ಮಡಿಕೇರಿ, ನ. ೧೯: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಳ ಕೇರಿ ವಿವಿಧೊದ್ದೇಶ ಸಹಕಾರ ಸಂಘ ನಿ., ಇವರ ಸಂಯುಕ್ತಾಶ್ರಯದಲ್ಲಿ ೭೧ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ’ ದಿನಾಚರಣೆಯನ್ನು ವೆಸ್ಟ್ ಕೊಳಕೇರಿಯ ಭಗವತಿ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಎ.ಕೆ. ಮನು ಮುತ್ತಪ್ಪ ಅವರು, ಸಹಕಾರ ದವಸ ಭಂಡಾರ ವನ್ನು ಭತ್ತದ ರೂಪದಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಪ್ರಾರಂಭಿ ಸಲಾಯಿತು. ಅಂದು ತುತ್ತು ಅನ್ನಕ್ಕೂ ಕ್ಷಾಮ ತಲೆದೋರಿದ ಸಂದರ್ಭದಲ್ಲಿ ಸಹಕಾರ ದವಸ ಭಂಡಾರಗಳು ಜನರ ನೆರವಿಗೆ ಬಂದು ಪ್ರತಿಯೊಂದು ಗ್ರಾಮ ಮಟ್ಟದಲ್ಲಿಯೂ ಸ್ಥಾಪನೆಯಾಯಿತು. ಹಿರಿಯರು ಮುಂದಾಲೋಚನೆ ಯೊಂದಿಗೆ ಸ್ಥಾಪಿಸಲ್ಪಟ್ಟ ಸಂಘವು ಇಂದು ಹಲವು ವಿಧದ ಸಹಕಾರ ಸಂಘ ಗಳ ಸ್ಥಾಪನೆ, ಪೈಪೋಟಿಯಿಂದಾಗಿ ಬಹುತೇಕ ಸಹಕಾರ ದವಸ ಭಂಡಾರ ಗಳು ವಿನಾಶದ ಅಂಚಿನಲ್ಲಿವೆ. ಅಂತಹ ದರಲ್ಲಿ ಕೊಳಕೇರಿ ವಿವಿಧೊದ್ದೇಶ ಸಹಕಾರ ದವಸ ಭಂಡಾರದ ಸಾಧನೆ ಗಮನಾರ್ಹವಾಗಿದೆ. ತಮ್ಮ ಸ್ವಂತ ಸಂಪ ನ್ಮೂಲದಿಂದ ಉತ್ತಮ ಕಟ್ಟಡವನ್ನು ಹೊಂದಿ, ಗೊಬ್ಬರ, ಹತ್ಯಾರು ಮತ್ತು ಸದಸ್ಯರಿಗೆ ಸಾಲ ನೀಡುವ ಕಾರ್ಯ ಚಟುವಟಿಕೆ ನಡೆಸುತ್ತಾ ಮಾದರಿ ಸಂಘ ವಾಗಿದೆ. ಹಲವು ವಿಧದ ಕುಟುಂಬ ಸಹಕಾರ ದವಸ ಭಂಡಾರಗಳು, ಹಾಗೂ ಹಲವು ದವಸ ಭಂಡಾರಗಳು ಸ್ಥಾಪನೆ ಯಾಗಿ ಶತದಿನವನ್ನು ಪೂರೈಸಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿ ಸಿದ್ದ ಕೊಳಕೇರಿ ವಿವಿಧೊದ್ಧೇಶ ಸº Àಕಾರ ದವಸ ಭಂಡಾರದ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ, ಸಹಕಾರ ಮನೆಯಿಂದ ಆರಂಭವಾಗಿ ಊರಿಗೆ ಬಂದು ನಾಡಿಗೆ ಹರಡಿ ದೇಶವ್ಯಾಪಿಯಾಗಿದೆ. ಆಡುಮುಟ್ಟದ ಸೊಪ್ಪಿಲ್ಲ ಎಂಬAತೆ ಸಹಕಾರ ಕ್ಷೇತ್ರ ಪದಾರ್ಪಣೆ ಮಾಡದ ವಲಯವಿಲ್ಲ. ಎಲ್ಲಾ ವಲಯದಲ್ಲೂ ಸಹಕಾರ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ. ಕೊಳಕೇರಿ ಸಹಕಾರ ದವಸ ಭಂಡಾರದಲ್ಲಿ ಸಂಪನ್ಮೂಲ ಕೊರತೆಯಿದ್ದು ಈ ನಿಟ್ಟಿನಲ್ಲಿ ಡಿ.ಸಿ.ಸಿ. ಬ್ಯಾಂಕ್ ಹಾಗೂ ನಾಪೋಕ್ಲು ಪ್ಯಾಕ್ಸ್ನ ಸಹಕಾರ ಅಗತ್ಯವೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷರಾದ ಕೆ.