ಕೂಡಿಗೆ, ನ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿದೇವನ ಹೊಸೂರು, ಹುದುಗೂರು ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿAದ ಕಾಡಾನೆ ಉಪಟಳ ಎಲ್ಲೆ ಮೀರಿದೆ.

ಆನೆಕಾಡು ಮೀಸಲು ಅರಣ್ಯ ಪ್ರದೇಶದ ಕಡೆ ಯಿಂದ ಬಂದಿ ರುವ ಕಾಡಾನೆಗಳು ಹಾರಂಗಿ ನದಿಯ ಸಮೀಪದ ಬೆಂಡೆ ಬೆಟ್ಟ ಅರಣ್ಯದ ಮೂಲಕ ಹಾರಂಗಿ ನದಿಯನ್ನು ದಾಟಿ ಸಮೀಪದ ಭತ್ತದ ಗದ್ದೆಗಳಿಗೆ ಲಗ್ಗೆಯಿಟ್ಟು ಬೆಳೆಯನ್ನು ನಾಶಪಡಿಸಿದೆ. ಯಡವನಾಡು ಮೀಸಲು ಅರಣ್ಯ ಪ್ರದೇಶಗಳ ಕಡೆಯಿಂದಲೂ ಸಹ ಕಾಡಾನೆಗಳ ಹಿಂಡು ಈಗಾಗಲೇ ಕಟಾವು ಹಂತಕ್ಕೆ ಬಂದಿರುವ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದೆ.

ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಸೇರಿದಂತೆ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.