್ದು, ಐವರು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅಜೀಂ ಅವರಿಗೆ ಬೆಳಗಾವಿಯ ಬೀಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದಾನೆ.