ಶನಿವಾರಸಂತೆ, ನ. ೧೮: ಪಟ್ಟಣದ ಶ್ರೀಬೀರಲಿಂಗೇಶ್ವರ-ಪ್ರಬಲ ಭೈರವಿ ಹಾಗೂ ಪರಿವಾರ ದೇವರ ದೇವಾಲಯದ ಸೇವಾ ಸಮಿತಿ ವತಿಯಿಂದ ೬ ನೇ ವರ್ಷದ ವಾರ್ಷಿಕೋತ್ಸವ ಪೂಜಾಮಹೋತ್ಸವ ಸೋಮವಾರ ವಿಶೇಷ ಪೂಜೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಹೋಮ ಮತ್ತು ಮಹಾಪೂಜೆ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ಜರುಗಿತು.
ಬೆಳಿಗ್ಗೆ ೫-೩೦ ರಿಂದ ಗಂಗಾ ಪೂಜೆ, ಗೋಪೂಜೆ, ಮಂಗಳಾರತಿ ನಂತರ ಸಹಕಾರ ಬ್ಯಾಂಕ್ನಿAದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರಿಗೆ ಕಳಶ- ಕುಂಭ ಮೆರವಣಿಗೆ ನಡೆಯಿತು. ಶ್ರೀಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಸಂಕಲ್ಪ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು.
ನಂತರ ಸೇವಾ ಸಮಿತಿ ಪದಾಧಿಕಾರಿಗಳು, ಶನಿವಾರಸಂತೆ, ಬಿದರೂರು, ಹೆಮ್ಮನೆ ಗ್ರಾಮಗಳ ನೂರಾರು ಮಂದಿ ಭಕ್ತರು ಪ್ರಧಾನ ಅರ್ಚಕರಾದ ಮಾಲತೇಶ್ ಭಟ್ ನೇತೃತ್ವದಲ್ಲಿ ಮಂಗಳ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಗ್ರಾಮದ ೯ ದೇವಾಲಯಗಳಾದ ಉರೊಡೆಯ ದೇವರು, ಬ್ರಹ್ಮದೇವರು, ಬಿದರೂರು ಶ್ರೀಬಸವೇಶ್ವರ ದೇವರು, ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಶ್ರೀಬಸವೇಶ್ವರ ದೇವರು, ತ್ಯಾಗರಾಜ ಕಾಲೋನಿಯ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನ, ಶ್ರೀ ವಿಜಯ ವಿನಾಯಕ ದೇವರು, ಬನ್ನಿ ಮಂಟಪ ಹಾಗೂ ಶ್ರೀರಾಮ ಮಂದಿರದಲ್ಲಿ ಮಹಾಪೂಜೆ, ಮಹಾ ಮಂಗಳಾರತಿಯಾಗಿ ತೀರ್ಥ ಪ್ರಸಾದ ವಿನಿಯೋಗವಾಯಿತು.
ಮಧ್ಯಾಹ್ನ ಮುಖ್ಯ ರಸ್ತೆಯಲ್ಲಿರುವ ಜಾಮೀಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ನಂತರ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವರ ಮಹಾಪೂಜೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು. ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಸಂಜೆ ದೇವಸ್ಥಾನದಲ್ಲಿ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ನವಗ್ರಹ ಹಾಗೂ ಮೃತ್ಯುಂಜಯ ಪೂಜೆ, ನವಗ್ರಹ, ಮೃತ್ಯುಂಜಯ ಹೋಮ, ಗಣಪತಿ, ಹೋಮ, ಧನ್ವಂತರಿ, ಹೋಮ, ಮೂಲದೇವರಿಗೆ ಫಲ ಪಂಚಾಮೃತ ಅಭಿಷೇಕ, ಏಕವಾರು ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾಮಂಗಳಾರತಿ ನಡೆದು ತೀರ್ಥ-ಪ್ರಸಾದ ವಿನಿಯೋಗವಾಗಿ ವಾರ್ಷಿಕ ಮಹೋತ್ಸವ-ಪೂಜಾ ಮಹೋತ್ಸವ ಸಂಪನ್ನವಾಯಿತು.
