ಐಗೂರು, ನ. ೨೦: ಸೇವಾ ಭಾರತಿ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಐಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದ ಉದ್ಘಾಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್, ಮಾಜಿ ಗ್ರಾ.ಪಂ. ಉಪಾಧ್ಯಕ್ಷರುಗಳಾದ ಎಂ.ಎ. ಪ್ರಭಾಕರ ಮತ್ತು ಟಿ.ಆರ್. ವಿಜಯ ಕುಮಾರ್ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಹಿತೇಶ್, ಡಾ. ಆದಿತ್ಯ ಬಿರಾದರ್, ಡಾ. ಸಿದ್ದಾಂತ್, ಡಾ. ಹರ್ಷ, ಮತ್ತುಡಾ. ಸೃಷ್ಟಿ ಬಿರಾದಾರ್ ಭಾಗವಹಿಸಿದ್ದರು.