ಮಡಿಕೇರಿ, ನ. ೧೯: ದೇಶದ ರಕ್ಷಣಾ ಪಡೆಯಲ್ಲಿ ಪ್ರಮುಖವಾಗಿರುವ ಭೂಸೇನೆಗೆ ಸಂಬAಧಿಸಿದ ವಿಭಾಗವಾಗಿರುವ ಮೆಡ್ರಾಸ್ ಇಂಜಿನಿಯರಿAಗ್ ಗ್ರೂಪ್(ಎಂ.ಇ.ಜಿ)ನ ರೈಸಿಂಗ್ ಡೇ ಅಂಗವಾಗಿ ಬೆಂಗಳೂರಿನ ಎಂ.ಇ.ಜಿ. ತಂಡದಿAದ ರಾಜ್ಯದ ವಿವಿಧೆಡೆ ಬೈಕ್ ಜಾಥಾ ನಡೆಸಲಾಗುತ್ತಿದೆ. ತಾ. ೧೭ ರಂದು ಬೆಳಗಾವಿಯಿಂದ ಜಾಥಾ ಆರಂಭಗೊAಡಿದ್ದು, ತಾ. ೧೮ ರಂದು ಮಂಗಳೂರುವಿನಲ್ಲಿ ಕಾರ್ಯಕ್ರಮದ ಬಳಿಕ ಈ
(ಮೊದಲ ಪುಟದಿಂದ) ಜಾಥಾ ಇಂದು ಸೇನಾ ಜಿಲ್ಲೆ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ತಲುಪಿತು. ಸುಬೇದಾರ್ ಯಾಕೂಬ್, ನಾಯಕ್ ದಯಾನಂದ್ ನೇತೃತ್ವದಲ್ಲಿ ೮ ಬೈಕ್ಗಳಲ್ಲಿ ೧೬ ಯೋಧರು ಜಾಥಾ ಮೂಲಕ ಆಗಮಿಸಿದ್ದರು. ಈ ತಂಡವನ್ನು ಜ. ತಿಮ್ಮಯ್ಯ ವೃತ್ತದಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮೂಲಕ ಸ್ವಾಗತಿಸಲಾಯಿತು.
ಕೊಡಗು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಪಾನಿಕುಟ್ಟಿರ ಕುಟ್ಟಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಹಾಗೂ ಇನ್ನಿತರ ನಿವೃತ್ತ ಯೋಧರು, ಕುಟುಂಬದವರು, ಸಾರ್ವಜನಿಕರು ಈ ತಂಡವನ್ನು ಬರಮಾಡಿಕೊಂಡರು. ಬಳಿಕ ಇವರೊಂದಿಗೆ ಸೇರಿ ಜಿ.ಟಿ. ವೃತ್ತ, ಮೇಜರ್ ಮುತ್ತಣ್ಣ ವೃತ್ತ, ಸ್ಕಾ÷್ವ.ಲೀ. ದೇವಯ್ಯ ವೃತ್ತ, ಎಸ್.ಬಿ.ಐ., ಕಾವೇರಿ ಹಾಲ್, ಎಲ್ಐಸಿ ಮಾರ್ಗವಾಗಿ ಗಾಂಧಿ ಮೈದಾನಕ್ಕೆ ತೆರಳಿ ಅಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಓ.ಎಸ್. ಚಿಂಗಪ್ಪ, ಕೊಟ್ಟುಕತ್ತಿರ ಸೋಮಣ್ಣ, ಪಾನಿಕುಟ್ಟಿರ ಕುಟ್ಟಪ್ಪ ಅವರುಗಳು ಎಂ.ಇ.ಜಿ., ವಿಭಾಗದ ಸೇವೆ ಸಾಧನೆ ಕುರಿತು ಮಾತನಾಡಿದರು. ಈ ಗ್ರೂಪ್ನ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರುಗಳಾದ ಹಾನರರಿ ಕ್ಯಾಪ್ಟನ್ಗಳಾದ ಅಂತರರಾಷ್ಟಿçÃಯ ಶೂಟರ್ ಎ.ಪಿ. ಸುಬ್ಬಯ್ಯ, ಕ್ರೀಡಾಪಟು ಹೊಸೊಕ್ಲು ಚಿಣ್ಣಪ್ಪ, ತಂಬಾAಡ ನಾಣಯ್ಯ ಅವರುಗಳನ್ನು ಮತ್ತು ೬ ಮಂದಿ ವೀರನಾರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನೆರೆದಿದ್ದವರಿಗೆ ಎಂ.ಇ.ಜಿ.ಯ ಕ್ಯಾಪ್ ವಿತರಿಸಲಾಯಿತು. ಬಳಿಕ ಜಾಥಾ ಹಾಸನದತ್ತ ತೆರಳಿತು.
ತಾ. ೨೦ ರಂದು (ಇಂದು) ಬೆಂಗಳೂರಿನ ಎಂಇಜಿ ಸೆಂಟರ್ನಲ್ಲಿ ರೈಸಿಂಗ್ ಡೇ ಕಾರ್ಯಕ್ರಮ ಜರುಗಲಿದ್ದು, ಅಲ್ಲಿ ಜಾಥಾ ಮುಕ್ತಾಯಗೊಳ್ಳಲಿದೆ.