ಚೆಯ್ಯಂಡಾಣೆ, ನ. ೧೮: ಸುನ್ನಿ ಜಂಇಯ್ಯತುಲ್ ಮುಹಲ್ಲಿಮೀನ್ ಮೂರ್ನಾಡು ರೇಂಜ್ ವತಿಯಿಂದ ಪ್ರತಿಭಾ ಸಂಗಮ ಕಾರ್ಯಕ್ರಮ ಬಲಮುರಿ ನೂರುಲ್ ಇಸ್ಲಾಂ ಮದರಸ ದಲ್ಲಿ ನಡೆಯಿತು. ಮೂರ್ನಾಡು ರೇಂಜ್ ಮುಹಲೀಮೀನ್ ಅಧ್ಯಕ್ಷ ಹನೀಫ್ ಸಖಾಫಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಸಖಾಫಿ ಕೊಯಿನಾಡು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಲಮುರಿ ಖತೀಬ್ ಬಷೀರ್ ಸಖಾಫಿ ಉದ್ಘಾಟಿಸಿದರು.

ಮೂರ್ನಾಡು ರೇಂಜ್ ಪ್ರಧಾನ ಕಾರ್ಯದರ್ಶಿ ಷಂಶುದ್ದೀನ್ ಅಮ್ಜದ್ದಿ ಮಾತನಾಡಿ, ಪ್ರತಿಭಾ ಸಂಗಮದಿAದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ಯಶಸ್ವಿಗೊಳಿಸಬೇಕೆಂದರು.

ಒಟ್ಟು ೧೬ ಮದರಸಗಳ, ೪೦ ಸ್ಪರ್ಧೆಗಳಲ್ಲಿ ೨೫೦ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಹಯಾತುಲ್ ಇಸ್ಲಾಂ ಕೊಂಡAಗೇರಿ ಮದರಸ ಪ್ರಥಮ ಸ್ಥಾನ ಪಡೆದುಕೊಂಡರೆ, ನೂರುಲ್ ಹುದಾ ಅಝಾದ್ ನಗರ ದ್ವಿತೀಯ, ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ್ ಕೊಂಡAಗೇರಿ ಮದರಸ ತೃತೀಯ ಸ್ಥಾನ ಪಡೆದುಕೊಂಡಿತು. ಬಲಮುರಿ ಪಾಲೆಮಾಡು ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್, ತಾಜುಲ್ ಉಲಮಾ ಎಜುಕೇಷನ್ ಸಂಸ್ಥೆಯ ಮುದರ್ರಿಸ್ ಮುರ್ಷಿದ್ ಅದನಿ, ನೂರುಲ್ ಇಸ್ಲಾಂ ಮದ್ರಸ ಮುಖ್ಯೋಪಾಧ್ಯಾಯ ಹನೀಫ್ ಫಾಲಿಲಿ, ರೇಂಜ್ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಕನ್ವಿನರ್ ಉನೈಸ್ ಸುಲ್ತಾನಿ ಸ್ವಾಗತಿಸಿ, ವಂದಿಸಿದರು.