ಪ್ರಧಾನ ಅರ್ಚಕ ಮಾಲತೇಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಬೀರಲಿಂಗೇಶ್ವರ-ಪ್ರಬಲ ಭೈರವಿ ಹಾಗೂ ಪರಿವಾರ ದೇವರ ದೇವಾಲಯದ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಎಸ್.ಸಿ.ಶರತ್ ಶೇಖರ್, ಅಧ್ಯಕ್ಷ ಎಂ.ಸಿ.ಕಾAತರಾಜ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ದಿವಾಕರ್, ನಿರ್ದೇಶಕರು ಹಾಜರಿದ್ದರು.
ಜಾಮೀಯಾ ಮಸೀದಿಯಲ್ಲಿ ಧಾರ್ಮಿಕ ಸಭೆ: ಮಧ್ಯಾಹ್ನ ಮುಖ್ಯ ರಸ್ತೆಯಲ್ಲಿರುವ ಜಾಮೀಯಾ ಮಸೀದಿಗೆ ಶ್ರೀಬೀರಲಿಂಗೇಶ್ವರ-ಪ್ರಬಲ ಭೈರವಿ ಹಾಗೂ ಪರಿವಾರ ದೇವರ ದೇವಾಲಯದ ಸೇವಾ ಸಮಿತಿಯ ದೇವರ ಮೆರವಣಿಗೆ ಆಗಮಿಸಿತು. ಮಸೀದಿಯಲ್ಲಿ ಧರ್ಮಗುರುಗಳಾದ ಜಾಫರ್ ಹುಸೇನ್ ಹಾಗೂ ಸಾದಿಕ್ ಮಹಮ್ಮದ್ ಅವರಿಂದ ವಿಶೇಷ ಪ್ರಾರ್ಥನೆ ನಡೆದು, ಮಸೀದಿ ಅಧ್ಯಕ್ಷ ರಿಷಲತ್ ಪಾಷ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಅರ್ಚಕ ಮಾಲತೇಶ್ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.
ಸಭೆಯಲ್ಲಿ ಶ್ರೀಬೀರಲಿಂಗೇಶ್ವರ ದೇವಾಲಯ ಸ್ಥಾಪಕ ಸಮಿತಿ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಹಾಗೂ ಬೆಳೆಗಾರ ಎ.ಎಂ. ಆನಂದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೇವಾ ಸಮಿತಿ ಅಧ್ಯಕ್ಷ ಎಂ.ಸಿ.ಕಾAತರಾಜ್ ಹಾಗೂ ಕಾರ್ಯದರ್ಶಿ ದಿವಾಕರ್ ಮಾತನಾಡಿ, ಪಟ್ಟಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂ-ಮುಸ್ಲಿA ಸಮುದಾಯದವರು ಪರಸ್ಪರ ಸಹಕಾರದಿಂದ ಪಾಲ್ಗೊಳ್ಳುತ್ತಿದ್ದಾರೆ. ಮಸೀದಿಯಲ್ಲಿ ಸತ್ಕರಿಸುವುದರ ಜೊತೆಗೆ ಪೂಜಾ ಕಾರ್ಯಕ್ರಮದಲ್ಲಿ ಸ್ನೇಹ-ಪ್ರೀತಿ ಬಾಂಧವ್ಯದಿAದ ಭಾಗಿಯಾಗಿ ಸಾಮರಸ್ಯ, ಸೌಹಾರ್ದತೆ ಮೆರೆದಿದ್ದಾರೆ ಎಂದರು.
ಮಸೀದಿ ಸಮಿತಿಯ ಪ್ರಮುಖರಾದ ಅಮೀರ್ ಸಾಬ್, ಅಕ್ಮಲ್ ಪಾಶ, ಸಾದಿಕ್, ಬ್ಯಾಡಗೊಟ್ಟ ಝಹೀರ್ ಇತರ ಸದಸ್ಯರು ಹಾಜರಿದ್ದರು.