ಕೊಡ್ಲಿಪೇಟೆ, ನ. ೧೯: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಪಡೆಯ ಕಾರ್ಯಕರ್ತರಿಗೆ ಗ್ರಾಮ ಆರೋಗ್ಯ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೆ. ಮಂಜುಳ, ಸಮುದಾಯದ ಯೋಗಕ್ಷೇಮಕ್ಕಾಗಿ ಒಗ್ಗೂಡಿಸುವಿಕೆ ಎಂಬ ಧ್ಯೇಯ ವಾಕ್ಯದಡಿ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಅನುಷ್ಠಾನಗೊಳಿಸಲು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಾಗಾರ ಆಯೋಜಿಸ ಲಾಗುತ್ತಿದೆ ಎಂದರು. ಸಮುದಾಯ ಆರೋಗ್ಯ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಹೆಚ್ಚಿದ್ದು, ಮಧುಮೇಹ, ಕ್ಷಯ, ಅಧಿಕ ರಕ್ತದೊತ್ತಡ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಬ್ಯಾಡಗೊಟ್ಟ ಅಂಗನವಾಡಿ ಕಾರ್ಯಕರ್ತೆ ಚಿನ್ನಮ್ಮ ಅವರು ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಪಾತ್ರದ ಕುರಿತು ಮಾಹಿತಿ ಒದಗಿಸಿದರು.
ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಮೇದಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರುಗಳಾದ ಎಂ.ಎA. ಹನೀಫ್, ಪಾವನ, ಲೀನಾ, ಮೋಕ್ಷಿಕ್ ರಾಜ್, ದಿನೇಶ್ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಅಂಗನವಾಡಿ ಕಾರ್ಯಕರ್ತೆ ನಿರ್ಮಲ, ಶೋಭಾ, ವನಿತಾ, ವನಜಾಕ್ಷಿ, ಆಶಾ ಕಾರ್ಯಕರ್ತೆ ಯರಾದ ಲಲಿತಾ, ಅನಿತಾ, ವಿಜಯಲಕ್ಷಿö್ಮÃ, ಚನ್ನಾಜಿ, ಶಾಹಿದಾ, ಪಂಚಾಯಿತಿ ಸಿಬ್ಬಂದಿಗಳಾದ ರಾಜೇಶ್, ರಂಜಿತಾ, ಸಚಿನ್, ಸೇರಿದಂತೆ ಕಾರ್ಯಪಡೆ ಸದಸ್ಯರುಗಳು ಉಪಸ್ಥಿತರಿದ್ದರು.