ಕೂಡಿಗೆ, ನ. ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗ್ಗಡೆಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೇಶ್ವರ ದೇವಾಲಯ ಆವರಣದಲ್ಲಿ ವರ್ಷಂಪ್ರತಿಯAತೆ ಜರುಗುವ ಶ್ರೀ ಅಣ್ಣಪ್ಪ- ಪಂಜುರ್ಲಿ ಕಲ್ಲುರ್ಟಿ ಹಾಗೂ ಚಾಮುಂಡಿ ಗುಳಿಗ ದೈವಗಳ ನರ್ತನ ಸೇವೆಯ (ಕೋಲ) ಪೂಜಾ ಕಾರ್ಯಕ್ರಮವು ಎಲ್ಲೂಬಾಯಿ ನವರ ಆರ್ಶಿವಾದದೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ನಡೆದವು.

ಧಾರ್ಮಿಕ ಕಾರ್ಯದ ಅಂಗವಾಗಿ ದೇವಾಲಯದ ಆವರಣದಲ್ಲಿ ಗಣಯಾಗ, ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಪೂಜಾ ಕೈಂಕರ್ಯಗಳನ್ನು ಉಜರೆಯ ರಾಮಚಂದ್ರ ತಂತ್ರಿಗಳ ತಂಡದವರು ನೆರವೇರಿಸಿದರು. ಮಹಾಪೂಜೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂರ್ತಪಣೆ ಕಾರ್ಯ ನಡೆಯಿತು.

ರಾತ್ರಿ ಶ್ರೀ ಅಣ್ಣಪ್ಪ, ಪಂಜುರ್ಲಿ, ಕಲ್ಲುರ್ಟಿ ಹಾಗೂ ಚಾಮುಂಡಿ, ಗುಳಿಗ ದೈವಗಳ ನರ್ತನ ಸೇವೆ (ಕೋಲ) ಪೂಜ್ಯೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ಕೂಡಿಗೆ ಸೇರಿದಂತೆ ಉಜಿರೆ, ಮಂಗಳೂರು, ಮೈಸೂರು ಧರ್ಮಸ್ಥಳ, ಪುತ್ತೂರು ಭಾಗದ ಭಕ್ತರು ಆಗಮಿಸಿದ್ದರು.