ಮಡಿಕೇರಿ, ನ. ೨೦: ಮಡಿಕೇರಿಯ ಪುಟಾಣಿ ನಗರ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಮತ್ತು ಪೋಷಕರ ಸಹಕಾರದೊಂದಿಗೆ ಬಾಲಮೇಳ ಕಾರ್ಯಕ್ರಮ ನೆರವೇರಿತು.
ಛದ್ಮವೇಷ, ನೃತ್ಯ, ಹಾಡು, ಆಟೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಬಹುಮಾನಗಳನ್ನು ವಿತರಿಸಲಾಯಿತು. ಪುಟಾಣಿ ನಗರದ ನಗರಸಭಾ ಸದಸ್ಯೆ ಮಂಜುಳಾ, ಮತ್ತು ಸಮಿತಿಯ ಸದಸ್ಯರಾದ ಪೊನ್ನಮ್ಮ ಅವರು ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು.
ಬಾಲವಿಕಾಸ ಸಮಿತಿ ಸದಸ್ಯರಾದ ಟಿ.ಪಿ. ರಮೇಶ್, ಬಡೇಸಾಬ್, ವಿಮಿಲಿಯ, ಸಿಂಧಿಯಾ, ಸ್ತಿçà ಶಕ್ತಿ ಪ್ರತಿನಿಧಿ ಲತಾ ಅವರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಭಾಗವಹಿಸಿ ಸಮುದಾಯದವರೆಲ್ಲ ಸೇರಿ ಬಾಲ ಮೇಳ ಕಾರ್ಯಕ್ರಮವನ್ನು ಉತ್ತಮವಾಗಿ ನೆರವೇರಿಸಿ ಅಂಗನವಾಡಿಯ ಮೆರುಗನ್ನು ಹೆಚ್ಚಿಸಿದ್ದಾರೆ ಎಂದರು ಹಾಗೂ ಅಂಗನವಾಡಿ ಕೇಂದ್ರವನ್ನು ಮಾದರಿಯ ಅಂಗನವಾಡಿ ಕೇಂದ್ರವನ್ನಾಗಿ ಮಾಡಲು ಇದೇ ರೀತಿ ಸಹಕರಿಸಬೇಕಾಗಿ ಕೋರಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಅಂಗನವಾಡಿ ಕಾರ್ಯಕರ್ತೆ ಉಮಾ, ಸಹಾಯಕಿ ದೇವಕಿಯವರು, ಪೋಷಕರ ಸಮಿತಿಯವರ ಸಮುದಾಯದವರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯಕ್ರಮವನ್ನು ನಡೆಸಿರುತ್ತಾರೆ ಎಂದು ಶ್ಲಾಘಿಸಿದರು.