ಮಡಿಕೇರಿ, ನ. ೧೮: ನೆನೆಗುದಿಗೆ ಬಿದ್ದು, ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದ ರಸ್ತೆಯ ತಡೆಗೋಡೆ ಕಾಮಗಾರಿ ಮತ್ತೆ ಆರಂಭಗೊAಡಿದೆ. ನಗರದ ರೇಸ್‌ಕೋರ್ಸ್ ರಸ್ತೆಯ ಸಾಯಿ ಕ್ರೀಡಾಂಗಣದ ಬಳಿಯ ತಿರುವಿನಲ್ಲಿ ೨೦೧೮ರಲ್ಲಿ ಕುಸಿದಿದ್ದ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆಂದು ಅದಾಗಲೇ ರೂ. ೧ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತಾದರೂ ಮಳೆ, ಕಾರ್ಮಿಕರ ಕೊರತೆ ನೆಪದೊಂದಿಗೆ ಇದುವರೆಗೂ ಮುಂದೂಡಿಕೊAಡೇ ಬರಲಾಗಿತ್ತು. ಕಾಮಗಾರಿ ಜವಾಬ್ದಾರಿ ಹೊತ್ತುಕೊಂಡಿರುವ ನಿರ್ಮಿತಿ ಕೇಂದ್ರ ನೆಪದೊಂದಿಗೆ ಸುಮ್ಮನಾಗಿತ್ತು.
(ಮೊದಲ ಪುಟದಿಂದ) ಈ ನಡುವೆ ರಸ್ತೆ ಕುಸಿಯುವ ಅಪಾಯವನ್ನರಿತ ಪೊಲೀಸ್ ಇಲಾಖೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಗೂ ಜಲ್ಲಿಕಲ್ಲುಗಳನ್ನು ಅಳವಡಿಸಿ ರಸ್ತೆ ಬಂದ್ ಮಾಡಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.
ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಗೊAಡಿವೆ. ತಿರುವಿನಲ್ಲಿ ಕಾಂಕ್ರಿಟ್ ಗೋಡೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಾರ್ಡ್ನ ಸದಸ್ಯ ಕಾಳಚಂಡ ಅಪ್ಪಣ್ಣ ತಿಳಿಸಿದ್ದಾರೆ.