ಎಸ್. ಹರೀಶ್ ಪೂವಯ್ಯ ಅವರು ಮಾತನಾಡಿ, ಹಿರಿಯರು ಕಟ್ಟಿ ಬೆಳೆಸಿದಂತಹ ಸಹಕಾರ ಸಂಘಗಳನ್ನು ನಾವು ಬೆಳೆಸಬೇಕಾಗಿದೆ. ಅದರಲ್ಲೂ ಸಹಕಾರ ದವಸ ಭಂಡಾರಗಳ ಸ್ಥಿತಿ ಹೀನಾಯವಾಗಿದೆ. ವಿವಿಧೊದ್ದೇಶ ಸಹಕಾರ ಸಂಘವಾಗಿ ಮಾರ್ಪಾಡು ಮಾಡಿದ್ದರೂ ಸಹ ಅವುಗಳ ಪ್ರಗತಿ ಕಡಿಮೆಯಾಗುತ್ತಿದೆ. ವಿವಿಧ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ, ಬಂಡವಾಳ ಸಂಗ್ರಹಣೆಯಲ್ಲಿ ವಿಫಲತೆಯಿಂದಾಗಿ ಅವುಗಳ ಪ್ರಗತಿ ಕುಂಠಿತವಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿAದ ಹಲವು ರೀತಿಯ ಸಹಾಯವನ್ನು ಒದಗಿಸಲಾಗುತ್ತಿದ್ದು ಅವುಗಳ ಸದುಪಯೋಗವಾಗಬೇಕೆಂದು ಸಲಹೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ ಅವರು ಮಾತನಾಡಿ, ಕೊಳಕೇರಿ ಸಹಕಾರ ದವಸ ಭಂಡಾರವು ಇನ್ನೂ ಹಿಂದೆ ಸ್ಥಾಪನೆಯಾಗಿದ್ದು ದಾಖಲಾತಿಗಳ ಕೊರತೆಯಿಂದಾಗಿ ಸಂಘದ ಸ್ಥಾಪನೆ ಕುರಿತು ಗೊಂದಲ ಉಂಟಾಗಿದೆ. ಇಂತಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ವನ್ನು ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಕೊಳಕೇರಿ ಸಹಕಾರ ದವಸ ಭಂಡಾರವನ್ನು ಶ್ಲಾಘಿಸಬೇಕಾಗಿದೆ. ಅದು ಜಿಲ್ಲೆಯಲ್ಲಿಯೇ ಉತ್ತಮ ಸಂಘವಾಗಿ ಬೆಳೆಯುತ್ತಿದೆ. ಹಾಗೂ ಸಾಲ ನೀಡುವಿಕೆ, ಗೊಬ್ಬರ ವ್ಯಾಪಾರ ನಡೆಸುತ್ತಾ ಅಲ್ಪಮಟ್ಟದಲ್ಲಿ ಲಾಭಗಳಿಸುತ್ತಾ ಮುಂದುವರೆಯು ತ್ತಿರುವುದು ಶ್ಲಾಘನೀಯ ಎಂದರು.

ಸಹಕಾರ ಸಪ್ತಾಹದಲ್ಲಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ’ ವಿಷಯದ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾ ಲರಾದ ಎಂ.ಎA. ಶ್ಯಾಮಲಾರವರು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಶ್ರೀಮತಿ ಪ್ರೇಮ ಸೋಮಯ್ಯ, ಕೆ.ಎಂ. ತಮ್ಮಯ್ಯ, ಕೊಳಕೇರಿ ಸಹಕಾರ ದವಸ ಭಂಡಾರದ ಉಪಾಧ್ಯಕ್ಷರಾದ ಕೆ.ಸಿ. ಪೂವಯ್ಯ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೊಳಕೇರಿ ವಿವಿಧೊದ್ದೇಶ ಸಹಕಾರ ದವಸ ಭಂಡಾರದ ಕಾರ್ಯದರ್ಶಿ ಪೊನ್ನಣ್ಣರವರು ಸ್ವಾಗತಿಸಿ, ರೇಖ ಪೊನ್ನಣ್ಣ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ, ಸಿಬ್ಬಂದಿಗಳಾದ ಬಿ.ಸಿ. ಅರುಣ್ ಕುಮಾರ್, ಕೆ.ಎಸ್. ಸುರೇಶ್ ಉಪಸ್ಥಿತರಿದ್ದರು.