ಮಡಿಕೇರಿ, ನ. ೨೦: ಇತ್ತೀಚೆಗೆ ತಮಿಳುನಾಡಿನ ಸೇಲಮ್‌ನಲ್ಲಿ ಜರುಗಿದ ಮಾಸ್ಟರ್ಸ್ ಪಾನ್ ಇಂಡಿಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಮೂಲತಃ ಕೊಡಗಿನವರಾದ ಮಾಜಿ ಅಂರ‍್ರಾಷ್ಟಿçÃಯ ಬ್ಯಾಡ್ಮಿಂಟನ್ ಆಟಗಾರ ಮಾಳೆಯಂಡ ಅರುಣ್ ಪೂವಯ್ಯ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಅರುಣ್ ಅವರು ಈ ಹಿಂದೆ ಹುಬ್ಬಳ್ಳಿ, ಪುಣೆ, ಪಂಚಕುಲ ಹಾಗೂ ಬೆಂಗಳೂರಿನಲ್ಲಿ ನಡೆದಿದ್ದ ಪಾನ್ ಇಂಡಿಯಾ ಮಾಸ್ಟರ್ಸ್ ಕ್ರೀಡೆಗಳಲ್ಲಿಯೂ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಜಯಶಾಲಿ ಯಾಗಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅರುಣ್ ಪೂವಯ್ಯ ಅವರು, ಮಾಸ್ಟರ್ಸ್ ಕ್ರೀಡೆಯಲ್ಲಿ ೬ ಬಾರಿ ರಾಷ್ಟಿçÃಯ ಚಾಂಪಿಯನ್ ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಬೆಳ್ಳಿ ಹಾಗೂ ಕಂಚು ಪದಕ ಗಳಿಸಿದ ಸಾಧನೆಗೈದಿದ್ದಾರೆ.