*ಗೋಣಿಕೊಪ್ಪ, ನ. ೧೯: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ‘ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವ’ ಆಚರಿಸಲಾಯಿತು. ಎಲ್ಲೆಲ್ಲೂ ಕನ್ನಡ ಚಿಂತನೆಯಲ್ಲಿ ವಾರದ ಪ್ರತಿ ಬುಧವಾರ ಕನ್ನಡದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

ಶಾಲಾ ಸಭೆ ಅದರಲ್ಲಿ ವಿಶೇಷವಾಗಿ ನಾಟಕ, ಏಕಪಾತ್ರ ಅಭಿನಯ, ನೃತ್ಯ, ನಾಲ್ಕು ಗುಂಪುಗಳಿAದ ವಿವಿಧ ಚಟುವಟಿಕೆಗಳು, ಕನ್ನಡದಲ್ಲಿ ಕವನ, ಅಭಿನಯ, ಕನ್ನಡ ನಾಡು ಕುರಿತು ಭಾಷಣ, ಪ್ರಾರ್ಥನೆ, ಪ್ರತಿಜ್ಞೆ, ಶುಭನುಡಿ, ವಾರ್ತೆಗಳು, ಸಾಮಾನ್ಯ ಜ್ಞಾನದ ಪ್ರಶ್ನೆ ಮತ್ತು ಉತ್ತರಗಳು, ದಿನದ ವಿಶೇಷತೆ, ಸತ್ಯ ಸಂಗತಿಗಳು ಮುಂತಾದ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಯಿತು.

ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿ ಕನ್ನಡ ಅಭಿಮಾನ ಮೂಡಿಸಿದರು. ಶಾಲೆ ಮುಖ್ಯಸ್ಥೆ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಮುಖ್ಯ ಶಿಕ್ಷಕಿ ಪುಷ್ಪಾ ಇದ್ದರು.