ಸೋಮವಾರಪೇಟೆ, ನ. ೧೮ : ಪುತ್ರನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದ ಅಪ್ಪ, ಮಗನ ಮದುವೆ ಸಂಭ್ರಮದ ನಡುವೆಯೇ ಮರುದಿನ ಹೃದಯಾಘಾತಕ್ಕೀಡಾಗಿ ಇಹಲೋಕ ತ್ಯಜಿಸಿದ ಘಟನೆ ನಡೆದಿದೆ.

ಪಟ್ಟಣ ಸಮೀಪದ ಬಜೆಗುಂಡಿ ಗ್ರಾಮದ ನಿವಾಸಿ, ಪ್ರಸ್ತುತ ಮೈಸೂರಿನ ಕೋಟೆಹುಂಡಿಯಲ್ಲಿ ನೆಲೆಸಿದ್ದ ಎಸ್.ಪಿ. ಸೋಮಶೇಖರ್(೫೮) ಅವರು ನಿನ್ನೆ ದಿನ ತಮ್ಮ ಪುತ್ರನ ಮದುವೆಯನ್ನು ತುಮಕೂರಿನಲ್ಲಿ ಅದ್ದೂರಿಯಾಗಿ ನಡೆಸಿದ್ದರು.

ಮದುವೆ ಸಂಭ್ರಮ ತುಂಬಿದ್ದ ಮನೆಯಲ್ಲಿ ಖುಷಿಯಾಗಿಯೇ ಓಡಾಡಿಕೊಂಡಿದ್ದ ಸೋಮಶೇಖರ್ ಅವರು, ಇಂದು ಮಧ್ಯಾಹ್ನ ದಿಢೀರನೇ ಹೃದಯಾಘಾತಕ್ಕೀಡಾಗಿ ಮನೆಯಲ್ಲೇ ಅಸುನೀಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೯ರಂದು (ಇಂದು) ಮೈಸೂರಿನ ವಿದ್ಯಾರಣ್ಯಪುರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.