ಸೋಮವಾರಪೇಟೆ, ನ. ೨೦: ತಾಲೂಕಿನ ವಿವಿಧೆಡೆಗಳಲ್ಲಿ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್, ದಕ್ಷಿಣ ಪ್ರಾಂತ, ಮಡಿಕೇರಿ ವಿಭಾಗವು ಸೇವಾ ಭಾರತಿ ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ೧೧ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ನಡೆಯಿತು.
ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೆಂಚಮ್ಮನ ಬಾಣೆ ಸಮುದಾಯ ಭವನದಲ್ಲಿ ಬಲಮುರಿ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ. ಸೋಮಶೇಖರ್ ಚಾಲನೆ ನೀಡಿದರೆ, ಬಳಗುಂದ ಸ.ಹಿ.ಪ್ರಾ. ಶಾಲೆಯಲ್ಲಿ ಬೇಳೂರು ಗ್ರಾ.ಪಂ. ಮಾಜ ಅಧ್ಯಕ್ಷ ಬಿ.ಎಂ.ಪ್ರಶಾAತ್ ಚಾಲನೆ ನೀಡಿದರು. ಡಾ. ಸಾಯಿ ಕೃಷ್ಣ, ಡಾ. ರೋಹಿತ್, ಡಾ. ನಿಂಗನಗೌಡ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವೈದ್ಯರುಗಳು ತಪಾಸಣೆ ನಡೆಸಿದರು.
ತಾಲೂಕಿನ ಮಾದಾಪುರ, ಐಗೂರು, ಚೌಡ್ಲು, ಕಿಬ್ಬೆಟ್ಟ, ಶನಿವಾರಸಂತೆ, ನಿಡ್ತ, ತೋಳೂರುಶೆಟ್ಟಳ್ಳಿ, ಬೆಟ್ಟದಳ್ಳಿ, ಸೋಮವಾರಪೇಟೆ ಪಟ್ಟಣದ ಜನತಾ ಕಾಲೋನಿಯಲ್ಲಿ ಶಿಬಿರ ನಡೆಯಿತು.
ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿಕೊಂಡು ಉಚಿತ ಔಷಧಿ ಪಡೆದರು. ಶಿಬಿರದ ಯಶಸ್ಸಿಗೆ ಸಮುದಾಯ ಆರೋಗ್ಯ ಅಧಿಕಾರಿಗಳು, ಗ್ರಾಮ ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ವಯಂ ಸೇವಕರುಗಳು ಶ್ರಮ ವಹಿಸಿದ್ದರು. ಶಿಬಿರದಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ಗಳನ್ನು ನೋಂದಾಯಿಸಿ ಕೊಡಲಾಯಿತು.