ಮಡಿಕೇರಿ, ನ. ೧೮: ಯುಎಇಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳು ಸೇರಿ ೩ನೇ ವರ್ಷದ ಕೈಲ್ಮುಹೂರ್ತ ಹಬ್ಬವನ್ನು ಆಚರಿಸಿದರು. ಆಯುಧ ಪೂಜೆಯೊಂದಿಗೆ ದಿನ ಪ್ರಾರಂಭಿಸಿ, ಕ್ರೀಡಾ ಜ್ಯೋತಿ ಬೆಳಗುವುದರೊಂದಿಗೆ ಆಟೋಟ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಹೆಂಗಸರು ಮತ್ತು ಚಿಕ್ಕಮಕ್ಕಳು ಹಗ್ಗ ಜಗ್ಗಾಟ, ಮಡಕೆ ಒಡೆಯುವುದು ಇತ್ಯಾದಿಗಳಲ್ಲಿ ಭಾಗವಹಿಸಿದ್ದರು. ಸಾಂಪ್ರದಾಯಿಕ ಭೋಜನದ ನಂತರ ಸಾಂಸ್ಕೃತಿಕ ಚಟುವಟಿಕೆಗಳು ಪ್ರಾರಂಭವಾದವು. ಪುಟಾಣಿ ಮಕ್ಕಳ ನೃತ್ಯ ಪ್ರದರ್ಶನ ದಿನದ ಆಕರ್ಷಣೆಯಾಗಿತ್ತು.
ಕಾರ್ಯಕ್ರಮವನ್ನು ಅಚ್ಚಾಂಡಿರ, ಆನೇರ, ಬೆಳ್ಯನ, ಕಡ್ಲೇರ, ಕಲ್ಲಂಬಿ, ಕರ್ಣಯ್ಯನ, ಕತ್ರಿಕೊಲ್ಲಿ, ಕುದುಪಜೆ, ಕೊಂಪುಳಿರ ಮತ್ತು ಮೊಟ್ಟನ ಕುಟುಂಬಗಳು ಆಯೋಜಿಸಿದ್ದವು. ಯುಎಇಯಲ್ಲಿ ನೆಲೆಸಿರುವ ಎಲ್ಲಾ ಕೊಡಗು ಅರೆಭಾಷೆ ಗೌಡ ಕುಟುಂಬ ಗಳು ಭಾಗವಹಿಸಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಯಿತು.