ಸುಂಟಿಕೊಪ್ಪ, ನ. ೧೯: ಕೊಡಗು ಜಿಲ್ಲಾ ಆಶೋದಯ ಸಮಿತಿಯ ವತಿಯಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ ಮತ್ತು ಕೆ.ಎಂ. ಅಲಿಕುಟ್ಟಿ ಅವರ ನೇತೃತ್ವದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಆನಂದ ಬಸಪ್ಪ ಅವರು ಚಾಲನೆ ನೀಡಿದರು.

ಆರೋಗ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಕೆ.ಕೆ. ಪ್ರಸಾದ್ ಕುಟ್ಟಪ್ಪ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಂ. ಆಲಿಕುಟ್ಟಿ. ಎಂ. ನಾಗರತ್ನ ಸುರೇಶ್, ಪೊನ್ನಪ್ಪ, ಮಂಜುನಾಥ್, ಆಶೋದಯ ಸೇವಾ ಸಮಿತಿಯ ಕುಶಾಲನಗರ ಆರೋಗ್ಯ ಕೇಂದ್ರದ ಆಪ್ತಸಮಲೋಚಕರಾದ ಮುತ್ತಮ್ಮ, ಕಣ್ಣಿನ ತಜ್ಞರಾದ ಪುಷ್ಪೆಂದ್ರ ಯಾದವ್, ತಂಡದ ಉಸ್ತುವಾರಿ ಅಸೀಸ್, ಆಶೋದಯ ಸಮಿತಿಯ ವಿದ್ಯಾ, ನಾಗರತ್ನ ಹಾಗೂ ಇನ್ನಿತರರು ಹಾಜರಿದ್ದರು.

ಪನ್ಯ ಮತ್ತು ಟಿ.ಸಿ.ಎಲ್. ಸುತ್ತಲಿನ ಸುಮಾರು ೨೦೦ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಕಣ್ಣು, ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹ (ಸಕ್ಕರೆ ಕಾಯಿಲೆ) ಇತ್ಯಾದಿ ಪರೀಕ್ಷೆಗೆ ಒಳಪಟ್ಟರು ಅಲ್ಲದೇ ಕನ್ನಡಕವನ್ನು ವಿತರಣೆ ಮಾಡಲಾಯಿತು.