ಪೊನ್ನಂಪೇಟೆ,ನ. ೨೦: ಗೋಣಿಕೊಪ್ಪಲು ಕಾವೇರಿ ಕಾಲೇಜು ಐ ಕ್ಯೂ ಎ ಸಿ, ಬಿಸಿಎ ಹಾಗೂ ಬಿ.ಎಸ್ಸಿ ಐಟಿ ವಿಭಾಗದ ವತಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ೧೦ನೇ ವರ್ಷದ ರಾಜ್ಯಮಟ್ಟದ ಅಚಿಂತ್ಯ ಟೆಕ್ ಫೆಸ್ಟ್ ನ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಪೊನ್ನಂಪೇಟೆ ಹಳ್ಳಿಗಟ್ಟು ಸಿ ಐ ಪಿ ಯು ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿತು. ಮಡಿಕೇರಿ ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ನೃತ್ಯ ಸ್ಪರ್ಧೆಯಲ್ಲಿ ಅರ್ವತೊಕ್ಕಲು ವಿದ್ಯಾನಿಕೇತನ ಕಾಲೇಜು ಪ್ರಥಮ, ಸಿ ಐ ಪಿ ಯು ಕಾಲೇಜು ದ್ವಿತೀಯ, ಗಾಯನ ಸ್ಪರ್ಧೆಯಲ್ಲಿ ಮಡಿಕೇರಿ ಸೆಂಟ್ ಜೋಸೆಫ್ ಕಾಲೇಜು ಪ್ರಥಮ, ಹಳ್ಳಿಗಟ್ಟು ಸಿಐಪಿಯು ಕಾಲೇಜು ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಹಳ್ಳಿಗಟ್ಟು ಸಿಐಪಿಯು ಕಾಲೇಜು ಪ್ರಥಮ, ಕಳತ್ಮಾಡು ಲಯನ್ಸ್ ಕಾಲೇಜು ದ್ವಿತೀಯ, ಫೇಸ್ ಪೇಂಟಿAಗ್‌ನಲ್ಲಿ ಹಳ್ಳಿಗಟ್ಟು ಸಿಐಪಿಯು ಕಾಲೇಜು ಪ್ರಥಮ, ಮಡಿಕೇರಿ ಸೆಂಟ್ ಜೋಸೆಫ್ ಕಾಲೇಜು ದ್ವಿತೀಯ, ಪೇಪರ್ ಪ್ರೆಸೆಂಟೇಶನ್‌ನಲ್ಲಿ ಮಡಿಕೇರಿ ಸೆಂಟ್ ಜೋಸೆಫ್ ಕಾಲೇಜು ಪ್ರಥಮ, ಅರ್ವತೊಕ್ಕಲು ವಿದ್ಯಾನಿಕೇತನ ಕಾಲೇಜು ದ್ವಿತೀಯ, ಬಾಕ್ಸ್ ಕ್ರಿಕೆಟ್‌ನಲ್ಲಿ ಹಳ್ಳಿಗಟ್ಟು ಸಿಐಪಿಯು ಕಾಲೇಜು ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜು ದ್ವಿತೀಯ, ಶಾರ್ಟ್ ಮೂವಿ ಸ್ಪರ್ಧೆಯಲ್ಲಿ ವಿದ್ಯಾನಿಕೇತನ ಕಾಲೇಜು ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜು ದ್ವಿತೀಯ, ಗೇಮಿಂಗ್ ಸ್ಪರ್ಧೆಯಲ್ಲಿ ಮಡಿಕೇರಿ ಸೆಂಟ್ ಜೋಸೆಫ್ ಕಾಲೇಜು ಪ್ರಥಮ, ವಿದ್ಯಾನಿಕೇತನ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಮುಕ್ತ ರಿಮೋಟ್ ಕಂಟ್ರೋಲ್ ಕಾರ್ ರೇಸ್‌ನಲ್ಲಿ ಹಳ್ಳಿಗಟ್ಟು ಸಿಐಪಿಯು ಕಾಲೇಜು ಪ್ರಥಮ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ೨೦೨೪ ನೇ ಸಾಲಿನ ರಾಜ್ಯ ಸರ್ಕಾರದ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತರಾದ ಟಿ. ಶೆಟ್ಟಿಗೇರಿ ಗ್ರಾಮದ ಸಮಾಜ ಸೇವಕರಾದ ಕೈಬುಲಿರ ಪಾರ್ವತಿ ಬೋಪಯ್ಯ ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಪಾರ್ವತಿ ಬೋಪಯ್ಯ ಅವರನ್ನು ಬಿಸಿಎ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ. ಡಿ. ರೇಷ್ಮಾ, ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಇದ್ದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ, ಮೂರ್ನಾಡು ಸಿಗ್ಮ ನೆಟ್‌ವರ್ಕ್ನ ಮಾಲೀಕರಾದ ಅವರೆಮಾದಂಡ ಶರಣ್ ಪೂಣಚ್ಚ, ಪೂಜಾ ಶರಣ್, ಕೋಡ್ ನಿಸ್ ಟೆಕ್ನಾಲಜಿ ಪ್ರೆöÊವೇಟ್ ಲಿಮಿಟೆಡ್‌ನ ಸ್ಥಾಪಕ ಪಿ.ಎಸ್. ಉತ್ತಪ್ಪ, ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಉಪನ್ಯಾಸಕರು ಹಾಗೂ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭ ಗಾಯಕ ಅನ್ವಿತ್ ಕುಮಾರ್ ತಂಡದಿAದ ಸಂಗೀತ ರಸಮಂಜರಿ ನಡೆಯಿತು.