ಮಡಿಕೇರಿ, ನ. ೧೯: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳಿಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರಾಕ್ಷೇಪಣಾ ಪತ್ರ ನೀಡಲು ರೂ.೫೦೦ ಕ್ಕಿಂತ ಅಧಿಕ ಮೊತ್ತ ಪಡೆಯದಿರುವಂತೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಂಬAಧಿಸಿದ ಇಲಾಖೆಗಳಿಗೆ ಸುತ್ತೋಲೆ ಮೂಲಕ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎನ್.ಒ.ಸಿ ನೀಡಲು ಹೋಂ ಸ್ಟೇ ಮಾಲೀಕರಿಗೆ ಅಧಿಕ ಮೊತ್ತವನ್ನು ವಿಧಿಸುತ್ತಿರುವ ಕುರಿತು ಹಲವಾರು ದೂರುಗಳು ಬಂದ ಮೇರೆಗೆ ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. ನಿರಾಕ್ಷೇಪಣಾ ಪತ್ರವು ಅರ್ಜಿದಾರರ ಮಾಲೀಕತ್ವವನ್ನು ಸೂಚಿಸುವ ದಾಖಲೆಯಾಗಿದ್ದು, ಅರ್ಜಿದಾರರು ಪಾವತಿಸಿರುವ ವಾಸದ ಕಟ್ಟಡ ತೆರಿಗೆಗಳ ವಿವರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನೀಡಿರುವ ಹಿಂಬರಹ ಪತ್ರ ಹಾಗೂ ಮಾಲೀಕತ್ವದ ದಾಖಲಾತಿಗಳನ್ನು ಪರಿಶೀಲಿಸಿ ನಿರಾಕ್ಷೇಪಣಾ ಪತ್ರವನ್ನು ನೀಡಬೇಕು, ಹೋಂಸ್ಟೇಯನ್ನು ವಾಣಿಜ್ಯ ಕಟ್ಟಡವಾಗಿ ಪರಿಗಣಿಸಬಾರದಾಗಿಯೂ ಹಾಗೂ ಹೆಚ್ಚುವರಿ ತೆರಿಗೆ ವಿಧಿಸಬಾರದಾಗಿಯೂ ಸುತ್ತೋಲೆ ಮೂಲಕ ಎನ್.ಒ.ಸಿ ನೀಡುವ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ನಿರಾಕ್ಷೇಪಣಾ ಪತ್ರ ನೀಡುವುದು ಆಡಳಿತಾತ್ಮಕ ವಿಷಯವಾಗಿದ್ದು, ಸಂಬAಧಪಟ್ಟ ಅಧಿಕಾರಿಯು ನಿಯಮಾನುಸಾರ ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ತಮ್ಮ ಹಂತದಲ್ಲಿಯೇ ನಿರಾಕ್ಷೇಪಣಾ ಪತ್ರವನ್ನು ನೀಡಬೇಕು ಎಂದು ಕೂಡ ತಿಳಿಸಲಾಗಿದೆ.